Site icon Vistara News

Police Misbehavior: ಮಧ್ಯರಾತ್ರಿ ಮನೆಗೆ ನುಗ್ಗಿ ಪತ್ನಿ, ಮಗಳೊಂದಿಗೆ ಇನ್ಸ್‌ಪೆಕ್ಟರ್ ಅನುಚಿತ ವರ್ತನೆ; ಆಯುಕ್ತರಿಗೆ ದೂರು

Subramanya Nagar Police Station

#image_title

ಬೆಂಗಳೂರು: ಮಧ್ಯರಾತ್ರಿಯಂದು ಮನೆಗೆ ನುಗ್ಗಿದ ಇನ್ಸ್‌ಪೆಕ್ಟರ್‌ವೊಬ್ಬರು ಹೆಂಡತಿ, 8 ವರ್ಷದ ಮಗಳೊಂದಿಗೆ ಅಸಭ್ಯವಾಗಿ (Police misbehavior) ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸುಬ್ರಮಣ್ಯ ನಗರ ಪೊಲೀಸ್‌ ಠಾಣೆಯ (Subramanya Nagar Police Station) ಇನ್ಸ್‌ಪೆಕ್ಟರ್‌ ಶರಣಗೌಡ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ರಾಜಕುಮಾರ್‌ ಎಂಬುವವರು ದೂರು ನೀಡಿದ್ದಾರೆ.

ರಾಜಕುಮಾರ್ ಟೈಲರಿಂಗ್‌ ಕೆಲಸ ಮಾಡುತ್ತಿದ್ದು, ಅವರು ಇಲ್ಲದ ಸಮಯದಲ್ಲಿ ಮಧ್ಯರಾತ್ರಿ ಇನ್ಸ್‌ಪೆಕ್ಟರ್‌ ಶರಣಗೌಡ ಬಂಧಿಸಲು ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಮನೆಯಲ್ಲಿದ್ದ ರಾಜಕುಮಾರ್‌ ಅವರ ಹೆಂಡತಿ ಹಾಗೂ ಮಗಳ ಜತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರಿನಲ್ಲಿ ಏನಿದೆ?

ಕಳೆದ ಏ.27ರ ಮಧ್ಯರಾತ್ರಿ 2.50 ಗಂಟೆ ಸುಮಾರಿಗೆ ಇನ್ಸ್‌ಪೆಕ್ಟರ್‌ ಶರಣಗೌಡ, ಮಹಿಳಾ ಪೇದೆಯನ್ನು ಕರೆದುಕೊಂಡು ಬಾರದೆ, ಏಕಾಏಕಿ ಬಾಗಿಲು ಮುರಿದು ಒಳಗೆ ನುಗ್ಗಿದ್ದಾರೆ. ನನ್ನ ಪತ್ನಿ ಮತ್ತು ನನ್ನ ಮಗಳು ಮಲಗಿದ್ದಾಗ ಅಮಾನವೀಯವಾಗಿ ವರ್ತಿಸಿ ನನ್ನ ಮಗಳನ್ನು ಬಲವಂತವಾಗಿ ತಳ್ಳಿದ್ದಾರೆ. ಅದೇ ರೀತಿ ನಮ್ಮ ಮನೆಗೆ ಅತಿಕ್ರಮ ಪ್ರವೇಶ ಮಾಡುವ ಸಂದರ್ಭದಲ್ಲಿ ಒಳಗೆ ನಾನು ಮತ್ತು ನನ್ನ ಮಗಳು ಮಾತ್ರ ಇದ್ದೇವೆ ಎಂದು ಕಿಟಕಿಯಲ್ಲಿ ನನ್ನ ಪತ್ನಿ ತಿಳಿಸಿದರೂ, ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ರಾಜಕುಮಾರ್‌ ಆರೋಪಿಸಿದ್ದಾರೆ.

ಯಾವುದೇ ಕಾನೂನುಗಳನ್ನು ಪಾಲಿಸದೆ, ಕಾನೂನು ಅನ್ನು ಕೈಗೆ ಎತ್ತಿಕೊಂಡು ಅತಿಕ್ರಮ ಪ್ರವೇಶಿಸಿ, ಪತ್ನಿ, ಮಗಳ ಮೇಲೆ ದೌರ್ಜನ್ಯ ಎಸಗಿ ಮೊಬೈಲ್ ಫೋನ್‌ ಅನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ರಾಜ್‌ಕುಮಾರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಯಾವುದೇ ವಾರೆಂಟ್ ಇಲ್ಲದೆ ಬಂದಿರುವುದಲ್ಲದೆ, ಇನ್ನು ಯಾವುದೇ ಪ್ರಕರಣ ಬಾಕಿ ಇಲ್ಲದಿದ್ದರೂ, ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Mann Ki Baat Live Updates: ಮನ್‌ ಕೀ ಬಾತ್‌ ಎಂದರೆ ನನಗೆ ವ್ರತ, ಈಶ್ವರ ರೂಪಿ ಜನರ ಸೇವೆ ಎಂದ ಪ್ರಧಾನಿ ಮೋದಿ

ಈ ಬಗ್ಗೆ ಪ್ರಶ್ನೆ ಮಾಡಲು ರಾಜಕುಮಾರ್‌, ಇನ್ಸ್‌ಪೆಕ್ಟರ್‌ ಶರಣಗೌಡಗೆ ಕಾಲ್‌ ಮಾಡಿ ಯಾವ ಕೇಸ್‌ ಮೇಲೆ ವಾರೆಂಟ್‌ ಇದೆ ಕೇಳಿದರೆ ಅದಕ್ಕೆ ಸರಿಯಾಗಿ ಉತ್ತರ ನೀಡದೆ, ಯಾರಿಗೆ ಬೇಕಾದರೂ ದೂರು ಕೊಡು ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ಇತ್ತ ಮಗಳು ಮಲಗಿದ್ದಾಗ ಆಕೆಯ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದು ಯಾಕೆ ಎಂದು ಕಿಡಿಕಾರಿದ್ದಾರೆ. ಇನ್ಸ್‌ಪೆಕ್ಟರ್‌ ಶರಣಗೌಡ ಹಾಗೂ ರಾಜಕುಮಾರ್ ನಡುವಿನ 8 ನಿಮಿಷದ ಸಂಭಾಷಣೆ ಆಡಿಯೊ ವೈರಲ್ ಆಗಿದೆ.

Exit mobile version