ಚಿಕ್ಕಮಗಳೂರು/ಬೆಂಗಳೂರು: ಚಿಕ್ಕಮಗಳೂರಿನ ಲಿಂಗದಹಳ್ಳಿ ಪೊಲೀಸ್ ಠಾಣಾ ಪೇದೆ ಸಿದ್ದೇಶ್ ಎಂಬಾತ ತನ್ನ ವೈಯಕ್ತಿಕ ದ್ವೇಷವನ್ನು ತೀರಿಸಿಕೊಳ್ಳಲು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. ವೈಯಕ್ತಿಕ ದ್ವೇಷಕ್ಕೆ ಪೇದೆ ಸಿದ್ದೇಶ್, ಗಂಗಣ್ಣ ಎಂಬಾತನ ಮನೆಗೆ ನಾಡ ಬಂದೂಕು ಇರಿಸಿ ಸಿಕ್ಕಿ ಹಾಕಿಸಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಪೊಲೀಸ್ ಪೇದೆ ಸಿದ್ದೇಶ್ ಅಣತಿಯಂತೆ ರುದ್ರೇಶ್ ಹಾಗೂ ಮಾರಪ್ಪ ಎಂಬುವವರು ಗಂಗಣ್ಣ ಮನೆಯಲ್ಲಿ ಬಂದೂಕು ಇಟ್ಟಿದ್ದಾರೆ. ವಿಷಯ ಗೊತ್ತಾದ ಮೇಲೆ ಆರೋಪಿಗಳನ್ನು ಐಜಿ ಹಾಗೂ ಎಸ್‌ಪಿ ಮುಂದೆ ಹಾಜರು ಪಡಿಸಿದಾಗ ಬಂದೂಕು ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರಕರಣ ಬಯಲಿಗೆ ಬಂದರೂ ಪೇದೆ ಸಿದ್ದೇಶ್ ಮೇಲೆ ಹಿರಿಯ ಅಧಿಕಾರಿಗಳು ಯಾರು ಕ್ರಮ ಕೈಗೊಂಡಿಲ್ಲ ಎಂದು ಗಂಗಣ್ಣ ಕಿಡಿಕಾರಿದ್ದಾರೆ.
ಹೀಗಾಗಿ ಜನರ ತಪ್ಪುಗಳನ್ನು ತಿದ್ದಬೇಕಾದ ಪೊಲೀಸರೇ ತಪ್ಪು ಮಾಡಿದರೆ ನ್ಯಾಯ ಬೇಕೆಂದು ಠಾಣಾ ಮೆಟ್ಟಿಲೇರುವ ಜನಸಾಮಾನ್ಯನ ಗತಿಯೇನು ಎಂಬ ಪ್ರಶ್ನೆ ಕಾಡುತ್ತದೆ. ಹಿರಿಯ ಅಧಿಕಾರಿಗಳು ಕ್ರಮಕೈಗೊಳ್ಳದ ಕಾರಣಕ್ಕೆ ಜನಸಾಮಾನ್ಯರಿಗೆ ಒಂದು ನ್ಯಾಯ ಪೊಲೀಸರಿಗೆ ಒಂದು ನ್ಯಾಯ ಎನ್ನುವಂತಾಗಿದೆ. ಖುದ್ದು ಆರೋಪಿಗಳೇ ಐಜಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗಂಗಣ್ಣ ಸಹಿತ ಗ್ರಾಮಸ್ಥರು ಆರೋಪಿಸಿದ್ದಾರೆ. ಸದ್ಯ ಗಂಗಣ್ಣ ಮನೆಗೆ ಬಂದೂಕು ಇಟ್ಟಿದ್ದ ಆರೋಪಿಗಳ ವಿಡಿಯೊ ವೈರಲ್ ಆಗಿದೆ.
ಹಣಕಾಸು ವಿಚಾರಕ್ಕೆ ಕಿರಿಕ್; ನಡುರಸ್ತೆಯಲ್ಲೆ ರೌಡಿಶೀಟರ್‌ಗಳ ಮಾರಾಮಾರಿ
ಬೆಂಗಳೂರು: ಇಲ್ಲಿನ ಚಾಮರಾಜಪೇಟೆ (Chamrajnagar) ಧೋಬಿ ಘಾಟ್ ಬಳಿ ರೌಡಿಶೀಟರ್‌ಗಳು (Rowdy Sheeter) ಬಡಿದಾಡಿಕೊಂಡಿದ್ದಾರೆ. ರೌಡಿಶೀಟರ್ ಲೊಡ್ಡೆ ಪ್ರವೀಣ ಎಂಬಾತನ ಮೇಲೆ ಕೆ.ಡಿ ಮಂಜ ಹಾಗೂ ಆತನ ಟೀಮ್ ಅಟ್ಯಾಕ್ ಮಾಡಿದೆ.
ಇದನ್ನೂ ಓದಿ: SC ST Reservation: ಶಿವಮೊಗ್ಗ ಮತ್ತೆ ಉದ್ವಿಗ್ನ; ಮೀಸಲಾತಿ ವಿರೋಧಿಸಿ ರಸ್ತೆ ತಡೆದು ಬಂಜಾರ ಸಮುದಾಯದ ಆಕ್ರೋಶ
ಹಣಕಾಸು ವಿಚಾರಕ್ಕೆ ರೌಡಿಶೀಟರ್‌ಗಳು ಕಿತ್ತಾಡಿಕೊಂಡಿದ್ದು, ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಅಟ್ಯಾಕ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಯಗೊಂಡಿರುವ ಕೆ.ಜಿ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಪ್ರವೀಣನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ