Site icon Vistara News

Poor Food Supply: ಅಂಗನವಾಡಿ ಮಕ್ಕಳಿಗೆ ಹುಳು ಬಿದ್ದ ಅಕ್ಕಿ ವಿತರಣೆ; ಪೋಷಕರ ಆಕ್ರೋಶ

#image_title

ಮಂಡ್ಯ: ಇಲ್ಲಿನ ಪಾಂಡವಪುರ ಪಟ್ಟಣದ ಚಿಕ್ಕಮಸೀದಿ ಬೀದಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ (Anganwadi Center) ಮಕ್ಕಳಿಗೆ ಕಳಪೆ ಗುಣಮಟ್ಟದ ಅಕ್ಕಿಯನ್ನು (Poor Food Supply) ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಅಂಗನವಾಡಿ ಕೇಂದ್ರದಲ್ಲಿ ಸುಮಾರು 12 ಮಕ್ಕಳಿದ್ದು, ಇವರಿಗೆ ಹುಳು ಬಿದ್ದ ಅಕ್ಕಿಯನ್ನು ನೀಡಲಾಗಿದೆ.

ಅಂಗನವಾಡಿ ಕೇಂದ್ರಕ್ಕೆ ಕಳಪೆ ಆಹಾರ ವಿತರಣೆ ಮಾಡಿದ್ದಕ್ಕೆ ಮಕ್ಕಳ ಪೋಷಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇಲಾಖೆಯಿಂದ ಹುಳು ಬಿದ್ದ ಅಕ್ಕಿಯನ್ನು ವಿತರಣೆ ಮಾಡಿದರೆ ಇತ್ತ ಅಂಗನವಾಡಿ ಸಿಬ್ಬಂದಿ ಅದೇ ಅಕ್ಕಿಯನ್ನು ಬಳಸಿ ಆಹಾರ ತಯಾರಿಸಿದ್ದಾರೆ.

ಇದನ್ನೂ ಓದಿ: Elephant attack: ನೀಲಗಿರಿ ತೋಪಿನಲ್ಲಿ ಅಡ್ಡಾಡಿದ ಕಾಡಾನೆ; ತೋಟಗಳಿಗೆ ನುಗ್ಗಿ ಬೆಳೆ ಹಾನಿ

ಹುಳು ಬಿದ್ದ ಅಕ್ಕಿಯನ್ನು ತೊಳೆದು ಆಹಾರ ತಯಾರಿಸಲು ಅಂಗನವಾಡಿ ಸಿಬ್ಬಂದಿ ಮುಂದಾಗಿದ್ದು, ಇದನ್ನು ಕಂಡು ಪೋಷಕರು ಕಿಡಿಕಾರಿದ್ದಾರೆ. ಹುಳು ಬಿದ್ದ ಅಕ್ಕಿಯನ್ನು ಎಳೆ ಕಂದಮ್ಮಗಳು ಸೇವಿಸಿ ಹೆಚ್ಚು ಕಡಿಮೆ ಆದರೆ ಏನು ಗತಿ ಎಂದು ಪ್ರಶ್ನಿಸಿದ್ದಾರೆ. ಇತ್ತ ಅಕ್ಕಿಯಲ್ಲಿರುವ ಹುಳ ತೆಗೆದು, ತೊಳೆದು ನಂತರ ನೀಡಲಾಗುವುದು ಎಂದು ಸಿಬ್ಬಂದಿ ಹೇಳಿದ್ದಾರೆ. ಪೋಷಕರು ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದು, ತಕ್ಷಣವೇ ಸಂಬಂಧಪಟ್ಟವರು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

Exit mobile version