ಬೆಂಗಳೂರು: ಅಗತ್ಯ ವಸ್ತುಗಳ ದರ ಏರಿಕೆ (Price Hike) ಆಗುತ್ತಿರುವ ಬೆನ್ನಲ್ಲೇ ಈಗ ಅಕ್ಕಿ ದರವೂ ದುಬಾರಿ ಆಗುತ್ತಿದ್ದು, ಜನರ ಮೇಲೆ ಬೆಲೆ ಏರಿಕೆ ಬರೆ ಹಾಕಲಾಗುತ್ತಿದೆ. ಅಕ್ಕಿಯ ದರದಲ್ಲಿ ಇತ್ತೀಚೆಗೆ ಶೇ.10-15ರಷ್ಟು ದರ ಏರಿಕೆಯಾಗಿದೆ. ಸತತ ಮಳೆಯಿಂದಾಗಿ ಬೆಳೆ ಹಾನಿ, ಬಾಂಗ್ಲಾದೇಶಕ್ಕೆ ಅಕ್ಕಿ ರಫ್ತು ಹಾಗೂ ಜಿಎಸ್‌ಟಿ ಕಾರಣಗಳಿಂದ ದರ ಏರಿಕೆ ಉಂಟಾಗಿದೆ ಎಂದು (Rice price rise ) ತಜ್ಞರು ತಿಳಿಸಿದ್ದಾರೆ.
ಮಾರ್ಚ್- ಏಪ್ರಿಲ್‍ನಲ್ಲಿ ಬಂದ ಮಳೆಯು ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭತ್ತದ ಬೆಳೆ ನಾಶವಾಯಿತು. ಹೀಗಾಗಿ, ಕರ್ನಾಟಕದಿಂದ ಭತ್ತ ಖರೀದಿಸಲು ಮುಂದಾಗಿವೆ. ಜತೆಗೆ ರಫ್ತು ಬೇಡಿಕೆ ಹೆಚ್ಚಾದ ಪರಿಣಾಮ ಅಕ್ಕಿಯ ಬೆಲೆ ಏರಿಕೆಯಾಗಿದೆ. 25 ಕೆಜಿ ಚೀಲದ ಅಕ್ಕಿಗೆ 200 ರೂಪಾಯಿವರೆಗೂ ಏರಿಕೆ ಆಗಿದೆ.
ಅಕ್ಕಿ ದರ ಏರಿಕೆ ಮಧ್ಯೆ ಹಾಲಿನ ದರ ಏರಿಸಲು ಕೆಎಂಎಫ್ ತುದಿಗಾಲಿನಲ್ಲಿ ನಿಂತಿದೆ. ಜತೆಗೆ ತೈಲ ಕಂಪನಿಗಳು ಅಡುಗೆ ಎಣ್ಣೆ ಬೆಲೆ ಏರಿಕೆಗೆ ಸಿದ್ಧವಾಗುತ್ತಿದೆ. 1 ಲೀಟರ್ ಅಡುಗೆ ಎಣ್ಣೆ ಬೆಲೆಯಲ್ಲಿ ಶೇ. 5-10% ಏರಿಕೆ ಮಾಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿದ್ದು, ದಿನನಿತ್ಯದ ವಸ್ತುಗಳ ದರ ಏರಿಕೆಯಾಗುತ್ತಿರುವುದರಿಂದ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳುವಂತಾಗುತ್ತಿದೆ.
ಇದನ್ನೂ ಓದಿ | Rice price rise | ಅಕ್ಕಿಯ ದರದಲ್ಲಿ ಪ್ರತಿ ಕೆ.ಜಿಗೆ 8-10 ರೂ. ಏರಿಕೆ, ಕಾರಣವೇನು?