ಬೆಂಗಳೂರು: ಬಾಯಲ್ಲಿ ಎಣ್ಣೆ ಪ್ಯಾಕೆಟ್ ಹರಿದು ಆ ಎಣ್ಣೆಯನ್ನೇ ಪಾಪ್ ಕಾರ್ನ್ ಮಾಡಲು ಬಳಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
21 ವರ್ಷದ ನಯಾಜ್ ಪಾಷಾ ಬಿನ್ ರಿಯಾಜ್ ಪಾಷಾ ಎಂಬಾತ ಲಾಲ್‌ಬಾಗ್ ರಸ್ತೆಯಲ್ಲಿ ಪಾಪ್ ಕಾರ್ನ್ ಮಾರಾಟ ಮಾಡ್ತಿದ್ದ. ಈತ ಎಣ್ಣೆ ಪ್ಯಾಕೆಟ್‌ನ್ನು ಬಾಯಲ್ಲಿ ಹರಿಯುತ್ತಿದ್ದ. ಆ ಎಣ್ಣೆಯನ್ನೇ ಹಾಕಿ ಪಾಪ್‌ಕಾರ್ನ್ ತಯಾರಿ ಮಾಡುತ್ತಿದ್ದ. ಇದನ್ನು ಗಮನಿಸಿದ ಸಾರ್ವಜನಿಕರು, ಎಂಜಲು ಮಾಡಿದ ಪಾಪ್‌ಕಾರ್ನ್ ಮಾರಾಟ ಮಾಡುತ್ತೀಯ ಎಂದು ಆತನ ಜತೆ ಗಲಾಟೆ ಮಾಡಿದ್ದರು.
ಇದನ್ನು ಓದಿ| PSI Scam | ಫಸ್ಟ್ ರ‍್ಯಾಂಕ್ ಕುಶಾಲ್ ಅರೆಸ್ಟ್
ಈ ವೇಳೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಆಗ ಸಾರ್ವಜನಿಕರು, ಈತ ಪಾಪ್‌ಕಾರ್ನ್ ಮಾಡಲು ಬಳಸುವ ಎಣ್ಣೆಯಲ್ಲಿ ಎಂಜಲು ಹಾಕಿ ಸಾರ್ಜಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಬಳಿಕ ಆತನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ಯದಿದ್ದಾರೆ.
ಘಟನೆ ಸಂಬಂಧ ಸಾರ್ವಜನಿಕರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ದೂರಿನ್ವಯ ಸಿದ್ದಾಪುರ ಪೊಲೀಸರು ನಯಾಜ್‌ನನ್ನು ಬಂಧನಕ್ಕೆ ಪಡೆದಿದ್ದಾರೆ. ಆತನ ವಿರುದ್ದ ಎಫ್‌ಐಆರ್ ದಾಖಲಾಗಿದೆ. ಆತ ಪಾಪ್ ಕಾರ್ನ್ ಮಾಡಲು ಬಳಸುತ್ತಿದ್ದ ಯಂತ್ರವನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.