Site icon Vistara News

ಪೂರ್ಣಗೊಳ್ಳದ ಬೆಂಗಳೂರು-ನಿಡಘಟ್ಟ ಮಾರ್ಗದ ಕಾಮಗಾರಿ; ಸಂಸದ ಪ್ರತಾಪ್‌ ಸಿಂಹ ಕ್ಷಮೆಯಾಚನೆ

mysore bangalore highway

ಬೆಂಗಳೂರು: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಹಂತವಾದ ಬೆಂಗಳೂರು-ನಿಡಘಟ್ಟ 58 ಕಿ.ಮೀ. ಮಾರ್ಗವನ್ನು ಜುಲೈನಲ್ಲಿ ಸಂಚಾರಕ್ಕೆ ತೆರವು ಮಾಡಿಸುತ್ತೇನೆ ಎಂದಿದ್ದೆ, ನಂತರ ಆಗಸ್ಟ್ 15 ರಂದು ಬಿಡದಿ, ರಾಮನಗರ-ಚನ್ನಪಟ್ಟಣ ಬೈಪಾಸ್ ಓಪನ್ ಮಾಡುತ್ತೇವೆ ಎಂದು ಈ ಹಿಂದೆ ಭರವಸೆ ನೀಡಿದ್ದೆ ಅದು ಸಾಧ್ಯವಾಗಿಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಕ್ಷಮೆ ಯಾಚಿಸಿದ್ದಾರೆ.

ಭಾನುವಾರ ಈ ಕುರಿತು ಟ್ವೀಟ್‌ ಮಾಡಿರುವ ಅವರು, “ಮಾತಿಗೆ ತಪ್ಪಿದ್ದೇನೆ, ದಯವಿಟ್ಟು ಕ್ಷಮಿಸಿʼʼ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. “ಎಲ್ಲ ಪ್ರಯತ್ನಗಳ ನಡುವೆಯೂ ಇನ್ನೂ ವಾರ, ಹತ್ತು ದಿನಗಳ ಕೆಲಸ ಬಾಕಿಯಿದೆ. ಗುಡ್ಡ ಕಡಿದು ರಸ್ತೆ ನಿರ್ಮಾಣ ನಡೆಯುತ್ತಿದೆ, ಸ್ವಲ್ಪ ಕಾಲಾವಕಾಶ ನೀಡಿ, ಪ್ಲೀಸ್…ʼʼ ಎಂದು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 275ರ ಭಾಗವಾಗಿರುವ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆಗೆ ಸಾಕ್ಷಿಯಾಗುವ 61 ಕಿ.ಮಿ.ಗಳ ರಸ್ತೆಯನ್ನು ಆರು ಲೇನ್‌ಗಳ ರಸ್ತೆಯಾಗಿ ಅಭಿವೃದ್ಧಿಪಡಿಸುವ 2,920 ಕೋಟಿ ರೂ.ಗಳ ಬೃಹತ್‌ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಈ ಯೋಜನೆಗೆ ೨೦೧೮ರಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು.

ಇದನ್ನೂ ಓದಿ| ಮುಂದಿನ ದಸರಾದೊಳಗೆ ಬೆಂಗಳೂರು- ಮೈಸೂರು ದಶಪಥ ಪೂರ್ಣ: ಪ್ರತಾಪ್‌ಸಿಂಹ

Exit mobile version