ಮಂಡ್ಯ: ಡಿ.ಕೆ. ಶಿವಕುಮಾರ್ ಅಂದ ಕೂಡಲೇ ಕನಕಪುರ ʻಬಂಡೆʼ ಅನ್ನೋದು ಅನ್ವರ್ಥವಾಗಿ ಬರುತ್ತದೆ. ಇದನ್ನು ಮಕ್ಕಳೂ ಅರ್ಥ ಮಾಡಿಕೊಂಡಿದ್ದಾರೆ. ಇದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಿಗೆ ಪ್ಲಸ್ ಕೂಡಾ ಹೌದು, ಮೈನಸ್ ಕೂಡಾ ಹೌದು. ಅದರೆ, ಅವರ ಅಭಿಮಾನಿಗಳಿಗೆ ಮಾತ್ರ ಬಂಡೆ ಎಂದರೇ ಖುಷಿ!
ಹೀಗಾಗಿಯೇ ಮಂಡ್ಯ ಜಿಲ್ಲೆ ಶ್ರಿರಂಗಪಟ್ಟಣ ತಾಲೂಕಿನ ಬಾಬು ರಾಯನ ಕೊಪ್ಪಲಿನಲ್ಲಿ ಬಂಡೆ ಆಕಾರದ ಹಾರ ಹಾಕಿ ಅವರನ್ನು ಅಭಿಮಾನಿಗಳು ಸ್ವಾಗತಿಸಿದರು. ದೊಡ್ಡ ದೊಡ್ಡ ಕಲ್ಲುಗಳಿಂದಲೇ ಮಾಡಿದ ಹಾರದಂತಿರುವ ಮಾಲೆಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ಹಾಕಲಾಯಿತು.
ಹತ್ತಿ ಹಾಗೂ ಬಟ್ಟೆಯಿಂದ ವಿಶೇಷವಾಗಿ ತಯಾರಿಸಿರುವ ಡಿಕೆ ಅಭಿಮಾನಿಗಳು ಅದನ್ನು ಅವರಿಗೆ ತೋರಿಸಿ ಖುಷಿಪಟ್ಟರು. ಮೈಸೂರಿನ ವಿಶೇಷ ಕಲಾವಿದ ಚೇತಿ ರಾಮ್ ತಂಡದಿಂದ ಬಂಡೆ ಹಾರ ತಯಾರಾಗಿದೆಯಂತೆ.
ಸುಮ್ನಿರಿ ಎಂದು ಗದರಿದ ಡಿ.ಕೆ. ಶಿವಕುಮಾರ್
ಇದೆಲ್ಲವೂ ನಡೆದಿರುವುದು ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯ ವೇಳೆ. ಮಂಡ್ಯದ ಕ್ಯಾಂತುಗೆರೆಯಲ್ಲಿ ಪ್ರಜಾಧ್ವನಿ ಯಾತ್ರೆಗೆ ಅದ್ದೂರಿ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್ ತಮ್ಮ ವಿಶಿಷ್ಟ ಮ್ಯಾನರಿಸಂಗಳ ಮೂಲಕ ಯಾತ್ರೆಯುದ್ದಕ್ಕೂ ಕಾಣಿಸಿಕೊಂಡರು.
ಯಾತ್ರೆಗೆ ಚಾಲನೆ ನೀಡಿ ಮಾತನಾಡಲು ಆರಂಭಿಸಿದ ಡಿಕೆಶಿ, ಜಿಲ್ಲೆಯಲ್ಲಿ ಏಳಕ್ಕೆ ಏಳೂ ಸ್ಥಾನಗಳನ್ನ ಗೆಲ್ಲಿಸುವಂತೆ ಕರೆ ನೀಡಿದರು. ಈ ಹೇಳಿಕೆ ಹೇಳ್ತುದ್ದಂತೆಯೇ ಕಾರ್ಯಕರ್ತರು ಶಿಳ್ಳೆ ಕೇಕೆ ಹೊಡೆದರು. ಕಾರ್ಯಕರ್ತರ ಗಲಾಟೆಯಿಂದ ಕೆಲವು ಕ್ಷಣ ಮಾತು ನಿಲ್ಲಿಸಿ ʻಹೇ ತರ್ಲೆಗಳೇ ಸುಮ್ನಿರಿʼ ಎಂದು ಗದರಿದರು ಡಿಕೆಶಿ.
ಕಲಾವಿದರಿಗೆ ಬಸ್ ಮೇಲಿಂದಲೇ ಹಣ!
ಡಿ.ಕೆ. ಶಿವಕುಮಾರ್ ಬಸ್‌ನ ಮೇಲಿಂದಲೇ ಜನರತ್ತ ಕೈಬೀಸುತ್ತಿದ್ದರು. ಆಗ ದಾರಿದಲ್ಲಿ ಜಾನಪದ ಕಲಾ ತಂಡಗಳು ಅವರನ್ನು ಸ್ವಾಗತಿಸಿದವು. ಅವರ ನೃತ್ಯ ನೋಡಿ ಖುಷಿಪಟ್ಟ ಡಿ.ಕೆ. ಶಿವಕುಮಾರ್ ಅವರು ಬಸ್‌ನ ಮೇಲಿಂದಲೇ ನಿಂತು ಕಂತೆ ಕಂತೆ ನೋಟು ಎಸೆದರು! 500 ರೂ.ಗಳ ನೋಟುಗಳನ್ನು ಡಿ.ಕೆ.ಶಿ ಮೇಲಿನಿಂದ ಎಸೆದಿದ್ದು, ಅದನ್ನು ಹಿಡಿಯಲು ಜನರು ಮತ್ತು ಕಲಾವಿದರು ಮುಗಿಬಿದ್ದರು.
ಇದನ್ನೂ ಓದಿ : Karnataka Election: ಈ ಬಾರಿಯೂ ಅತಂತ್ರ ವಿಧಾನಸಭೆ? ಕುಮಾರಸ್ವಾಮಿ ಜತೆ ʼಸಂಧಾನʼಕ್ಕೆ ಬಂದವರಾರು?