ಬಳ್ಳಾರಿ: ಈ ಬಾರಿಯ ಚುನಾವಣೆಯಲ್ಲಿ (Karnataka election 2023) ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಬೆದರಿಕೆಯ ರಾಜಕೀಯ ಮಾಡುತ್ತಿದ್ದಾರೆ, ಆದ್ದರಿಂದ ಕೆಲವು ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಕೆಆರ್‌ಪಿ ಪಕ್ಷಕ್ಕೆ (KRP party) ಸೇರ್ಪಡೆಯಾಗುತ್ತಿದ್ದಾರೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಆರೋಪಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್‌ಪಿ ಪಕ್ಷದವರು ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ, ನಾನು ಯಾರ ಜತೆಯೂ ಹೊಂದಾಣಿಕೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: Golden Temple: ಪಂಜಾಬ್ ಸ್ವರ್ಣಮಂದಿರದ ಬಳಿ ಮತ್ತೊಂದು ಸ್ಫೋಟ; ಸ್ಥಳದಲ್ಲಿ ಆತಂಕ
ರಾಜಕೀಯ ಜನ್ಮ ನೀಡಿದ ಪಕ್ಷ
ಬಿಜೆಪಿ ನನಗೆ ರಾಜಕೀಯ ಜನ್ಮ ನೀಡಿದ ಪಕ್ಷ. ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ನಾನು ಸತ್ತರೂ ಕೂಡ ನನ್ನ ದೇಹದ ಮೇಲೆ ಬಿಜೆಪಿಯ ಬಾವುಟವೇ ಇರಲಿ ಎಂದು ನನ್ನ ಮನೆಯವರಿಗೆ ಹೇಳಿದ್ದೇನೆ ಎಂದರು.
ನಗರದಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎನ್ನುವವರು ಅಂದಿನ ಯಡಿಯೂರಪ್ಪ ಸರ್ಕಾರದ ಅನುದಾನದಿಂದ ತಾನೇ ಹೊರೆತು ಅವರ ಸ್ವಂತ ಹಣದಿಂದ ಅಲ್ಲ. ಹೆಲಿಕಾಪ್ಟರ್ ನಲ್ಲಿ ಸಂಚರಿಸುವವರು ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವೇ ಎಂದ ಅವರು, ಇಂತಹ ಊಹಾಪೋಹಗಳಿಗೆ ಮತದಾರರು ಕಿವಿಗೊಡಬಾರದು ಎಂದು ತಿಳಿಸಿದರು.
ಹಣ ಇದ್ದವರು ಅಬ್ಬರದ ಪ್ರಚಾರ ಮಾಡುತ್ತಾರೆ, ನನ್ನ ದಾರಿಯಲ್ಲಿಯೇ ಪ್ರಚಾರ ಮಾಡುತ್ತೇನೆ. ಅಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಾಲು ಹಾಕಿದವರು ಇಂದು ಕೆಆರ್‌ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ, ಬೇಡ ಅಂದವರಿಗೆ ಆಸ್ತಿ ಕಸಿದುಕೊಳ್ಳುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: SSLC Result 2023: ಫೇಲಾಗಿದ್ದರೆ ಡೋಂಟ್ ವರಿ, ನಿಮಗಿದೆ ಸಪ್ಲಿಮೆಂಟರಿ; ಪೂರಕ ಪರೀಕ್ಷೆ ನೋಂದಣಿಗೆ ಲಾಸ್ಟ್ ಡೇಟ್ ಯಾವಾಗ?
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್, ಮುಖಂಡರಾದ ರಾಜೀವ್ ತೊಗರಿ, ಅನಿಲ್ ನಾಯ್ಡು ಹಾಗೂ ಇತರರಿದ್ದರು.