ಮಂಗಳೂರು: ಮಗನನ್ನು ಕಳೆದುಕೊಂಡ ದುಃಖದಲ್ಲಿರುವ ಪ್ರವೀಣ್ ನೆಟ್ಟಾರು ಅವರ ತಂದೆ ಶೇಖರ ಪೂಜಾರಿ ಅವರು ಅಸ್ವಸ್ಥರಾಗಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಎರಡು ದಿನಗಳಿಂದ ನಿರಂತರ ನೋವು ಮತ್ತು ಶೋಕದಿಂದ ನರಳಿದ ಶೇಖರ ಪೂಜಾರಿ ಅವರು ಗುರುವಾರ ಬೆಳಗಿನ ಹೊತ್ತು ಅಸ್ವಸ್ಥರಾಗಿದ್ದರು. ಅವರಿಗೆ ಹೃದಯದ ಸಮಸ್ಯೆಯೂ ಇತ್ತು. ಹೀಗಾಗಿ ಮನೆಗೇ ವೈದ್ಯರನ್ನು ಕರೆಸಿ ತಪಾಸಣೆ ನಡೆಸಲಾಯಿತು.
ಬಳಿಕ ಹೃದಯದ ಸಮಸ್ಯೆ ಇರುವುದರಿಂದ ಇಸಿಜಿ ಮಾಡಿಸುವುದಕ್ಕಾಗಿ ಅಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈಗ ಅವರ ಆರೋಗ್ಯ ಸುಧಾರಿಸಿದೆ.
ಪ್ರವೀಣ್ ನೆಟ್ಟಾರು ಅವರ ಮನೆಗೆ ಬುಧವಾರ ಕೆಲವು ನಾಯಕರು ಹೋಗಲು ಪ್ರಯತ್ನಿಸಿದ್ದರೂ ಜನರ ಗಲಾಟೆಯಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಗುರುವಾರ ಬೆಳಗ್ಗಿನಿಂದ ಹಲವರು ಆಗಮಿಸಿದ್ದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಬೆಳಗ್ಗೆ ಮನೆಗೆ ಹೋದಾಗ ಮೊದಲು ಶೇಖರ ಪೂಜಾರಿ ಅವರು ಬಿಜೆಪಿ ನಾಯಕರ ನಡೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಮಠಂದೂರು ಅವರು ಸಮಾಧಾನ ಮಾಡಿದರು. ಈ ವೇಳೆಗಾಗಲೇ ಶೇಖರ ಪೂಜಾರಿ ಸ್ವಲ್ಪ ಅಸ್ವಸ್ಥರಾಗಿದ್ದರು.
Praveen Nettaru | ಬಂಧಿತ ಶಫೀಕ್ ಕೆಲಸ ಮಾಡುತ್ತಿದ್ದ ಅಂಗಡಿ ಮೇಲೆ ಕಲ್ಲಿನ ದಾಳಿ