ಹುಬ್ಬಳ್ಳಿ: ಮುಂಬೈ- ಹುಬ್ಬಳ್ಳಿ- ಮುಂಬೈ ಮಧ್ಯೆ Indigo 6e ವಿಮಾನಯಾನ ಸೇವೆ ಜುಲೈ 15ರಿಂದ ಪುನರಾರಂಭಗೊಳ್ಳಲಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರ ಮನವಿ ಮೇರೆಗೆ ಇಂಡಿಗೋ 6 ಇ ವಿಮಾನ ಸಂಚಾರವನ್ನು ಮತ್ತೆ ಶುರು ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ.
IndiGo6E ನ ನಿರ್ವಹಣೆಗೆ ಸಚಿವ ಪ್ರಲ್ಹಾದ್ ಜೋಶಿ ಅವರು ಈ ಹಿಂದೆ ನಾಗರಿಕ ವಿಮಾನಯಾನ ಸಚಿವಾಲಯದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸಚಿವಾಲಯ ಇದೀಗ ವಿಮಾನ ಸಂಚಾರ ಪುನರಾರಂಭಕ್ಕೆ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: Sensex Jump: ಷೇರುಪೇಟೆಯಲ್ಲಿ ದಾಖಲೆ ಬರೆದ ಸೆನ್ಸೆಕ್ಸ್, 23,500 ಮೀರಿದ ನಿಫ್ಟಿ
ಮುಂಬೈ-ಹುಬ್ಬಳ್ಳಿ-ಮುಂಬೈ ನಡುವೆ ಬರುವ ಜುಲೈ 15ರಿಂದ ದೈನಂದಿನ ವಿಮಾನಗಳು ನಿರಂತರವಾಗಿ ಕಾರ್ಯ ನಿರ್ವಹಿಸಲಿವೆ ಎಂದು ಸಚಿವ ಪ್ರಲ್ಹಾದ್ ಜೋಶಿ ಟ್ವಿಟರ್ ಮೂಲಕ ಈ ಅಗತ್ಯ ಮಾಹಿತಿ ಹಂಚಿಕೊಂಡಿದ್ದಾರೆ.
ಇಂಡಿಗೋ ವಿಮಾನ ಮಧ್ಯಾಹ್ನ 3 ಗಂಟೆಗೆ ಮುಂಬೈ ಬಿಟ್ಟು ಸಂಜೆ 4.10ಕ್ಕೆ ಹುಬ್ಬಳ್ಳಿ ತಲುಪಲಿದೆ. ಸಂಜೆ 4.40ಕ್ಕೆ ಹುಬ್ಬಳ್ಳಿಯಿಂದ ನಿರ್ಗಮಿಸಿ ಸಂಜೆ 5.50ಕ್ಕೆ ಮುಂಬೈ ತಲುಪಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ: Nalanda University: ನಳಂದಾ ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್‌ನಲ್ಲಿ ಏನೇನಿವೆ?
ತಮ್ಮ ಪ್ರಸ್ತಾವನೆ ಪುರಸ್ಕರಿಸಿ ಇಂಡಿಗೋ ವಿಮಾನ ಸಂಚಾರ ಪುನರಾರಂಭ ವ್ಯವಸ್ಥೆ ಕಲ್ಪಿಸಿದ ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಚಿವ ಪ್ರಲ್ಹಾದ ಜೋಶಿ ಅವರು ಧನ್ಯವಾದ ಅರ್ಪಿಸಿದ್ದಾರೆ.