Site icon Vistara News

Pramod Muthalik: ಡೀಲ್‌ ಮಾಸ್ಟರ್‌ ಎಂದಿದ್ದ ಸುನಿಲ್‌ ಕುಮಾರ್‌ ವಿರುದ್ಧ ಮುತಾಲಿಕ್‌ರಿಂದ ಮಾನನಷ್ಟ ಮೊಕದ್ದಮೆ

Pramod Muthalik files defamation case against Sunil Kumar

ಉಡುಪಿ: ಮಳೆ ನಿಂತರೂ ಹನಿ ನಿಲ್ಲದು ಎಂಬ ಗಾಧೆ ಮಾತಿಗೆ ಅನ್ವರ್ಥವಾಗುವಂತೆ ಕಾರ್ಕಳದಲ್ಲಿ ಗುರು-ಶಿಷ್ಯರ ಕಾಳಗ ಮುಂದುವರಿದಿದೆ. ಕಾರ್ಕಳ ಶಾಸಕ ಸುನಿಲ್ ಕುಮಾರ್ (Sunil Kumar) ಮೇಲೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಅವರು ಮಾನಹಾನಿ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮುಖಾಮುಖಿಯಾಗಿದ್ದ ಸುನಿಲ್ ಕುಮಾರ್‌ ಹಾಗೂ ಪ್ರಮೋದ್ ಮುತಾಲಿಕ್ ನಡುವೆ ಮಾತಿನ ಕಾಳಗ ಏರ್ಪಟ್ಟಿತ್ತು. ಒಬ್ಬರ ಮೇಲೊಬ್ಬರು ಕೆಸರೆರಚಾಟವನ್ನು ನಡೆಸಿಕೊಂಡು ಬರುತ್ತಲೇ ಇದ್ದರು.

ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸುನಿಲ್ ಕುಮಾರ್ ಗೆದ್ದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿದ್ದ ಪ್ರಮೋದ್‌ ಮುತಾಲಿಕ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಗೆದ್ದ ಖುಷಿಯಲ್ಲಿ ಬಿಜೆಪಿ ವಿಜಯೋತ್ಸವ ನಡೆಸಿದ್ದು, ಆಗ ಸುನಿಲ್ ಕುಮಾರ್ ಮಾತನಾಡಿ, ಮುತಾಲಿಕ್ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: Karnataka CM: ಒಂದೇ ಸಭೆಯಲ್ಲಿ 10,000 ಕೋಟಿ ರೂ. ಉಳಿಸಿದ ಸಿದ್ದರಾಮಯ್ಯ!: ಗ್ಯಾರಂಟಿ ಜಾರಿ ಹೀಗಿರಲಿದೆಯೇ?

ಡೀಲ್‌ ಮಾಸ್ಟರ್‌ ಎಂದಿದ್ದ ಸುನಿಲ್‌ ಕುಮಾರ್

‌ಪ್ರಮೋದ್‌ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್, ಹಣ ಪಡೆದು ಸ್ಪರ್ಧೆ ಮಾಡುತ್ತಾರೆ ಎಂದು ಸುನಿಲ್ ಕುಮಾರ್‌ ವಾಗ್ದಾಳಿ ನಡೆಸಿದ್ದರು. ಸದ್ಯ ಇದೇ ಹೇಳಿಕೆಗಳ ವಿರುದ್ಧ ಪ್ರಮೋದ್ ಮುತಾಲಿಕ್ ಅವರು ಸುನಿಲ್‌ ಕುಮಾರ್‌ ವಿರುದ್ಧ ಕಾರ್ಕಳ ನಗರದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Exit mobile version