Site icon Vistara News

Prajadwani Yatra : ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ: ಮಾಜಿ ಸಿಎಂ ಸಿದ್ದರಾಮಯ್ಯ

Prajadwani Yatra

ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಪ್ರಜಾಧ್ವನಿ ಬಸ್ ಯಾತ್ರೆಯು ಜೆಡಿಎಸ್‌ನ ಭದ್ರಕೋಟೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ತವರು ಜಿಲ್ಲೆಯಲ್ಲಿ ಶನಿವಾರ ನಡೆಯಿತು. ಬಸ್ ಯಾತ್ರೆಯಲ್ಲಿ (Prajadwani Yatra) ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಮಂಡಿಗನಹಳ್ಳಿಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಈ ಬಾರಿ ನಮ್ಮ ಸರ್ಕಾರ ಬಂದೇ ಬರುತ್ತದೆ. ಒಂದು ವೇಳೆ ನಾವು ಕೊಟ್ಟಿರುವ ಭರವಸೆಗಳನ್ನು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಂಡು ಮನೆಗೆ ಹೋಗುತ್ತೇವೆ. ಜೆಡಿಎಸ್‌ನವರು ಗೆದ್ದೆತ್ತಿನ ಬಾಲ ಹಿಡಿಯುವವರು, ಯಾವತ್ತೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲ್ಲ. ಅವರಿಗೆ ಮತ ಕೊಟ್ಟರೆ ಬಿಜೆಪಿಗೆ ಮತ ಕೊಟ್ಟ ಹಾಗೆ ಎಂದು ಹೇಳಿದರು.

ಇದನ್ನೂ ಓದಿ | Karnataka Election | 500 ಕೋಟಿ ರೂ. ಆಫರ್‌ ಗೊತ್ತಿಲ್ಲ; ನಾನವನಲ್ಲ, ನಾನವನಲ್ಲ, ನಾನವನಲ್ಲ ಎಂದ ಜಮೀರ್‌

ಬೊಮ್ಮಾಯಿ ಸರ್ಕಾರ ರೈತರು, ಬಡವರು, ಹಿಂದುಳಿದ ವರ್ಗ, ದಲಿತರ, ಯುವಕರ, ಮಹಿಳೆಯರ ವಿರೋಧಿ ಸರ್ಕಾರವಾಗಿದೆ. ಅದಕ್ಕಾಗಿ ಜನರ ನಂಬಿಕೆ, ವಿಶ್ವಾಸ ಕಳೆದುಕೊಂಡಿದ್ದಾರೆ. ಕುಮಾರಸ್ವಾಮಿ ತಮಟೆ ಹೊಡೆದುಕೊಂಡು ಓಡಾಡುತ್ತಿದ್ದಾರೆ. ಜೆಡಿಎಸ್ ಇರುವುದೇ ಐದಾರು ಜಿಲ್ಲೆಯಲ್ಲಿ ಎಂದ ಅವರು, ನೀವು ಅಧಿಕಾರದಲ್ಲಿದ್ದಾಗ ಯಾಕೆ ಪಂಚರತ್ನ ಮಾಡಲಿಲ್ಲ. ಈಗ ಅವರಿಗೆ ಅಧಿಕಾರ ಕೊಡಬೇಕಂತೆ. ಅಧಿಕಾರ ಕೊಡಲಿಲ್ಲ ಎಂದರೆ ಜೆಡಿಎಸ್‌ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳ್ತಿದ್ದಾರೆ. ಈಗಲೇ ಪಕ್ಷ ವಿಸರ್ಜನೆ ಮಾಡಿಬಿಡಪ್ಪಾ, ಜನ ಏನ್ ಜೆಡಿಎಸ್‌ ಬೇಕು ಬೇಕು ಎನ್ನುತ್ತಿದ್ದಾರಾ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಒಬ್ಬ ಶಾಸಕ‌ ಇಲ್ಲದೆ ಇದ್ದರೂ ಬದಲಾವಣೆ ತರುತ್ತೇನೆ ಎಂದು ಹೊರಟಿದ್ದೀರಲ್ಲಾ, ನಿಮಗೆ ಎಷ್ಟು ನಮಿಸಿದರೂ ಸಾಲದು. ರಾಜಕೀಯ, ಆರ್ಥಿಕವಾಗಿ ಏನೆಲ್ಲಾ ಕಷ್ಟ ‌ಅನುಭವಿಸುತ್ತಿದ್ದೀರಿ‌‌. ಅದನ್ನು ಕೇಳುವುದೇ ಈ ಯಾತ್ರೆಯ ಉದ್ದೇಶ. ಎಂದು ಹೇಳಿದರು.

ಬಿಜೆಪಿಯನ್ನು ದೂರ ಇಡಬೇಕು ಎಂದು ನಮ್ಮ ಸ್ವಾಭಿಮಾನ ಬದಿಗಿಟ್ಟು ಜೆಡಿಎಸ್‌ಗೆ ಅಧಿಕಾರ ನೀಡಿದ್ದೆವು. ಕುಮಾರಸ್ವಾಮಿ ಅವರು ಎಲ್ಲರನ್ನೂ ಒಟ್ಟಿಗೆ ತಗೆದುಕೊಂಡು ಹೋಗಬೇಕಿತ್ತು. ಅದರೆ ಹದಿನಾಲ್ಕು ತಿಂಗಳುಗಳ ಕಾಲ ಆಡಳಿತ ನಡೆಸಿದರೂ ನಮಗೆ ಸರ್ಕಾರ‌ ಉಳಿಸಲು ಸಾಧ್ಯವಾಗಲಿಲ್ಲ ತಿಳಿಸಿದರು.

ಇದನ್ನೂ ಓದಿ | Karnataka Election: ಬೂತ್ ವಿಜಯ ಅಭಿಯಾನವು ವಿಧಾನಸಭಾ ಚುನಾವಣೆಗೆ ಬಿಜೆಪಿ ಸಜ್ಜಾಗಿರುವುದರ ದ್ಯೋತಕ: ಮೇಘರಾಜ್‌

ನಾವು ಪ್ರತಿ‌ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್ ‌ಕೊಡಲು ತೀರ್ಮಾನಿಸಿದ್ದೇವೆ. ೨೦೦ ಯೂನಿಟ್‌ಗೆ ೧೫೦೦ ರೂ ವೆಚ್ಚವಾಗುತ್ತದೆ. ವರ್ಷಕ್ಕೆ 18 ಸಾವಿರ‌ ರೂಪಾಯಿ ಆಗುತ್ತದೆ. ಇನ್ನು ಪ್ರತಿ ತಿಂಗಳು ಒಂದು ಕುಟುಂಬದ ಮಹಿಳೆಗೆ ೨ ಸಾವಿರ ರೂಪಾಯಿ ಹಣ ನೀಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಸಿದ್ದರಾಮಯ್ಯ ಅಧಿಕಾರದಲ್ಲಿ ೫ ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಈ ಯೋಜನೆಯನ್ನು ಅಧಿಕಾರಕ್ಕೆ ಬಂದ ದಿನ ಪ್ರಾರಂಭಿಸಿದ್ದೇವೆ. ನೀರಾವರಿ ಯೋಜನೆ ಸೇರಿ ಮೂರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದೇ ತರುತ್ತೇವೆ. ಇದರ ನಡುವೆ ಬಿಜೆಪಿಯವರು ಬರುತ್ತಾರೆ, ಅವರನ್ನು ನಂಬಬೇಡಿ. ಅವರ ಭ್ರಷ್ಟ ‌ಬಂಡವಾಳವನ್ನು ಬಿಚ್ಚಿಡುತ್ತೇವೆ ಎಂದರು.

Exit mobile version