ಬೆಂಗಳೂರು: ಇಲ್ಲಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಎಎಸ್‌ಐ, ವ್ಯಕ್ತಿಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿರುವ (Police threat) ಆರೋಪ ಕೇಳಿ ಬಂದಿದೆ. ಪೊಲೀಸ್ ಕೆಲಸದ ಜತೆ ಬಡ್ಡಿ ವ್ಯವಹಾರದಲ್ಲಿ ತೊಡಗಿರುವ ಎಎಸ್‌ಐ ತುಕಾರಂ ಎಂಬುವವರು ಶೇಕ್ ಇಮ್ರಾನ್ ಪಾಷಾ ಎಂಬುವವರಿಗೆ ಧಮ್ಕಿ ಹಾಕಿದ್ದಾರೆ.
ಶೇಕ್ ಇಮ್ರಾನ್ ಪಾಷ ಅವರು ತುಕಾರಂ ಬಳಿ 5% ಬಡ್ಡಿಗೆ 10 ಲಕ್ಷ ರೂ. ಹಣ ಪಡೆದುಕೊಂಡಿದ್ದಾರೆ. ʻʻನಿನ್ನ ಸ್ನೇಹಿತರು ಇದ್ದರೆ ಪರಿಚಯ ಮಾಡು ಅವರಿಗೂ ಬಡ್ಡಿಗೆ ಹಣ ಕೊಡುತ್ತೇನೆʼʼ ಎಂದು ತುಕಾರಾಂ ಆಗಾಗ ಶೇಕ್ ಇಮ್ರಾನ್‌ನಿಗೆ ಹೇಳುತ್ತಿದ್ದ. ಈತನ ಕಾಟ ಸಹಿಸಿಕೊಳ್ಳಲು ಆಗದೆ ಇಮ್ರಾನ್ ತನ್ನ ಸ್ನೇಹಿತರನ್ನು ತುಕಾರಾಂಗೆ ಪರಿಚಯಿಸಿದ್ದ.
ತುಕಾರಾಂ ಇಮ್ರಾನ್‌ನ ಸ್ನೇಹಿತರ ಜತೆ ಲಕ್ಷಾಂತರ ರೂ. ಬಡ್ಡಿ ವ್ಯವಹಾರವನ್ನು ಇಟ್ಟುಕೊಂಡಿದ್ದ. ಈ ನಡುವೆ ತುಕಾರಾಂ ಬಳಿ ಬಡ್ಡಿಗೆ ಹಣ ಪಡೆದಿದ್ದ ಇಮ್ರಾನ್ ಸ್ನೇಹಿತರು ಪರಾರಿ ಆಗಿದ್ದಾರೆ. ಹೀಗಾಗಿ ಅವರ ಹಣವನ್ನು ನೀನೇ ಪಾವತಿಸು ಎಂದು ಇಮ್ರಾನ್ ಮೇಲೆ ತುಕಾರಾಂ ಒತ್ತಡ ಹೇರಲು ಆರಂಭಿಸಿದ್ದಾರೆ. ಮೊದಲಿಗೆ ರೌಡಿಗಳ ಬಿಟ್ಟು ಹತ್ಯೆ ಮಾಡುವುದಾಗಿ ತುಕಾರಾಂ ಧಮ್ಕಿ ಹಾಕಿದ್ದು, ಶೇಕ್ ಇಮ್ರಾನ್ ಇದಕ್ಕೆ ಬಗ್ಗದ ಇದ್ದಾಗ ಕರೆಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸ್ ಅಧಿಕಾರವನ್ನು ಬಳಸಿಕೊಂಡು ಗಾಂಜಾ ಕೇಸ್‌ನಲ್ಲಿ ಬಂಧಿಸುವೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ ಎಂದು ಇಮ್ರಾನ್ ಅಳಲು ತೋಡಿಕೊಂಡಿದ್ದಾರೆ.
ಸೈಟ್ ರಿಜಿಸ್ಟೇಶನ್‌ಗೆ ಒತ್ತಾಯ
ಯಲಹಂಕ ಬಳಿ ಇಮ್ರಾನ್‌ಗೆ ಸೇರಿದ ಅಂದಾಜು 50 ಲಕ್ಷ ಮೌಲ್ಯದ ಸೈಟ್ ಇದೆ. ಅದನ್ನು ತನ್ನ ಹೆಸರಿಗೆ ರಿಜಿಸ್ಟರ್ ಮಾಡುವಂತೆ ಈ ಎಎಸ್‌ಐ ತುಕರಾಂ ಒತ್ತಾಯ ಮಾಡುತ್ತಿದ್ದಾನೆ ಎನ್ನಲಾಗಿದೆ. ಈ ಸಂಬಂಧ ದೂರು ಕೊಡಲು ಹೋದರೆ ನಿನ್ನ ಹತ್ಯೆ ಮಾಡುವೆ ಎಂದೆಲ್ಲ ಬೆದರಿಕೆ ಹಾಕುತ್ತಿದ್ದಾನಂತೆ. ಹೀಗಾಗಿ ದೂರದಾರ ಇಮ್ರಾನ್ ಹಿರಿಯ ಅಧಿಕಾರಿಗಳ ಮೊರೆ ಹೋಗಿದ್ದು, ಗೃಹ ಸಚಿವರು ಸೇರಿದಂತೆ ಪೊಲೀಸ್ ಕಮಿಷನರ್‌ಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಇಲ್ಲಿಂದಲೂ ನ್ಯಾಯ ಸಿಗದ ಕಾರಣಕ್ಕಾಗಿ ಸದ್ಯ ಇಮ್ರಾನ್ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ