Site icon Vistara News

ನಟಿ ಅನುಷ್ಕಾ ಶೆಟ್ಟಿ ಸೋದರನ ಕೊಲೆ ಯತ್ನ, ಮಾಹಿತಿ ಸಂಗ್ರಹಿಸಿದ ಮಂಗಳೂರು ಪೊಲೀಸ್‌

ಅನುಷ್ಕಾ ಸಹೋದರ

ಮಂಗಳೂರು: ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್‌ ಶೆಟ್ಟಿ ಅವರ ಕೊಲೆಗೆ ಸಂಚು ನಡೆದಿದೆಯೆನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಬುಧವಾರ ಸ್ವತಃ ಗುಣರಂಜನ್‌ ಶೆಟ್ಟಿ ಅವರಿಂದ ಮಾಹಿತಿ ಪಡೆದರು.

ಗುಣರಂಜನ್ ಕೊಲೆಗೆ ಉದ್ಯಮಿ ಮುತ್ತಪ್ಪ ರೈ ಅವರ ಅಕ್ಕನ ಮಗ ಮನ್ವಿತ್‌ ರೈ ಸಂಚು ರೂಪಿಸಿದ್ದಾನೆ ಎಂದು ವದಂತಿ ಹಬ್ಬಿತ್ತು.‌ ಈ ಹಿಂದೆ ಮುತ್ತಪ್ಪ ರೈ ಆಪ್ತರಾಗಿ ಮತ್ತು ಜಯಕರ್ನಾಟಕ ಸಂಘಟನೆಯಲ್ಲಿ ಗುಣರಂಜನ್‌ ಶೆಟ್ಟಿ ಗುರುತಿಸಿಕೊಂಡಿದ್ದರು.
ಈ ಮಧ್ಯೆ ಮುತ್ತಪ್ಪ ರೈ ಅಕ್ಕನ ಮಗ ಅವರ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಜಯ ಕರ್ನಾಟಕ ಸಂಘಟನೆಯ ಸದಸ್ಯರು ಕಳೆದ ವಾರ ಗೃಹ ಸಚಿವರಿಗೆ ದೂರು ನೀಡಿದ್ದರು. ಈ ಪ್ರಕರಣ ಮಂಗಳೂರು ಪೊಲೀಸರಿಗೆ ಹಸ್ತಾಂತರವಾಗಿದ್ದು, ಮಂಗಳೂರು ಸಿಸಿಬಿ ಹೆಚ್ಚಿನ ವಿವರಣೆ ನೀಡಲು ಹಾಜರಾಗುವಂತೆ ಗುಣರಂಜನ್‌ ರೈಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಮಂಗಳೂರು ಸಿಸಿಬಿ ಮುಂದೆ ಹಾಜರಾಗಿ ಕೆಲವರು ತನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಗುಣರಂಜನ್ ಹೇಳಿಕೆ ನೀಡಿದ್ದಾರೆ. ‌

ಕೊಲೆಗೆ ಪ್ರಯತ್ನಕ್ಕೆ ಯಾರು ಕೈ ಹಾಕಿದ್ದಾರೆ ಎಂದು ಸ್ಪಷ್ಟವಾದ ಹೇಳಿಕೆ ನೀಡಲು ಗುಣರಂಜನ್ ನಿರಾಕರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಮನ್ವಿತ್‌ ರೈಯನ್ನು ವಿಚಾರಣೆ ನಡೆಸಲಾಗಿದ್ದು, ತಾನು ವಿದೇಶದಲ್ಲಿ ಉದ್ಯಮ ನಡೆಸುತ್ತಿದ್ದು, ಈಗಷ್ಟೇ ಊರಿಗೆ ಬಂದಿದ್ದೇನೆ. ನನಗೂ ಈ ಕೊಲೆ ಬೆದರಿಕೆಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಇದೀಗ ಗುಣರಂಜನ್‌ ರೈ ಅವರ ಹೇಳಿಕೆ ಪಡೆದುಕೊಂಡಿರುವ ಮಂಗಳೂರು ಸಿಸಿಬಿ ಹೆಚ್ಚಿನ ತನಿಖೆ ನಡೆಸಲು ಮುಂದಾಗಿದೆ.

ಇದನ್ನೂ ಓದಿ | ಸ್ಯಾನಿಟರಿ ಪ್ಯಾಡ್‌ನಲ್ಲಿ ಅಕ್ರಮ ಚಿನ್ನ! ಮಂಗಳೂರು ಏರ್‌ ಪೋರ್ಟ್‌ನಲ್ಲಿ₹ 1.3 ಕೋಟಿ ಮೌಲ್ಯದ ಬಂಗಾರ ಜಪ್ತಿ

Exit mobile version