Site icon Vistara News

BS Yediyurappa : ಬಿಎಸ್‌ವೈ ಜನ್ಮದಿನದ ಸಂಭ್ರಮಕ್ಕೆ ಸಾಥ್‌ ನೀಡಿದ ಪ್ರಧಾನಿ ಮೋದಿ: ಇಲ್ಲಿದೆ ಸುಂದರ ಚಿತ್ರ ಸಂಚಯ

BS Yediyurappa Birthday

#image_title

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿಯ ಬಲಿಷ್ಠ ನಾಯಕ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರು ೮೦ನೇ ವಸಂತ ಪೂರೈಸಿದ ಸಂಭ್ರಮದ ಸಂದರ್ಭದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಸಾಥ್‌ ನೀಡಿದ್ದು ವಿಶೇಷವಾಗಿತ್ತು. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರ ಹುಟ್ಟುಹಬ್ಬದ ದಿನವೇ ಅವರ ಕನಸಿನ ಕೂಸಾದ ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ನರೇಂದ್ರ ಮೋದಿ ನೆರವೇರಿಸುವ ಮೂಲಕ ಗೌರವ ಸಲ್ಲಿಸಿದರು. ನರೇಂದ್ರ ಮೋದಿ ಅವರು ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದ ಉದ್ದಕ್ಕೂ ಯಡಿಯೂರಪ್ಪ ಅವರನ್ನು ಆತ್ಮೀಯವಾಗಿ ನಡೆಸಿಕೊಂಡಿದ್ದು ಕಂಡುಬಂತು. ರೈತ ನಾಯಕನೆಂದೇ ಖ್ಯಾತಿ ಪಡೆದ ಯಡಿಯೂರಪ್ಪ ಅವರಿಗೆ ಹಸಿರು ಶಾಲು ತೊಡಿಸಿ, ನೇಗಿಲನ್ನು ಉಡುಗೊರೆಯಾಗಿ ನೀಡಿ ಗೌರವ ಸಲ್ಲಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಾಗ ಮೋದಿ ಅವರನ್ನು ಯಡಿಯೂರಪ್ಪ ಅವರು ಸ್ವಾಗತಿಸಿದ್ದು ಹೀಗೆ. ಮೋದಿ ಅವರು ಯಡಿಯೂರಪ್ಪ ಅವರನ್ನು ಕೂಡಾ ಅಷ್ಟೇ ಆತ್ಮೀಯತೆಯಿಂದ ನೋಡಿಕೊಂಡರು.
ಪ್ರಧಾನಿ ಮೋದಿ ಅವರೇ ಯಡಿಯೂರಪ್ಪ ಅವರನ್ನು ಕೈಯಲ್ಲಿ ಹಿಡಿದು ವೇದಿಕೆಗೆ ಕರೆದುಕೊಂಡು ಬಂದ ಕ್ಷಣ.
ವಿಮಾನ ನಿಲ್ದಾಣ ಉದ್ಘಾಟನಾ ವೇದಿಕೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ಕೈ ಹಿಡಿದು ಅಭಿನಂದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ. ಮೋದಿ ಮತ್ತು ಯಡಿಯೂರಪ್ಪ ಇಬ್ಬರ ಮುಖದಲ್ಲಿರುವ ನಗುವೇ ಆ ಕ್ಷಣದ ಸಂಭ್ರಮವನ್ನು ತೋರಿಸುತ್ತದೆ.
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ ಮೋದಿ ಅವರಿಗೆ ಯಡಿಯೂರಪ್ಪ ಅವರು ಪೇಟ ಇಟ್ಟು ಗೌರವಿಸಿದರು ಬಿಜೆಪಿಯ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು.
ಜನುಮದಿನದ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುವುದನ್ನು ಘೋಷಿಸಿದಾಗ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಬಿ.ಎಸ್‌. ಯಡಿಯೂರಪ್ಪ ಅವರ ಕೈ ಹಿಡಿದು ಮುಂದಕ್ಕೆ ಕರೆ ತಂದರು. ಯಡಿಯೂರಪ್ಪ ಅವರು ತುಂಬ ಭಾವಪರವಶರಾಗಿ ಮುಂದೆ ಬಂದರು.
ಜನುಮ ದಿನದ ಸಂದರ್ಭದಲ್ಲಿ ಹಸಿರು ಶಾಲು ಹಾಕಿ ಸನ್ಮಾನಿಸಿದ ಪ್ರಧಾನಿ ಮೋದಿ ಅವರ ಕೈಯನ್ನು ಹಿಡಿದುಕೊಂಡು ಧನ್ಯವಾದ ಹೇಳಿದರು ಬಿ.ಎಸ್‌. ಯಡಿಯೂರಪ್ಪ.
ಹಸಿರು ಶಾಲು ಹೊದಿಸಿದ ಬಳಿಕ ವಿಶೇಷ ಹಾರವನ್ನು ಹಾಕಿ ಮೋದಿ ಅವರು ಗೌರವಿಸಿದ ಕ್ಷಣ.

Exit mobile version