ಬೆಂಗಳೂರು: ಬೆಂಗಳೂರು ಪೊಲೀಸರು ಶನಿವಾರ ತಡರಾತ್ರಿ ವೀಕೆಂಡ್ ಆಪರೇಶನ್ ಮಾಡಿದ್ದಾರೆ. ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ (MG Road -Brigade road) ವಿವಿಧ ಅಡ್ಡೆಗಳ ಮೇಲೆ ದಾಳಿ ಮಾಡಿ, 25ಕ್ಕೂ ಹೆಚ್ಚು ಆಫ್ರಿಕನ್ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ. ವೇಶ್ಯಾವಾಟಿಕೆ, ಡ್ರಗ್ಸ್ ಸೇವನೆ ಮತ್ತು ಇತರ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪದಡಿ ದಾಳಿ ಮಾಡಿರುವ ಪೊಲೀಸರು, ಆಫ್ರಿಕನ್ ಪ್ರಜೆ (African Citizens)ಗಳನ್ನು ಅರೆಸ್ಟ್ ಮಾಡಿದ್ದಾರೆ. ಎಂಜಿ ರೋಡ್, ಬ್ರಿಗ್ರೇಡ್ ರಸ್ತೆಯಲ್ಲಿ ಪೊಲೀಸರು ದಾಳಿ ಮಾಡಿದ ವೇಳೆ ಹೈಡ್ರಾಮಾವೇ ನಡೆದು ಹೋಗಿದೆ. ಪೊಲೀಸರನ್ನು ನೋಡುತ್ತಿದ್ದಂತೆ ಆಫ್ರಿಕನ್ ಯುವತಿಯರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಕೆಲವು ಯುವತಿಯರಂತೂ ಆಗಷ್ಟೇ ಪಬ್ನಿಂದ ಹೊರಬಿದ್ದು, ಅಮಲು ಹತ್ತಿಸಿಕೊಂಡು ಬರುತ್ತಿದ್ದರು. ಖಾಕಿ ಪಡೆಯನ್ನು ನೋಡುತ್ತಿದ್ದಂತೆ ಜಗಳಕ್ಕೆ ನಿಂತಿದ್ದಾರೆ. ಈ ಮಧ್ಯೆ ಒಂದಷ್ಟು ಜನ ತಪ್ಪಿಸಿಕೊಳ್ಳಲೂ ನೋಡಿದ್ದಾರೆ. ಎಲ್ಲವನ್ನೂ ಪೊಲೀಸರು ಸಮರ್ಥವಾಗಿ ನಿಭಾಯಿಸಿದ್ದಾರೆ. ಕೂಗಾಡುತ್ತಿದ್ದ ಯುವತಿಯರನ್ನು ಪೊಲೀಸರು ಸಮಾಧಾನಗೊಳಿಸಿ ವಶಕ್ಕೆ ಪಡೆದಿದ್ದಾರೆ. ಹಾಗೇ, ಓಡಿ ಹೊರಟಿದ್ದವರನ್ನೂ ಹೆಡೆಮುರಿ ಕಟ್ಟಿದ್ದಾರೆ. ಈ ಮಧ್ಯೆ ಯುವತಿಯೊಬ್ಬಳು ಮಹಿಳಾ ಪಿಎಸ್ಐ ಕೈಕಚ್ಚಿದ್ದಾಳೆ.
ಇದನ್ನೂ ಓದಿ: Murder case | ಗಂಡನನ್ನು ಕೊಂದು ಹಸು ತುಳಿದು ಸಾಯಿಸಿದೆ ಎಂದು ಕಥೆ ಕಟ್ಟಿದ ಹೆಂಡತಿ: ಇದೆಂಥಾ ಕ್ರೈಮ್!
ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಈ ವೀಕೆಂಡ್ ಕಾರ್ಯಾಚರಣೆ ನಡೆದಿತ್ತು. ಒಬ್ಬರು ಡಿಸಿಪಿ, ಇಬ್ಬರು ಎಸ್ಪಿ, 6 ಜನ ಇನ್ಸ್ಪೆಕ್ಟರ್ಗಳು, 10 ಮಂದಿ ಪಿಎಸ್ಐ, 20 ಮಹಿಳಾ ಪೊಲೀಸ್ ಕಾನ್ಸ್ಟೆಬಲ್ಗಳು, 20 ಪುರುಷ ಸಿಬ್ಬಂದಿ ಈ ದಾಳಿಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರು ಒಟ್ಟು ಮೂರು ಕಡೆಯಿಂದ ದಾಳಿ ನಡೆಸಿದ್ದರು. ಎಂಜಿ ರೋಡ್ನಿಂದ ಒಂದು ತಂಡ, ಚರ್ಚ್ಸ್ಟ್ರೀಟ್ನಿಂದ ಮತ್ತೊಂದು ಮತ್ತು ಬ್ರಿಗೇಡ್ ರಸ್ತೆ ಜಂಕ್ಷನ್ನಿಂದ ಇನ್ನೊಂದು ಪೊಲೀಸ್ ತಂಡ ಏಕಕಾಲಕ್ಕೆ ದಾಳಿ ನಡೆಸಿತ್ತು. ಯಾರೊಬ್ಬರೂ ತಪ್ಪಿಸಿಕೊಳ್ಳಲು ಬಿಡಲಿಲ್ಲ. ವಶಕ್ಕೆ ಪಡೆಯಲಾದ ಆಫ್ರಿಕನ್ ಪ್ರಜೆಗಳನ್ನು ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇನ್ನಷ್ಟು ಕ್ರೈಂ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ