ಬೆಂಗಳೂರು: ರಾಜ್ಯದಲ್ಲಿನ ಅತಿವೃಷ್ಟಿ ನಿಯಂತ್ರಣಕ್ಕಾಗಿ ಕೆಪಿಸಿಸಿ ಶೃಂಗೇರಿಯ ಋಷ್ಯಶೃಂಗೇಶ್ವರ ದೇವಸ್ಥಾನದ ಮೊರೆ ಹೋಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೇವಸ್ಥಾನದ ಆಡಳಿತಾಧಿಕಾರಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ರೈತರು ಮತ್ತು ಕೃಷಿ ಕಾರ್ಮಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಅನೇಕರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ ಕೃಷಿ ಜಮೀನುಗಳು ಕೊಚ್ಚಿಹೋಗಿವೆ. ರೈತರು ಬೆಳೆದ ಫಸಲು ನಿರೂಪಲಾಗಿದೆ. ಮಳೆ ಹೀಗೆ ಮುಂದುವರಿದರೆ ರಾಜ್ಯದ ರೈತರು ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕುವ ಲಕ್ಷಣಗಳು ಗೋಚರಿಸುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಅವರು ಪತ್ರದಲ್ಲಿ ವಿನಂತಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 9ರಂದು ಅತಿವೃಷ್ಟಿ ನಿವಾರಣೆಗಾಗಿ ಪ್ರಾರ್ಥನೆ ಹಾಗೂ ಅರ್ಚನೆ ನೆರವೇರಿಸುವಂತೆ ಈ ಪತ್ರವನ್ನು ನಮ್ಮ ಪ್ರತಿನಿಧಿ ಸಚಿನ್ ಮೀಗಾ ಅವರ ಮೂಲಕ ಕಳುಹಿಸಿ ಕೊಡುತ್ತಿದ್ದೇನೆ. ತಾವು ಪೂಜಾ ಕಾರ್ಯಗಳನ್ನು ನೆರವೇರಿಸುವಂತೆ ರಾಜ್ಯದ ರೈತರ ಪರವಾಗಿ ಕೇಳಿಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ | ಸಿದ್ದರಾಮೋತ್ಸವಕ್ಕೆ ರಾಹುಲ್ ಬಂದಿದ್ರು; ಆಗಸ್ಟ್ 15ಕ್ಕೆ ಪ್ರಿಯಾಂಕಾ ಗಾಂಧಿ ಬರ್ತಾರ?