Site icon Vistara News

Audio Leak | ಕಾಂಗ್ರೆಸ್ ಸರ್ಕಾರ ಆಗಿದ್ರೆ ಕಲ್ಲು ಹೊಡೆಯಬಹುದಿತ್ತು ಎಂದ ತೇಜಸ್ವಿ!

Audio Leak

ತೇಜಸ್ವಿ ಸೂರ್ಯ ಮತ್ತು ಯುವ ಮೋರ್ಚಾ ಮುಖಂಡನ ನಡುವಿನ ಆಡಿಯೊ ಕೇಳಿ

https://vistaranews.com/attribute-61604/2022/07/28/praveen-nettaru-issue-tejaswi-surya-audio-viral/praveen-nettaru-3/

ಚಿಕ್ಕಮಗಳೂರು: ಕಾಂಗ್ರೆಸ್ ಸರ್ಕಾರವಾಗಿದ್ರೆ ಕಲ್ಲು ಹೊಡೆಯಬಹುದಿತ್ತು. ನಮ್ಮದೇ ಸರ್ಕಾರ ಇದೆ. ಏನು ಮಾಡೋದು!
ಇದು, ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ಮಾತು!

ಬಿಜೆಪಿ ಯುವ ಮೋರ್ಚಾ ಮುಖಂಡರೊಬ್ಬರ ಜತೆ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋ ಈಗ ಬಯಲಾಗಿದೆ. ತೇಜಸ್ವಿ ಸೂರ್ಯ ಅವರು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಸಂದೀಪ್ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಸಾಮೂಹಿಕ ರಾಜೀನಾಮೆ ನೀಡಿರುವ ಕುರಿತು ಅವರಿಬ್ಬರ ನಡುವೆ ಮಾತುಕತೆ ಇದಾಗಿದೆ.

ಇದನ್ನೂ ಓದಿ | praveen Nettaru| ಪ್ರವೀಣ್‌ ಕೊಲೆಯಲ್ಲಿ ನೇರವಾಗಿ ಭಾಗಿಯಾದ ಬೆಳ್ಳಾರೆ ಮೂಲದ ವ್ಯಕ್ತಿ ಬಂಧನ?

ತೇಜಸ್ವಿ ಸೂರ್ಯ ಹಾಗೂ ಸಂದೀಪ್ ನಡುವಿನ ಸಂಭಾಷಣೆ‌ ಹೀಗಿದೆ.
ತೇಜಸ್ವಿ ಸೂರ್ಯ: ಹಲೋ ಸಂದೀಪ್ ನಾನು ತೇಜಸ್ವಿ ಸೂರ್ಯ ಮಾತಾನಾಡುತ್ತಿರೋದು
ಸಂದೀಪ್: ಹೇಳಿ ಜೀ
ತೇಜಸ್ವಿ ಸೂರ್ಯ ಮ: ಸಂಜೆ ಮೀಟಿಂಗ್ ಇರೋದು ಮೆಸೇಜ್ ಬಂತಾ?
ಸಂದೀಪ್ : ಇಲ್ಲ ಜೀ ನೋಡಿಲ್ಲ
ತೇಜಸ್ವಿ ಸೂರ್ಯ : ಓಕೆ ನೀವು ರಾಜೀನಾಮೆ ನೀಡಿದ್ದೀರಾ?
ಸಂದೀಪ್ : ಹೌದು ಜಿ. ಏನ್ ಮಾಡೋದು? ಕಾರ್ಯಕರ್ತರ ಸಾವು ಜಾಸ್ತಿ ಆಗ್ತಿವೆ.
ತೇಜಸ್ವಿ ಸೂರ್ಯ : ಹೌದು ನಿಮ್ಗೆ ಎಷ್ಟು ಆಕ್ರೋಶ ಇದ್ದೀಯೋ ನಮ್ಗೂ ಅಷ್ಟೇ ಆಕ್ರೋಶ ಇದೆ.
ಸಂದೀಪ್: ಹೌದು ಬಟ್ ಕಾರ್ಯಕರ್ತರ ಬಗ್ಗೆ ನಾಯಕರು ಗಮನ ಹರಿಸುತ್ತಿಲ್ಲ, ನೀವು ಸ್ವಲ್ಪ ಗಮನ ಹರಿಸಿ.
ತೇಜಸ್ವಿ: ಕಾಂಗ್ರೆಸ್ ಸರ್ಕಾರವಾಗಿದ್ರೆ ಕಲ್ಲು ಹೊಡೆಯಬಹುದಿತ್ತು, ನಮ್ಮದೇ ಸರ್ಕಾರ ಇದೇ, ಏನು ಮಾಡೋದು? ಎಲ್ಲಾ ಜಿಲ್ಲಾಧ್ಯಕ್ಷರು ಸೇರಿ ಸಿಎಂ ಭೇಟಿ ಮಾಡೋಣ
ರಾಜೀನಾಮೆ ವಾಪಸ್ಸು ತೆಗೆದುಕೊಳ್ಳಿ, ನಾನು ನಾಲ್ಕು ಲೈನ್ ಟೈಫ್ ಮಾಡಿ ಕಳುಹಿಸುತ್ತೇನೆ, ಅದನ್ನ ಗ್ರೂಪ್ ಗೆ ಹಾಕಿ
ಸಂದೀಪ್: ಇಲ್ಲ ಜೀ, ಸಾಮೂಹಿಕವಾಗಿ ತೀರ್ಮಾನ ಕೈಗೊಂಡಿರೋದು, ಹಾಗೇ ಮಾಡೋದು ಸರಿ ಆಗೋಲ್ಲ.
ತೇಜಸ್ವಿ: ಇರಲಿ ಸಿಎಂ ಬಳಿ ಹೋಗೋಣ, ಓಕೆ ನಾ?

ಇದನ್ನೂ ಓದಿ | praveen Nettaru| ಪ್ರವೀಣ್‌ ಕೊಲೆಯಲ್ಲಿ ನೇರವಾಗಿ ಭಾಗಿಯಾದ ಬೆಳ್ಳಾರೆ ಮೂಲದ ವ್ಯಕ್ತಿ ಬಂಧನ?

Exit mobile version