Site icon Vistara News

Pradeep Eashwar: ಪ್ರದೀಪ್‌ ಈಶ್ವರ್‌ ಗ್ರಾಮ ಸಂಚಾರ ಶುರು; ಸುಧಾಕರ್‌ಗೆ ಸೋಲು-ಸಿದ್ದುಗೆ ಹಾಲು ಎಂದ ಶಾಸಕ

pradeep Eshwar vist village in chikkaballapura

ಚಿಕ್ಕಬಳ್ಳಾಪುರ: ಈ ಬಾರಿಯ ಚುನಾವಣೆಯಲ್ಲಿ ಹಲವಾರು ಅಚ್ಚರಿಯ ಫಲಿತಾಂಶಗಳನ್ನು ಕಾಣಲಾಗಿದೆ. ಅದರಲ್ಲಿ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ (Pradeep Eashwar) ಗೆಲುವೂ ಒಂದು. ಈಗ ಗೆಲುವು ಕಾಣುತ್ತಿದ್ದಂತೆ ಪ್ರದೀಪ್‌ ಈಶ್ವರ್‌ ಕ್ಷೇತ್ರ ಸಂಚಾರಕ್ಕೆ ಮುಂದಾಗಿದ್ದಾರೆ. ಅಧಿಕಾರಿಗಳ ತಂಡವನ್ನು ಕಟ್ಟಿಕೊಂಡು ಹಲವಾರು ಗ್ರಾಮಗಳಿಗೆ ಭೇಟಿ ನೀಡಿದ್ದು, ನಾಗರಿಕರ ಆರೋಗ್ಯವನ್ನು ವಿಚಾರಿಸಿದ್ದಾರೆ. ಇದೇ ವೇಳೆ, ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಡಾ.ಕೆ. ಸುಧಾಕರ್‌ (Dr K Sudhakar) ಅವರನ್ನು ಸೋಲಿಸಿದ್ದಕ್ಕೆ ಸಿದ್ದರಾಮಯ್ಯ (Siddaramaiah) ಅವರು ಹಾಲು ಕುಡಿದಷ್ಟು ಸಂತೋಷಪಟ್ಟರು ಎಂದು ಪ್ರತಿಕ್ರಿಯೆ ನೀಡಿದರು.

ಗುರುವಾರ ಬೆಳಗ್ಗೆಯೇ ಹಳ್ಳಿಗಳಲ್ಲಿ ನೂತನ ಶಾಸಕ ಪ್ರದೀಪ್ ಈಶ್ವರ್ ಅವರು ಕಾಣಿಸಿಕೊಂಡು ಜನರಲ್ಲಿ ಅಚ್ಚರಿ ಮೂಡಿಸಿದರು. ಅಧಿಕಾರಿಗಳ ಜತೆಗೆ ಮನೆ ಮನೆ ಭೇಟಿ ನೀಡಿದ ಶಾಸಕರು, ನಾಗರಿಕರ ಕುಂದುಕೊರತೆಗಳನ್ನು ಆಲಿಸಿದರು.

ವೃದ್ಧೆಯ ಆರೋಗ್ಯ ತಪಾಸಣೆ ನಡೆಸಿದ ಆರೋಗ್ಯ ಅಧಿಕಾರಿಗಳು

ಇದನ್ನೂ ಓದಿ: Karnataka Election : ನನಗೂ ಡಿಸಿಎಂ ಸ್ಥಾನ ಬೇಕು; ಜಿ. ಪರಮೇಶ್ವರ್‌ ಹಕ್ಕು ಮಂಡನೆ, ಡಿಕೆಶಿ ವಿರುದ್ಧ ಆಕ್ರೋಶ

ಚಿಕ್ಕಬಳ್ಳಾಪುರ ತಾಲೂಕಿನ ಮೈಲಪ್ಪನಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿದ್ದು, ಈ ವೇಳೆ ವೃದ್ಧರು ಸೇರಿದಂತೆ ಹಲವರ ಆರೋಗ್ಯ ತಪಾಸಣೆಯನ್ನೂ ಮಾಡಿಸಿದ್ದಾರೆ. ಗ್ರಾಮದ ವೃದ್ಧೆ ಸೇರಿದಂತೆ ಹಲವರಿಗೆ ಸ್ಥಳದಲ್ಲೇ ಆರೋಗ್ಯ ತಪಾಸಣೆ ಮಾಡಲಾಗಿದೆ. ಬಿಪಿ, ಶುಗರ್ ಪರೀಕ್ಷೆಯನ್ನು ಮಾಡಿಸಲಾಗಿದೆ.

ಹಾಲು ಕುಡಿದಷ್ಟು ಸಂತೋಷ ಪಟ್ಟ ಸಿದ್ದರಾಮಯ್ಯ- ಪ್ರದೀಪ್‌ ಈಶ್ವರ್

ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಡಾ.ಕೆ. ಸುಧಾಕರ್‌ ಅವರನ್ನು ಸೋಲಿಸಿದ್ದಕ್ಕೆ ಸಿದ್ದರಾಮಯ್ಯ ಅವರು ಹಾಲು ಕುಡಿದಷ್ಟು ಸಂತೋಷಪಟ್ಟರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನನ್ನನ್ನು ಅಭಿನಂದಿಸಿ ಆಶೀರ್ವದಿಸಿದರು. ಕೆ.ಸಿ. ವೇಣುಗೋಪಾಲ್ ತಬ್ಬಿಕೊಂಡು ಸಂತೋಷ ಹಂಚಿಕೊಂಡರು ಎಂದು ಪ್ರದೀಪ್‌ ಈಶ್ವರ್‌ ಹೇಳಿದರು.

ಇದನ್ನೂ ಓದಿ: Inside Story: ನಾಲ್ಕು ದಿನ ಮಲ್ಲಿಕಾರ್ಜುನ ಖರ್ಗೆ ಸಮಾಧಾನ ಮಾಡಿದ್ದು ಡಿಕೆಶಿಯನ್ನಲ್ಲ, ಡಿಕೆಸುನ !

ಸುಧಾಕರ್ ವಿರುದ್ಧ ಗೆದ್ದ ಕಾರಣ ಜನರು ನನ್ನನ್ನು ಸೆಲೆಬ್ರಿಟಿ ಥರ ನೋಡುತ್ತಿದ್ದಾರೆ. ನನ್ನ ಕಾರು ಅಡ್ಡ ನಿಲ್ಲಿಸಿ ಜನ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಜನರ ಪ್ರೀತಿ, ಅಭಿಮಾನ, ವಿಶ್ವಾಸಕ್ಕೆ ನಾನು ಚಿರಋಣಿ. ಮಾಜಿ ಶಾಸಕರಂತೆ ನಾನು ಅಹಂಕಾರ ಪಡುವವನಲ್ಲ. ನಾನು ನಿರಂತರ ಜನರ ಜತೆ ಇರಲು ಬಯಸುತ್ತೇನೆ. ಜನರ ಕಷ್ಟ ಸುಖಗಳಿಗೆ ಭಾಗಿಯಾಗುತ್ತೇನೆ. ಮಾದರಿ ಶಾಸಕನಾಗಲು ಅಧ್ಯಯನ ನಡೆಸಿದ್ದೇನೆ ಎಂದು ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದರು.

Exit mobile version