Site icon Vistara News

ಕ್ಲಬ್‌ ಹೌಸ್‌ನಲ್ಲಿ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ: ಭಾಗವಹಿಸಿದವರ ಪತ್ತೆಗೆ ಪೊಲೀಸರಿಂದ ತೀವ್ರ ಪ್ರಯತ್ನ

pakistani flag

ಬೆಂಗಳೂರು: ಆಗಸ್ಟ್​ 14ರಂದು ಕ್ಲಬ್‌ ಹೌಸ್‌ನಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದಲ್ಲದೆ ಭಾರತದ ಬಗ್ಗೆ ಅಪಮಾಕಾರಿ ಘೋಷಣೆಗಳನ್ನು ಕೂಗಿದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದಾಗ ಬೆಂಗಳೂರಿನ ಕೆಲವು ಸಾಫ್ಟ್‌ ವೇರ್‌ ಕಂಪನಿ ಉದ್ಯೋಗಿಗಳು ಕ್ಲಬ್‌ ಹೌಸ್‌ನಲ್ಲಿ ಮಾಡಿದ ಈ ಕಿತಾಪತಿ ದೇಶದ್ರೋಹದ ಕೃತ್ಯವೆಂದು ಪರಿಗಣಿಸಲಾಗಿದ್ದು, ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಎಂಬ ಕಾರಣಕ್ಕೆ ಈ ವ್ಯಕ್ತಿಗಳು ಕ್ಲಬ್‌ ಹೌಸ್‌ನಲ್ಲಿ ಆಚರಣೆಗೆ ಮುಂದಾಗಿದ್ದರು. ಪಾಕಿಸ್ತಾನದ ಬಾವುಟವನ್ನು ಡಿಪಿ ಮಾಡಿಕೊಂಡಿದ್ದ ಕೆಲವರು ಪಾಕಿಸ್ತಾನಕ್ಕೆ ಜಿಂದಾಬಾದ್‌ ಕೂಗಿದ್ದರು. ಅಷ್ಟು ಮಾತ್ರವಲ್ಲ, ಭಾರತಕ್ಕೆ ಅಪಮಾನವಾಗುವಂತೆ ನಡೆದುಕೊಂಡಿದ್ದರೆ.

ಪಾಕಿಸ್ತಾನದ ರಾಷ್ಟ್ರ ಗೀತೆಯನ್ನು ಹಾಕಿ ಸಂಭ್ರಮಿಸಿದ ಇವರು ಡಿಪಿಯಲ್ಲಿ ಪಾಕಿಸ್ತಾನದ ಧ್ವಜ ಹಾಕಿದ್ದರೆ ಮಾತ್ರ ಕ್ಲಬ್‌ ಹೌಸ್‌ನಲ್ಲಿ ಮಾತನಾಡಲು ಅವಕಾಶ ಎಂಬ ನಿಯಮ ತಂದಿದ್ದರು. ಸುಮಾರು ೧೦ ಮಂದಿ ಪಾಕಿಸ್ತಾನದ ಧ್ವಜವನ್ನು ಡಿಪಿಯಾಗಿ ಮಾಡಿಕೊಂಡಿದ್ದರು.

ಇನ್ನು ಸೌರಭ್​, ರಿಕಿ, ರೋಲೆಕ್ಸ್​ ಎಂಬ ವ್ಯಕ್ತಿಗಳ ಹೆಸರಿನ ಪ್ರೊಫೈಲ್‌ ​ಗಳಲ್ಲಿ ಈ ರೀತಿಯ ದೇಶದ್ರೋಹದ ಕೆಲಸ ನಡೆದಿದೆ. ಅದರಲ್ಲಿ ಭಾಗವಹಿಸಿದವರು ಕನ್ನಡದಲ್ಲೇ ಮಾತನಾಡುತ್ತಿದ್ದುದು ಕನ್ನಡಿಗರಲ್ಲೂ ಇಂಥವರು ಇದ್ದಾರಾ ಎಂಬ ಪ್ರಶ್ನೆಯನ್ನು ಮೂಡಿಸಿದೆ.

ಈ ಘಟನೆಯ ಈ ಬಗ್ಗೆ ಮಾತನಾಡಿದ ಪೊಲೀಸ್​ ಆಯುಕ್ತ ಪ್ರತಾಪ್​ ರೆಡ್ಡಿ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇದರ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ನಿಕ್​ ನೇಮ್​ ಬಳಸಿ ಕೃತ್ಯ ಎಸಗಿದ್ದಾರೆ. ಸರ್ವಿಸ್​ ಪ್ರೊವೈಡರ್‌ಗೆ ಮಾಹಿತಿ ಕೇಳಿದ್ದೇವೆ . ಇದರ ಬಗ್ಗೆ ತೀವ್ರ ತನಿಖೆ ಮುಂದುವರಿಯುತ್ತಿದೆ ಎಂದಿದ್ದಾರೆ.

ಸಿ.ಟಿ. ರವಿ ಆಕ್ಷೇಪ

ಕ್ಲಬ್‌ ಹೌಸ್‌ನಲ್ಲಿ ನಡೆದಿರುವ ದೇಶ ವಿರೋಧಿ ಕೃತ್ಯವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಇಂತಹ ಘಟನೆಗಳು ಸಣ್ಣ ಅಂತ ಲಘುವಾಗಿ ಪರಿಗಣಿಸಬಾರದು ಎಂದರು. ಈ ರೀತಿ ಮಾಡುವವರು ಪಾಕಿಸ್ತಾನಕ್ಕೆ ಹೋಗಲಿ. ಅವರಿಗೆ ಫ್ರೀ ವೀಸಾ ಕೊಡಬೇಕು ಎಂದರು. ಇಂಥ ದೇಶ ದ್ರೋಹಿಗಳೂ ಪಾಕಿಸ್ತಾನಕ್ಕೆ ಹೋಗಲೂ ಅರ್ಹರಲ್ಲ ಎಂದಿದ್ದಾರೆ ರವಿ.

‌ ಇದನ್ನೂ ಓದಿ| ಕ್ಲಬ್‌ ಹೌಸ್‌ನಲ್ಲಿ ಪಾಕ್‌ ಸ್ವಾತಂತ್ರ್ಯ ದಿನಾಚರಣೆ, ಭಾರತ ವಿರುದ್ಧ ಕೆಟ್ಟ ಮಾತು, ಬೆಂಗಳೂರ ಟೆಕ್ಕಿಗಳ ವರ್ತನೆಗೆ ಆಕ್ರೋಶ

Exit mobile version