Site icon Vistara News

Praveen Nettaru | ಸಿಎಂ ಮುಂದೆ ದುಃಖ ತೋಡಿಕೊಂಡ ಪ್ರವೀಣ್‌ ಕುಟುಂಬ; ಸರಕಾರದಿಂದ 25 ಲಕ್ಷ ರೂ. ಪರಿಹಾರ

CM at Nettaru

ನೆಟ್ಟಾರು(ಸುಳ್ಯ ತಾಲೂಕು, ದ.ಕನ್ನಡ): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಸಂಜೆ ನೆಟ್ಟಾರಿನಲ್ಲಿರುವ ಪ್ರವೀಣ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕೊಲೆಯಾದ ಪ್ರವೀಣ್‌ ನೆಟ್ಟಾರು ಅವರ ಪತ್ನಿ, ತಾಯಿ ಮತ್ತು ಕುಟುಂಬಿಕರು ತಮ್ಮ ದುಃಖ ಮತ್ತು ಆಕ್ರೋಶವನ್ನು ಸಿಎಂ ಮುಂದೆ ತೋಡಿಕೊಂಡರು.

ಗುರುವಾರ ಬೆಂಗಳೂರಿನಿಂದ ಹೊರಟ ಸಿಎಂ ಅವರು ಮಂಗಳೂರು ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರಿನ ಮನೆಗೆ ಭೇಟಿ ನೀಡಿದರು. ಮನೆಯಲ್ಲಿ ಪ್ರವೀಣ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ ಅವರು ಸಾಂತ್ವನ ಹೇಳಿದರು.
ಕುಟುಂಬದ ಸದಸ್ಯರು ತಮ್ಮ ನೋವು ಹಾಗೂ ಆಕ್ರೋಶದ ಮಾತುಗಳನ್ನು ಸಿಎಂ ಮುಂದೆಯೂ ತೋಡಿಕೊಂಡರು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ ಸಿಎಂ ಅವರು ಸರಕಾರದ ವತಿಯಿಂದ ೨೫ ಲಕ್ಷ ರೂ. ಪರಿಹಾರ ಪ್ರಕಟಿಸಿದರು.

ಸಿಎಂ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್‌ ಅಂಗಾರ, ಆರೆಸ್ಸೆಸ್‌ನ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಸೇರಿದಂತೆ ಹಲವು ನಾಯಕರು ಜತೆಗಿದ್ದರು.

Praveen Nettaru |  ಹತ್ಯೆ ಆರೋಪಿಗಳಾದ ಶಫೀಕ್‌, ಝಾಕೀರ್‌ ಆ.11ರವರೆಗೆ ನ್ಯಾಯಾಂಗ ಬಂಧನಕ್ಕೆ

Exit mobile version