Site icon Vistara News

Raid on Hassan Jail : ಹಾಸನ ಜೈಲಿಗೆ 60 ಪೊಲೀಸರ ಟೀಮ್‌ ದಾಳಿ; ಮೊಬೈಲ್‌‌, ಗಾಂಜಾ ಸೇರಿ ಅಪಾಯಕಾರಿ ವಸ್ತು ಪತ್ತೆ

Hasana District Jail

ಹಾಸನ: ಹಾಸನದ ಜಿಲ್ಲಾ ಕಾರಾಗೃಹದಲ್ಲಿ (Hassan District Jail) ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ದೊಡ್ಡ ತಂಡವೇ ಶುಕ್ರವಾರ ರಾತ್ರಿ ದಾಳಿ (Raid on Hassan Jail) ಮಾಡಿದೆ. ಈ ವೇಳೆ ಮೊಬೈಲ್‌, ಗಾಂಜಾ (Mobile, Ganja found in Hassan Jail) ಸೇರಿದಂತೆ ಹಲವು ಅಪಾಯಕಾರಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಹಾಸನ ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ಶುಕ್ರವಾರ ಮಧ್ಯರಾತ್ರಿ ದಿಢೀರ್ ದಾಳಿ ನಡೆಸಲಾಗಿದೆ. ಸುಮಾರು 60 ಜನ ಪೊಲೀಸರ ಏಕಾಏಕಿಯಾಗಿ ಜೈಲಿಗೆ ನುಗ್ಗಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಡೆದ ದಾಳಿ ವೇಳೆ 17 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಗಾಂಜಾ, ಬೀಡಿ, ಸಿಗರೇಟ್ ಸೇರಿದಂತೆ ಇನ್ನಿತರ ಮಾದಕ ವಸ್ತುಗಳು ಸಿಕ್ಕಿವೆ.

ಈ ಜೈಲಿಗೆ ಹೊರಗಡೆಯಿಂದ ಮಾದಕ ವಸ್ತುಗಳು ಪೂರೈಕೆಯಾಗುತ್ತಿವೆ. ಜತೆಗೆ ಜೈಲಿನ ಒಳಗಿದ್ದವರು ಹೊರಗಿನ ವ್ಯಕ್ತಿಗಳ ಜತೆಗೆ ಸಂಪರ್ಕ ಸಾಧಿಸಲು ಮೊಬೈಲ್‌ ವ್ಯವಸ್ಥೆಯೂ ಇದೆ. ಹಣ ಕೊಟ್ಟರೆ ಮನೆಯವರಿಗೆ ಕೈದಿಗಳ ಜತೆ ಮುಕ್ತವಾಗಿ ಮಾತನಾಡಲು ಅವಕಾಶ ಸಿಗುತ್ತದೆ ಎಂಬೆಲ್ಲ ಆರೋಪಗಳು ಕೇಳಿಬಂದಿದ್ದವು.

ಆರೋಪಿಗಳ ಚಟುವಟಿಕೆ ಗಮನಿಸಿ ಖಚಿತ ಮಹಿತಿಯೊಂದಿಗೆ ದಿಢೀರ್ ದಾಳಿ ನಡೆಸಿದ ಪೊಲೀಸರು ಅಲ್ಲಿಂದ ಹಲವು ವಸ್ತುಗಳನ್ನು ಹಿಡಿದುಕೊಂಡು ಬಂದಿದ್ದಾರೆ.

ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಎಸ್ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಪೊಲೀಸರ ದಾಳಿ ನಡೆದಿದೆ.

ಇದನ್ನೂ ಓದಿ : Murder Case: ಹಾಸನದಲ್ಲಿ ಎಚ್.ಡಿ.ರೇವಣ್ಣ ಆಪ್ತ, ಗ್ರಾನೈಟ್ ಉದ್ಯಮಿಯ ಭೀಕರ ಹತ್ಯೆ

ಕಾಡಾನೆ ದಾಳಿಯಿಂದ ಮಹಿಳೆ ಮೃತ್ಯು: ಪ್ರತಿಭಟನೆ ನಡೆಸಿದವರಿಗೆ ನ್ಯಾಯಾಂಗ ಬಂಧನ

ಹಾಸನ: ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಮಹಿಳೆಯರ ಶವವನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ ಆರೋಪದಲ್ಲಿ 11 ಮಂದಿ ಹೋರಾಟಗಾರರನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

ಹೋರಾಟಗಾರರಾದ ಯಡೇಹಳ್ಳಿ ಮಂಜುನಾಥ, ಜಾನೇಕೆರೆ ಸಾಗರ್ ಸೇರಿ 11 ಜನರನ್ನು ಬಂದಿಸಿದ್ದ ಪೊಲೀಸರು ಅವರ ವಿರುದ್ಧ ಪೊಲೀಸರ ಕರ್ತವ್ಯ ಕ್ಕೆ ಅಡ್ಡಿ ಆರೋಪ ಹೊರಿಸಿದ್ದಾರೆ. ಆನೆ ದಾಳಿಗೆ ಮೃತಪಟ್ಟ ಮಹಿಳೆಯ ಶವ ಇಟ್ಟು ಹೋರಾಟ ಮಾಡೋ ಎಚ್ಚರಿಕೆ ನೀಡಿದ್ದ ಹೋರಾಟಗಾರರ ಮೇಲೆ ಮೃತದೇಹ ಸಾಗಿಸುವ ವೇಳೆ ಆಂಬ್ಯುಲೆನ್ಸ್ ತಡೆಯಲು ಮುಂದಾದ ಆರೋಪದಲ್ಲಿ ಕೇಸ್ ದಾಖಲಿಸಲಾಗಿದೆ.

Exit mobile version