Site icon Vistara News

Vistara News Launch | ವಿಸ್ತಾರ ನ್ಯೂಸ್‌ ಜಗದಗಲ ವ್ಯಾಪಿಸಲಿ, ಶುಭ ಕೋರಿದ ಪ್ರಲ್ಹಾದ್‌ ಜೋಶಿ

Joshi

ಬೆಂಗಳೂರು: “ರಾಜಕೀಯದ ಬಗ್ಗೆಯೇ ಮಾಧ್ಯಮಗಳು ಹೆಚ್ಚಾಗಿ ವರದಿ ಮಾಡುತ್ತಿರುವ ಮಧ್ಯೆಯೇ ಹೊಸ ಹಾದಿ ಹಿಡಿದು ಹೊರಟಿರುವ ವಿಸ್ತಾರ ನ್ಯೂಸ್‌ ಚಾನೆಲ್‌ (Vistara News Launch) ಖಂಡಿತವಾಗಿಯೂ ಯಶಸ್ವಿಯಾಗಲಿದೆ. ವಿಸ್ತಾರದ ಏಳಿಗೆಗೆ ಅದರ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರ ವಿಶ್ವಾಸಾರ್ಹತೆಯೇ ಕಾರಣ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ವಿಸ್ತಾರ ಪ್ರಕಾಶನ ಸಂಸ್ಥೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, “ಹರಿಪ್ರಕಾಶ್‌ ಕೋಣೆಮನೆ ಅವರು 20 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದು, ಅಪಾರ ಅನುಭವ ಹೊಂದಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿ ಮಾಧ್ಯಮಗಳ ನೀತಿ-ನಿಲುವುಗಳು, ಧೋರಣೆಗಳು, ನಂಬಿಕೆ, ವಿಶ್ವಾಸಾರ್ಹತೆ ಬದಲಾಗಿವೆ. ಆದರೆ, ಕೋಣೆಮನೆ ಅವರು ಪತ್ರಿಕೋದ್ಯಮದ ನಿಲುವುಗಳಿಗೆ ಬದ್ಧರಾಗಿರುತ್ತಾರೆ ಎಂಬ ವಿಶ್ವಾಸವಿದೆ” ಎಂದರು.

“ಸಾಮಾನ್ಯ ಜನರ ಕೈಯಲ್ಲೂ 5ಜಿ ತಂತ್ರಜ್ಞಾನ ಇರುವುದರಿಂದ ಯಾವುದೇ ಮಾಧ್ಯಮಗಳ ವಿಶ್ವಾಸಾರ್ಹತೆಯು ಪ್ರಮುಖವಾಗುತ್ತದೆ. ಜನರು ಮಾಧ್ಯಮಗಳ ಕುರಿತು ತೀರ್ಪು ನೀಡುತ್ತಾರೆ. ಹಾಗಾಗಿ, ಮಾಧ್ಯಮಗಳ ಅಸ್ತಿತ್ವವು ಜನರ ವಿಶ್ವಾಸದ ಮೇಲೆ ನಿಂತಿದೆ. ಇದನ್ನು ವಿಸ್ತಾರ ನ್ಯೂಸ್‌ ಗಳಿಸಲಿ ಎಂಬುದಾಗಿ ಆಶಿಸುತ್ತೇನೆ” ಎಂದು ಜೋಶಿ ತಿಳಿಸಿದರು.

“ಭಾರತದಲ್ಲಿ ಕಡಿಮೆ ದರದಲ್ಲಿ 5ಜಿ ಸೇವೆ ಲಭ್ಯವಿದೆ. ಅದರಲ್ಲೂ, ಮೇಕ್‌ ಇನ್‌ ಇಂಡಿಯಾ ಕಲ್ಪನೆಯಲ್ಲಿ ಸೇವೆ ಒದಗಿಸಲಾಗುತ್ತದೆ. ಕೇವಲ 15 ರೂ.ಗೆ 5ಜಿ ಸೇವೆ ಲಭ್ಯವಾಗುತ್ತಿದೆ. ಎಲ್ಲರೂ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ. ಹಾಗಾಗಿ, ಯಾವುದೇ ಮಾಧ್ಯಮದ ವಿಶ್ವಾಸಾರ್ಹತೆಯನ್ನು ಅಳೆಯುವುದು ಈಗ ಸುಲಭ” ಎಂದರು.

ಇದನ್ನೂ ಓದಿ | Vistara news launch | ವಿಸ್ತಾರ ಕನ್ನಡ ಸಂಭ್ರಮದಲ್ಲಿ ಪಂಡಿತ್‌ ವೆಂಕಟೇಶ್‌ ಕುಮಾರ್‌ ನಾದ ಸುಧೆ

Exit mobile version