ಬೆಂಗಳೂರು: ಪಾರ್ಕ್‌ನಲ್ಲಿ ಹುಡುಗ-ಹುಡುಗಿ ಕುಳಿತಿದ್ದಾಗ ಅವರನ್ನು ಪೊಲೀಸರ ಹೆಸರಿನಲ್ಲಿ ಬೆದರಿಸಿ ಹಣ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಹೋಮ್ ಗಾರ್ಡ್‌ನನ್ನು ಬಂಧಿಸಲಾಗಿದೆ. ಜನವರಿ 29ರಂದು ಅರ್ಷ ಲತೀಫ್ ಎಂಬಾಕೆ ಆಕೆಯ ಗೆಳೆಯನೊಂದಿಗೆ ಕುಂದನಹಳ್ಳಿ ಲೇಕ್ ಪಾರ್ಕ್ ಕುಳಿತಿದ್ದಾಗ ಅಲ್ಲಿಗೆ ಬಂದ ಹೋಮ್ ಗಾರ್ಡ್ ಮಂಜುನಾಥ್ ರೆಡ್ಡಿ ಅವರ ಕೈಯಿಂದ ಹಣ ವಸೂಲಿ ಮಾಡಿದ್ದ. ಈ ವಿಚಾರವನ್ನು ಯುವತಿ ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಸಮೇತ ಪೋಸ್ಟ್ ಮಾಡಿ ನೈತಿಕ ಪೊಲೀಸ್‌ಗಿರಿಯನ್ನು ಪ್ರಶ್ನಿಸಿದ್ದರು. ಇದರ ಆಧಾರದಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ಯುವತಿ ಹಾಗೂ ಆಕೆಯ ಗೆಳೆಯ ಕುಳಿತಿದ್ದ ಜಾಗಕ್ಕೆ ಬಂದು ಪೋಟೊ ಕ್ಲಿಕ್ಕಿಸಿದ್ದ ಆತ ನಂತರ ಸ್ಥಳದಲ್ಲೇ ವಿಚಾರಣೆ ಮಾಡಿ ಸ್ಟೇಷನ್‌ಗೆ ಬರುವಂತೆ ಹೆದರಿಸಿದ್ದ. ಪಾರ್ಕ್‌ನಲ್ಲಿ ಕುಳಿತುಕೊಳ್ಳಲು ಪರ್ಮಿಷನ್ ಬೇಕು. ಠಾಣೆಗೆ ಬಂದರೆ ಹಿರಿಯ ಅಧಿಕಾರಿಗಳಿಗೆ ಉತ್ತರಿಸಬೇಕಾಗುತ್ತೆ. ಇಲ್ಲೇ ಆದರೆ ಸಾವಿರ ರೂ. ದಂಡ ಕಟ್ಟುವಂತೆ ಹೇಳಿದ್ದ. ಯುವತಿ ಹಾಗೂ ಆಕೆಯ ಗೆಳೆಯ ಹೆದರಿ 1000 ರೂಪಾಯಿ ದುಡ್ಡು ಕೊಟ್ಟಿದ್ದರು.
ಇದನ್ನೂ ಓದಿ: Suicide Attempt: ಸರಗಳ್ಳತನ ಮಾಡಿ ಲಾಕ್ ಆಗಿದ್ದ ಕಳ್ಳ ಪೊಲೀಸ್ ಠಾಣೆಯಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನ
ಘಟನೆಯಿಂದ ಬೇಸತ್ತ ಅರ್ಷ ಲತೀಫ್ ಪೊಲೀಸರ ನಡವಳಿಕೆ ಕುರಿತು ಟ್ವಿಟರ್‌ನಲ್ಲಿ ಅಳಲು ತೋಡಿಕೊಂಡಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಹೋಮ್ ಗಾರ್ಡ್ ಮಂಜುನಾಥ್ ರೆಡ್ಡಿಯನ್ನು ಬಂಧಿಸಿ ಎಫ್‌ಐಆರ್ ದಾಖಲು ಮಾಡಿದ್ದಾರೆ. ಪೊಲೀಸರ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದ ಎಂಬುದು ತಿಳಿದು ಬಂದಿದೆ.