Site icon Vistara News

ಬಾಯಲ್ಲಿರೋ ಹಲ್ಲು ಮುರೀತೀವಿ: ಎಸಿಪಿಗೆ ಆವಾಜ್‌ ಹಾಕಿದ ಪ್ರಕಾಶ್‌ ಹುಕ್ಕೇರಿ

ಪ್ರಕಾಶ್‌ ಹುಕ್ಕೇರಿ

ಬೆಳಗಾವಿ: ಕಾನೂನು ‌ಪಾಲಿಸಲು ಮುಂದಾದ ಎಸಿಪಿಗೆ ವಾಯವ್ಯ ಶಿಕ್ಷಕರ ಕ್ಷೇತ್ರದ ವಿಜೇತ ಅಭ್ಯರ್ಥಿ ಪ್ರಕಾಶ್‌ ಹುಕ್ಕೇರಿ ಆವಾಜ್‌ ಹಾಕಿರುವ ಘಟನೆ ಬುಧವಾರ ನಡೆದಿದೆ. ಚುನಾವಣೆಯ ಗೆಲುವು ಅಧಿಕೃತವಾಗಿ ಘೋಷಣೆಯಾದ ನಂತರ ಪ್ರಮಾಣ ಪತ್ರ ಸ್ವೀಕರಿಸಲು ಬಂದ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರನ್ನು ಒಳಗೆ ಬಿಡದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಪ್ರಕಾಶ್ ಹುಕ್ಕೇರಿ ಅಧಿಕಾರದ ದರ್ಪ ತೋರಿದ್ದಾರೆ.

ಪ್ರಕಾಶ್‌ ಹುಕ್ಕೇರಿ ಜತೆ ಮತ ಎಣಿಕೆ ಕೇಂದ್ರಗೊಳಗೆ ಶಾಸಕರಾದ ‌ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ‌ಎ.ಬಿ.ಪಾಟೀಲ್ ಹೋಗಲು ಮುಂದಾದಾಗ ಎಲ್ಲರನ್ನೂ ಒಳಗೆ ಬಿಡಲ್ಲ ಎಂದು ಪೊಲೀಸರು ತಡೆದಿದ್ದಾರೆ. ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಆಗ ಮಧ್ಯ ಪ್ರವೇಶ ಮಾಡಿದ ಪ್ರಕಾಶ ಹುಕ್ಕೇರಿ, ಏಯ್‌ ನಿನ್ನ ಬಾಯಲ್ಲಿ ಇರೋ ಹಲ್ಲು ಮುರಿಯುತ್ತೇವೆ ಎಂದು ಬೆಳಗಾವಿ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿಗೆ ಆವಾಜ್ ಹಾಕಿದ್ದಾರೆ.

ಇದನ್ನೂ ಓದಿ | 3ನೇ ಬಾರಿ ಅರುಣ್‌ ಶಹಾಪುರ ಕೈಹಿಡಿಯದ ಮತದಾರ: ವಾಯವ್ಯದಲ್ಲಿ ಹುಕ್ಕೇರಿಗೆ ಜಯ

Exit mobile version