ಚಿತ್ರದುರ್ಗ: ಸೂಕ್ತ ಸಮಯಕ್ಕೆ ವೈದ್ಯರು ಆಸ್ಪತ್ರೆಗೆ ಬಾರದ ಹಿನ್ನೆಲೆಯಲ್ಲಿ ಗರ್ಭಿಣಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ (Chitradurga News) ನಡೆದಿದೆ. ಹೊಸದುರ್ಗ ತಾಲೂಕಿನ ಕೆ.ಕೆ.ಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯೆ ನಿರ್ಲಕ್ಷ್ಯದಿಂದಲೇ ಗರ್ಭಿಣಿ ಮೃತಪಟ್ಟಿದ್ದಾರೆ ಎಂದು ಮೃತ ಗರ್ಭಿಣಿಯ ಪತಿ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.
ಹೊಸದುರ್ಗ ತಾಲೂಕಿನ ಕಸಪ್ಪನಹಳ್ಳಿ ಗ್ರಾಮದ ಈಶ್ವರಪ್ಪ ಪತ್ನಿ ಕಲ್ಪನಾ (30) ಮೃತರು. ಕೆ.ಕೆ.ಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಪ್ರೇಮಕುಮಾರಿ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಪ್ರಕರಣದ ಬಗ್ಗೆ ಮೃತ ಗರ್ಭಿಣಿ ಕಲ್ಪನಾ ಪತಿ ಈಶ್ವರಪ್ಪ ಪ್ರತಿಕ್ರಿಯಿಸಿ, ಮಂಗಳವಾರ ರಾತ್ರಿ ಆಸ್ಪತ್ರೆಗೆ ಬಂದು ದಾಖಲಾಗಲು ವೈದ್ಯೆ ಪ್ರೇಮಕುಮಾರಿ ಹೇಳಿದ್ದರು. ಆದರೆ, ರಾತ್ರಿ ಅವರು ಬಂದಿರಲಿಲ್ಲ. ತಡರಾತ್ರಿ ಪತ್ನಿಗೆ ಹೆರಿಗೆ ನೋವು ಜಾಸ್ತಿಯಾಗಿತ್ತು. ಬುಧವಾರ ಬೆಳಗ್ಗೆ 10 ಗಂಟೆಯಾದರೂ ವೈದ್ಯೆ ಬಂದಿರಲಿಲ್ಲ. ಹೆರಿಗೆ ನೋವು ತಾಳಲಾರದೆ ಪತ್ನಿ ಮೃತಪಟ್ಟ ಮೇಲೆ ಸಿಬ್ಬಂದಿ ಹೊಸದುರ್ಗ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ | ಪತ್ನಿಯ ಸಂತೋಷಕ್ಕಾಗಿ 7ವರ್ಷದ ಮಗನನ್ನು ಕೊಂದ ದುರುಳ; ಕೂಲರ್ ಆಸೆ ತೋರಿಸಿ ಕತ್ತು ಕೊಯ್ದ!
ಸೂಕ್ತ ಸಮಯಕ್ಕೆ ವೈದ್ಯೆ ಬಾರದ ಹಿನ್ನೆಲೆಯಲ್ಲಿ ತಾಯಿ, ಮಗು ಮೃತಪಟ್ಟಿದ್ದಾರೆ. ಹೀಗಾಗಿ ವೈದ್ಯೆ ಪ್ರೇಮಕುಮಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗರ್ಭಿಣಿ ಮೃತದೇಹದೊಂದಿಗೆ ಹೊಸದುರ್ಗ ಸಾರ್ವಜನಿಕ ಆಸ್ಪತ್ರೆ ಬಳಿ ನೂರಾರು ಮಂದಿ ಜಮಾಯಿಸಿದ್ದರಿಂದ, ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ರಾಘವೇಂದ್ರ ಪ್ರಸಾದ್ ಆಗಮಿಸಿ ಮಾಹಿತಿ ಪಡೆದರು. ಬಳಿಕ ವೈದ್ಯೆ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಗೆ ಮೃತ ಗರ್ಭಿಣಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ರಸ್ತೆ ಪಕ್ಕದ ಗುಡ್ಡಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ, ನಾಲ್ವರಿಗೆ ಗಂಭೀರ ಗಾಯ
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗುಡ್ಡಕ್ಕೆ ಕಾರು ಡಿಕ್ಕಿಯಾಗಿ ಪಟ್ಟಿಯಾಗಿದ್ದರಿಂದ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲೂಕಿನ ಕವಿಕಲ್ ಗಂಡಿ ತಪ್ಪಲಿನಲ್ಲಿ ಮಂಗಳವಾರ ನಡೆದಿದೆ.
ಮೈಸೂರು ಜಿಲ್ಲೆಯ ಕೆ.ಆರ್. ನಗರ ಮೂಲದ ಪ್ರವಾಸಿಗರು ಗಾಯಾಳುಗಳಾಗಿದ್ದು, ಅವರನ್ನು ಚಿಕ್ಕಮಗಳೂರಿನ ಆಶ್ರಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಗಂಭಿರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಕ್ಕನನ್ನು ಎಬ್ಬಿಸಲು ತಮ್ಮ ಪ್ರಯತ್ನಿಸುತ್ತಿದ್ದದ್ದು ಮನಕಲಕುವಂತಿತ್ತು.
ಇದನ್ನೂ ಓದಿ | Cow slaughter: ಜಾನುವಾರು ಸಾಗಾಟದ ವೇಳೆ ಸಾವು; ಪುನೀತ್ ಕೆರೆಹಳ್ಳಿ ಟೀಮ್‌ಗೆ ಷರತ್ತುಬದ್ಧ ಜಾಮೀನು
ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಕವಿಕಲ್ ಗಂಡಿಯ ಮುಖ್ಯರಸ್ತೆಯಿಂದ ಕೆಳ ರಸ್ತೆಗೆ ಉರುಳಿ ಬಿದ್ದಿದೆ. ಬರೋಬ್ಬರಿ ಇಪ್ಪತ್ತಕ್ಕೂ ಹೆಚ್ಚು ಪಲ್ಟಿ ಹೊಡೆದು ಕಾರು 100 ಅಡಿ ಕಂದಕ ದಾಟಿ ರಸ್ತೆಗೆ ಬಿದ್ದಿದೆ.