Site icon Vistara News

Pralhad Joshi: ಇದು ಇಂಗ್ಲೆಂಡ್ ಅಲ್ಲ; ‘ಕನ್ನಡ ನಾಮಫಲಕ’ ಆಗ್ರಹಕ್ಕೆ ಪ್ರಲ್ಹಾದ್ ಜೋಶಿ ಬೆಂಬಲ

Action to release interim crop insurance for groundnut soybean growers says Minister Pralhad Joshi

ನವದೆಹಲಿ: ಯಾವುದೇ ರೀತಿಯ ಹಿಂಸಾಚಾರವನ್ನು ವಿರೋಧಿಸುವುದಾಗಿ ಹೇಳಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Union Minister Pralhad Joshi), ಕರ್ನಾಟಕದಲ್ಲಿ ಅಂಗಡಿ ನಾಮ ಫಲಕಗಳು ಪ್ರಧಾನವಾಗಿ ಕನ್ನಡ ಭಾಷೆಯಲ್ಲಿರಬೇಕು (kannada signage demand) ಎಂಬ ಬೇಡಿಕೆಗೆ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಬುಧವಾರ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿತ್ತು. ಈ ವೇಳೆ, ಕೆಲವು ಅಂಗಡಿ ಮುಂಗಟ್ಟುಗಳ ನಾಮ ಫಲಕಗಳನ್ನು ಕಿತ್ತೆಸೆದಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಡ ಸಂಸದರಾಗಿರುವ ಪ್ರಲ್ಹಾದ್ ಜೋಶಿ ಅವರು, ಅಂಗಡಿಕಾರರು ನಾಮಫಲಕಗಳನ್ನು ಇಂಗ್ಲಿಷ್‌ನಲ್ಲೇ ಏಕೆ ಹಾಕುತ್ತಾರೆ. ಪ್ರತಿಯೊಬ್ಬರೂ ಚಿಹ್ನೆಗಳನ್ನು ಓದಲು ಶಕ್ತರಾಗಿರಬೇಕು ಮತ್ತು ಎಲ್ಲರೂ ಇಂಗ್ಲಿಷ್ ಓದಲು ಸಾಧ್ಯವಿಲ್ಲ. ಕನ್ನಡದಲ್ಲಿ ಇಂಗ್ಲಿಷ್ ಅಥವಾ ಹಿಂದಿಯಂತೆ ಇಂಗ್ಲಿಷ್ ಅಥವಾ ಇನ್ನೊಂದು ಭಾಷೆಯಲ್ಲಿ ಬರೆಯುವುದರಿಂದ ಏನು ಹಾನಿ? ಇದು ಇಂಗ್ಲೆಂಡ್ ಅಲ್ಲ ಎಂದು ಅವರು ಹೇಳಿದರು.

ಕನ್ನಡದಲ್ಲಿ ನಾಮಫಲಕ್ಕಾಗಿ ಹಿಂಸಾಚಾರ ನಡೆದಿದ್ದರೆ ಅದನ್ನು ಒಪ್ಪಲಾಗುವುದಿಲ್ಲ. ಆದರೆ, ಈ ಅಂಗಡಿಕಾರರು ಸ್ಥಳೀಯ ಜನರ ಭಾವನೆಯನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಪ್ರಲ್ಹಾದ್ ಜೋಶಿ ಅವರು ಹೇಳಿದ್ದಾರೆ. ಬೆಂಗಳೂರು ಸ್ಥಳೀಯ ಸಂಸ್ಥೆಯ ನಿಯಮದ ಪ್ರಕಾರ, ನಾಮಫಲಕದ ಒಟ್ಟು ಭಾಗದಲ್ಲಿ ಶೇ.60ರಷ್ಟು ಕನ್ನಡದಲ್ಲೇ ಬರೆಯಬೇಕು ಎಂಬ ನಿಯಮವಿದೆ.

ಆದರೆ ಅನೇಕ ಅಂಗಡಿಗಳು, ವಿಶೇಷವಾಗಿ ಮಾಲ್‌ಗಳಲ್ಲಿ ಈ ನಿಯಮವನ್ನು ಸಂಪೂರ್ಣವಾಗಿ ಕಡೆಣಿಸಲಾಗಿದೆ. ನಿಯಮವನ್ನು ಪಾಲಿಸುವಂತೆ ಕನ್ನಡ ಪರ ಸಂಘಟನೆಗಳು ಬಹು ದಿನಗಳಿಂದ ಆಗ್ರಹಿಸುತ್ತಿದ್ದವು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ಕನ್ನಡ ಪರ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದವು. ಈ ವೇಳೆ, 20ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳ ಜಖಂವಾಗಿವೆ.

ಈ ಸುದ್ದಿಯನ್ನೂ ಓದಿ: Karave Protest: ಕನ್ನಡ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಕರವೇ; ಇಂಗ್ಲಿಷ್‌ ನಾಮಫಲಕಗಳ ಧ್ವಂಸ

Exit mobile version