ಚಿತ್ರದುರ್ಗ: ಮೊಳಕಾಲ್ಮುರು ಶಾಸಕ ಎನ್.ವೈ ಗೋಪಾಲಕೃಷ್ಣ (MLA NY Gopalakrishna) ಅವರ ತಮ್ಮನ ಮಗ ಚೇತನ್ ಹುಟ್ಟುಹಬ್ಬವನ್ನು (Birthday Party) ಪೊಲೀಸರು (Police staff) ಆಚರಿಸಿದ ವಿದ್ಯಮಾನ ನಡೆದು ಚರ್ಚೆಗೆ ಕಾರಣವಾಗಿದೆ.
ಎನ್.ವೈ ಗೋಪಾಲಕೃಷ್ಣ ಅವರ ತಮ್ಮ ಎನ್.ವೈ ಪೆನ್ನೋಬಳ ಸ್ವಾಮಿ ಅವರ ಮಗ ಎನ್.ವೈ ಚೇತನ್ ಹುಟ್ಟುಹಬ್ಬ ಕೆಲವು ದಿನಗಳ ಹಿಂದೆ ನಡೆದಿತ್ತು. ಗೋಪಾಲಕೃಷ್ಣ ಅವರ ತೋಟದ ಮನೆಯಲ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಶ್ರೀರಾಂಪುರ ಹಾಗೂ ಮೊಳಕಾಲ್ಮೂರು ಪೊಲೀಸರು ಹುಟ್ಟು ಹಬ್ಬದಲ್ಲಿ ಭಾಗಿಯಾಗಿದ್ದರು.
ಮೊಳಕಾಲ್ಮೂರು ಕ್ಷೇತ್ರದ ಯುವ ನಾಯಕ ಎಂದೇ ಬಿಂಬಿತ ಆಗಿರುವ ಎನ್.ವೈ.ಚೇತನ್ ಅವರ ಹೆಸರಿನಲ್ಲಿ ಕೇಕ್ ಕೂಡಾ ಮಾಡಿಸಿ ತಂದಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.
ಹುಟ್ಟುಹಬ್ಬದಲ್ಲಿ ಒಟ್ಟು 7 ಮಂದಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು ಒಂದು ಕಡೆಯಾದರೆ ಅವರು ಸಮವಸ್ತ್ರ ಧರಿಸಿಯೇ ಅದ್ಧೂರಿಯಾಗಿ ಹುಟ್ಟುಹಬ್ಬ ಮಾಡಿದ್ದು ಚರ್ಚೆ ಹುಟ್ಟು ಹಾಕಿದೆ.
ಚೇತನ್ ಬರ್ತ್ ಡೇಯಲ್ಲಿ ಇಷ್ಟೊಂದು ಅಧಿಕಾರಿಗಳು ಭಾಗಿಯಾಗಿದ್ದು ಯಾಕೆ..? ಕರ್ತವ್ಯದಲ್ಲಿ ಇರಬೇಕಾದ ಪೊಲೀಸರು ಬರ್ತಡೇಯಲ್ಲಿ ಭಾಗಿಯಾಗಿದ್ದು ಸರಿಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿವೆ. ಖಾಸಗಿಯಾಗಿ ಹೋಗುವುದು ಬೇರೆ, ಸಮವಸ್ತ್ರದಲ್ಲಿ ಹೋಗುವುದು ಬೇರೆ, ತಾವೇ ಕೇಕ್ ಹಿಡಿದುಕೊಂಡು ಹೋಗುವುದು ಇಲಾಖೆಯ ಗೌರವಕ್ಕೆ ಮಾಡಿದ ಅಪಮಾನವಾಗುತ್ತದೆ ಎನ್ನುವುದು ಸಾರ್ವಜನಿಕ ವಲಯದ ಚರ್ಚೆ.
ಕೊಣನೂರು ಪಿಎಸ್‌ಐ ಮನೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು
ಹಾಸನ : ಹಾಸನದ ಅರಕಲಗೂಡು ತಾಲೂಕಿನ ಕೊಣನೂರು ಪಿಎಸ್‌ಐ ಮನೆಗೆ ಕೆಲ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ. ಕೊಣನೂರು ಪೊಲೀಸ್ ಠಾಣೆಯ (Konanur Police Station) ಪಿಎಸ್ಐ (PSI) ಶೋಭಾ ಬರಮಕ್ಕನವರ್ ಅವರು ಇದ್ದ ಬಾಡಿಗೆ ಮನೆಗೆ ಬೆಂಕಿ ಹಾಕಲಾಗಿದೆ.
ರಜೆ ಮೇಲೆ ಊರಿಗೆ ತೆರೆಳಿದ್ದಾಗ ದುಷ್ಕರ್ಮಿಗಳು ಮನೆಯ ಕಿಟಿಕಿ ಒಡೆದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಮನೆಯಲ್ಲಿದ್ದ ಲ್ಯಾಪ್‌ಟಾಪ್, ಡ್ರೆಸ್ಸಿಂಗ್ ಟೇಬಲ್, ಬಟ್ಟೆ ಸೇರಿ ಪೀಠೋಪಕರಣಗಳು ಬೆಂಕಿಗಾಹುತಿ ಆಗಿವೆ. ಬುಧವಾರ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿ ಹೋಗಿರುವ ಸಾಧ್ಯತೆ ಇದೆ.
ರಜೆ ಮುಗಿಸಿ ಶುಕ್ರವಾರ ಮನೆಗೆ ವಾಪಸಾದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್‌ಪಿ ಮುರುಳೀಧರ್ ಹಾಗೂ ವೃತ್ತನಿರೀಕ್ಷಕ ರಘುಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Karnataka Election: ಬಿಜೆಪಿ ಶಾಸಕ ಹರೀಶ್ ಪೂಂಜಾ ಪರ ಪ್ರಚಾರ ಮಾಡಿದ ಗ್ರಾಪಂ ಸಿಬ್ಬಂದಿ ಅಮಾನತು