ಕೋಲಾರ: ಬಿಜೆಪಿಯ ವಿವಿಧ ಕಾರ್ಯಕ್ರಮಗಳಿಗೆಂದು ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು, ಈ ಭಾಗದ ಐತಿಹಾಸಿಕ, ಪ್ರಸಿದ್ಧ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದರು. ಕೋಲಾರದ ಇತಿಹಾಸ ಪ್ರಸಿದ್ಧ ಕುರುಡುಮಲೆ ಶ್ರೀ ಮಹಾಗಣಪತಿ ದೇವಸ್ಥಾನ, ಮುಳಬಾಗಿಲು ತಾಲೂಕಿನ ಕೋಲದೇವಿ ಗ್ರಾಮದಲ್ಲಿರುವ ಸುಪ್ರಸಿದ್ಧ ಶ್ರೀ ಕೋದಂಡರಾಮ ದೇವಾಲಯ (ಗರುಡ ದೇವಾಲಯ), ಮುಳಬಾಗಿಲು ಶ್ರೀಪದ್ರಾಯರ ಮಠ ಮತ್ತು ಶ್ರೀ ಲಕ್ಷ್ಮಿ ನರಸಿಂಹ ದೇಗುಲಕ್ಕೆ ಕುಟುಂಬ ಸಮೇತ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಕೋಲಾರದ ಪವಿತ್ರ ಕ್ಷೇತ್ರ ಮುಳಬಾಗಿಲು ಶ್ರೀಪದ್ರಾಯರ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದ ಸಚಿವರು, ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.
ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋಲಾರಕ್ಕೆ ಬಂದಿದ್ದು, ಮುಳಬಾಗಿಲು ತಾಲೂಕಿನ ಕೋಲದೇವಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಕೋದಂಡರಾಮ ದೇವಾಲಯ (ಗರುಡ ದೇವಾಲಯ) ಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಸಮಾಜದ ಶಾಂತಿಗಾಗಿ ಪ್ರಾರ್ಥಿಸಿದೆನು.
— Pralhad Joshi (@JoshiPralhad) February 12, 2024
ಈ ಸಂದರ್ಭದಲ್ಲಿ ಸಂಸದರಾದ ಶ್ರೀ @bjp_muniswamy ಹಾಗೂ ಪ್ರಮುಖರು ಜೊತೆಗಿದ್ದರು. pic.twitter.com/BDUnKjqoGC
ಕೋಲಾರದ ಇತಿಹಾಸ ಪ್ರಸಿದ್ಧ ಕುರುಡುಮಲೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಇಲ್ಲಿನ ಗಣಪತಿ ಮೂರ್ತಿಯನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರೇ ಖುದ್ದು ಸ್ಥಾಪಿಸಿದ್ದಾರೆ ಎಂಬ ಪ್ರತೀತಿ ಇದೆ. ಇಂತಹ ಒಂದು ಐತಿಹಾಸಿಕ ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿರುವುದು ಮನಸ್ಸಿಗೆ ಆನಂದ ತಂದಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ಮುನಿಸ್ವಾಮಿ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಜೊತೆಗಿದ್ದರು.
ಚಿಕ್ಕಬಳ್ಳಾಪುರದಲ್ಲಿ ವಿಜಯೇಂದ್ರಗೆ ಕಮಲದ ಪೇಟ ತೊಡಿಸಿ ಸನ್ಮಾನ
ಚಿಕ್ಕಬಳ್ಳಾಪುರ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಬಿ.ವೈ. ವಿಜಯೇಂದ್ರ ಅವರು ಮೊದಲ ಬಾರಿ ಚಿಕ್ಕಬಳ್ಳಾಪುರಕ್ಕೆ ಸೋಮವಾರ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಬಿಜೆಪಿ ಮುಖಂಡರು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಲಭಿಸಿತು. ತಾಲೂಕಿನ ದಿಬ್ಬೂರಿನಲ್ಲಿ ಬಿಜೆಪಿ ಗ್ರಾಮ ಪರಿಕ್ರಮ ಯಾತ್ರೆಗೆ ಚಾಲನೆ ನೀಡಲು ತೆರಳಿದ್ದ ವೇಳೆ ಅವರನ್ನು ಪೂರ್ಣಕುಂಭ ಕಳಸಗಳೊಂದಿಗೆ ಗ್ರಾಮದ ಮಹಿಳೆಯರು ಸ್ವಾಗತಿಸಿದರು. ನಂತರ ಕಾರ್ಯಕ್ರಮದ ಸ್ಥಳದವರೆಗೆ ಎತ್ತಿನಗಾಡಿಯಲ್ಲಿ ಮೆರವಣಿಗೆ ಮೂಲಕ ವಿಜಯೇಂದ್ರ ಅವರನ್ನು ಕರೆದೊಯ್ಯಲಾಗಿದೆ. ವೇದಿಕೆಯಲ್ಲಿ ಕಮಲದ ಪೇಟ ತೊಡಿಸಿ, ಬೃಹತ್ ಕೇಸರಿ ಮತ್ತು ಹಸಿರು ಬಣ್ಣದ ಹಾರ ಹಾಕುವ ಮೂಲಕ ಕಾರ್ಯಕರ್ತರು ಸನ್ಮಾನಿಸಿದರು.
ಬಿಜೆಪಿ ಗ್ರಾಮ ಪರಿಕ್ರಮ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು, ಗ್ಯಾರಂಟಿ ಅಂತ ಹೇಳಿ ಕಾಂಗ್ರೆಸ್‌ನವರು ಕಡಿದು ಕಟ್ಟೆ ಹಾಕಿದ್ದು ಏನೂ ಇಲ್ಲ. ಕಾಂಗ್ರೆಸ್‌ನವರು ಕೊಡೋದಕ್ಕೂ ಮುಂಚೆ ನರೇಂದ್ರ ಮೋದಿ ಹತ್ತು ಕೆ.ಜಿ. ಹಕ್ಕಿ ಕೊಡುತ್ತಿದ್ದರು. ಬಡವರ ಬಗ್ಗೆ ಕಾಳಜಿ ಇರುವ ಪ್ರಧಾನ ಮಂತ್ರಿ ಈ ದೇಶದಲ್ಲಿದ್ದಾರೆ. ರಾಜ್ಯ ಸರ್ಕಾರ ರೈತರ ಪಂಪ್ ಸೆಟ್‌ಗಳಿಗೆ ಏಳು ತಾಸು ವಿದ್ಯುತ್ ಕೊಡದೇ ವಂಚನೆ ಮಾಡಿದೆ. ಇವರ ಯೋಗ್ಯತೆಗೆ ಕೇವಲ ಎರಡು ಮೂರು ತಾಸು ಕೊಡೋದಕ್ಕೂ ಆಗಿಲ್ಲ. ವಿದ್ಯುತ್ ಇಲ್ಲದೆ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಬಹಳಷ್ಟು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಸರ್ಕಾರ ಬಂದು ಎಂಟು, ಒಂಬತ್ತು ತಿಂಗಳಾದರೂ ಒಂದು ಹೊಸ ಯೋಜನೆ ನೀಡಿಲ್ಲ. ಈ ಹಿಂದೆ ಬಸವರಾಜ್ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಯಾವ ರೀತಿ ಯೋಜನೆಗಳನ್ನು ನೀಡಿದ್ದೇವೆ. ಆದರೆ, ಸಿಎಂ ಸಿದ್ದರಾಮಯ್ಯ ಖಜಾನೆ ಖಾಲಿಯಾಗಿರುವ ಸಂದರ್ಭದಲ್ಲಿ, ಆರ್ಥಿಕ ಸಂದಿಗ್ಧ ಪರಿಸ್ಥಿತಿ ಮುಚ್ಚಿ ಹಾಕಲು ನರೇಂದ್ರಮೋದಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ | Enilla.. Enilla! : ಏನಿಲ್ಲ ಏನಿಲ್ಲ.. ಕರಿಮಣಿ ಮಾಲೀಕ ನೀನಲ್ಲ.. ಹಾಡು ಬಳಸಿ ಸಿದ್ದರಾಮಯ್ಯ ಟ್ರೋಲ್ !
ಸಿದ್ದರಾಮಯ್ಯ ಹದಿನಾರು ಬಾರಿ ಬಜೆಟ್ ಮಂಡನೇ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರೈತರ ಆತ್ಮಹತ್ಯೆಗಳು ಕಡಿಮೆ ಆಗಿವೆ ಅಂತೇಳಿ ರಾಜ್ಯಪಾಲರಿಂದ ಹೇಳಿಸುತ್ತಾರೆ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಯಡಿಯೂರಪ್ಪ ಹಾಲಿಗೆ ಪ್ರೋತ್ಸಾಹಧನ ಕೊಟ್ಟಿದ್ದರು. ಆದರೆ, ಈ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.