ಗದಗ: ಪುರಸಭೆ ಸದಸ್ಯರಿಬ್ಬರು ಮಾರಾಮಾರಿ (Political Clash) ಮಾಡಿಕೊಂಡಿರುವ ಪ್ರಕರಣ ಮುಂಡರಗಿ ಪಟ್ಟಣದ ಪುರಸಭೆ ಕಚೇರಿಯಲ್ಲಿ ನಡೆದಿದೆ. ಅವಧಿ ಮೀರಿ ಕಚೇರಿಯಲ್ಲಿ ಏಕೆ ಇದ್ದೀಯಾ ಎಂಬ ಪ್ರಶ್ನೆಯೇ ಹೊಡೆದಾಟಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಇಬ್ಬರೂ ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದ 16ನೇ ವಾರ್ಡ್ ಸದಸ್ಯ ರಾಜೇಸಾಬ ಬೆಟಗೇರಿ ಹಾಗೂ 2ನೇ ವಾರ್ಡಿನ ಸದಸ್ಯ ಪ್ರಕಾಶ ಹಲವಾಗಲಿ ನಡುವೆ ಮಾರಾಮಾರಿ ನಡೆದಿದೆ. ರಾಜೇಸಾಬ ಸಂಜೆ ಆರು ಗಂಟೆಯಾದರೂ ಪುರಸಭೆ ಕಚೇರಿಯಲ್ಲಿದ್ದರು. ಇದನ್ನು ಪ್ರಶ್ನೆ ಮಾಡಿದ ಮತ್ತೊಬ್ಬ ಸದಸ್ಯ ಪ್ರಕಾಶ ವಿಡಿಯೊ ಮಾಡಲು ಮುಂದಾಗಿದ್ದರು. ಆಗ ಸಿಟ್ಟಿಗೆದ್ದ ರಾಜೇಸಾಬ ಏಕಾಏಕಿ ಪ್ರಕಾಶ್ ಮೇಲೆ ದಾಳಿ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಹೀಗಾಗಿ ಇಬ್ಬರೂ ಹೊಡೆದಾಡಿಕೊಂಡಿದ್ದು, ಅಶ್ಲೀಲ ಪದ ಬಳಸಿ ಜಾತಿ ನಿಂದನೆ ಮಾಡಿದ ಆರೋಪವೂ ಕೇಳಿಬಂದಿದೆ. ಒಬ್ಬರಿಗೊಬ್ಬರು ಬಡಿದಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಆನಂತರ ಇಬ್ಬರೂ ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | BJP Protest | ಭುಟ್ಟೋ ʻಕಟುಕʼ ಹೇಳಿಕೆಗೆ ಬಿಜೆಪಿ ಕೆಂಡ; ಬೆಂಗಳೂರು ಸೇರಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ