Site icon Vistara News

Karnataka Election: ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವೆ; ಉದ್ಯೋಗ ಹೆಚ್ಚಿಸಲು ಶ್ರಮಿಸುವೆ: ಬಸವರಾಜ ಹುಂದ್ರಿ

Priority will be given to the development of the constituency Will work hard to boost jobs says Basavaraj Hundri Karnataka Election updates

ಬೆಳಗಾವಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಪಕ್ಷ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಟಿಕೆಟ್ ನೀಡಿದೆ. ಜಿಲ್ಲಾ ನಾಯಕರೂ ಸಹ ನನ್ನ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವೆ. ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ, ನೀರಾವರಿ ಅಭಿವೃದ್ಧಿ ಮಾಡುವುದರ ಜತೆಗೆ ಉದ್ಯೋಗ ಹೆಚ್ಚಿಸಲು ಶ್ರಮಿಸುವೆ ಎಂದು ಯಮಕನಮರಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ (Basavaraj Hundri) ಹೇಳಿದರು.

ಯಮಕನಮರಡಿಯಲ್ಲಿ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ, ಡಬಲ್ ಎಂಜಿನ್ ಸರ್ಕಾರ ಮಾಡಿದ ಸಾಧನೆ ನನಗೆ ವರದಾನ‌ ಆಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಮಾಡಿದ ಕೆಲಸ, ಉಜ್ವಲ ಯೋಜನೆ ಸೇರಿದಂತೆ ಎಲ್ಲವೂ ನನ್ನ ಕೈ ಹಿಡಿಯಲಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಲು ನಾನು ಬದ್ಧನಾಗಿದ್ದೇನೆ. ನಾನು ಎಂಎ, ಬಿ.ಇಡಿ ಮಾಡಿದ ವಿದ್ಯಾವಂತನಾಗಿದ್ದೇನೆ. ಜನರ ಬೇಡಿಕೆಯ ಬಗ್ಗೆ ನನಗೆ ಅರಿವಿದೆ ಎಂದು ಬಸವರಾಜ ಹುಂದ್ರಿ ಪ್ರತಿಕ್ರಿಯೆ ನೀಡಿದ್ದಾರೆ.

ನೀವು ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂಬ ಆಪಾದನೆ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಂಥ ನಾಯಕರು ನಮ್ಮ ಕ್ಷೇತ್ರದಲ್ಲಿ ಬಂದು ಹೋದ ಮೇಲೆ ಎಂತಹ ಹೊಂದಾಣಿಕೆ? ಇದೆಲ್ಲ ಅಪ ಪ್ರಚಾರವಾಗಿದೆ. ಸಾಮಾನ್ಯರು ಶಾಸಕರಾಗಬಾರದಾ ಎಂದು ಪ್ರಶ್ನೆ ಮಾಡಿದರು.

ಈ ಬಾರಿ ನನ್ನ ಗೆಲುವು ನಿಶ್ಚಿತ

ಮಾರುತಿ ಅಷ್ಟಗಿಯವರುನ್ನು ಪಕ್ಷದಲ್ಲೇ ಇಟ್ಟುಕೊಳ್ಳುವಲ್ಲಿ ಬಿಜೆಪಿ ನಾಯಕರು ವಿಫಲರಾದರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಹಂದ್ರಿ, ನಾಯಕರು ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಹಲವು ಪ್ರಯತ್ನ ಮಾಡಿದರು. ಆದರೂ ಸಹ ಅವರು ಬೇರೆ ಕಡೆ ಹೋಗಿ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ, ಅದರಿಂದ ಪಕ್ಷಕ್ಕೇನೂ ಸಮಸ್ಯೆಯಾಗದು. ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದು ಹೇಳಿದರು.

ಇದನ್ನೂ ಓದಿ: Karnataka Election 2023: ನಾನು ತುಂಡ್ ಮಂತ್ರಿ, ವಸತಿ ಖಾತೆ ಮಂತ್ರಿಗಿರಿನೇ ಅಲ್ಲ: ವಿ. ಸೋಮಣ್ಣ

ಬಸವರಾಜ ಹುಂದ್ರಿ ಅವರ ಮತಬೇಟೆಯ ವಿಡಿಯೊ ಇಲ್ಲಿದೆ

ಖಂಡಿತವಾಗಿಯೂ ಆಯ್ಕೆಯಾಗುತ್ತೇನೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೀರಿ. ಈ ಬಗ್ಗೆ ಎಷ್ಟು ಕಾನ್ಫಿಡೆಂಟ್ ಆಗಿದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಬಸವರಾಜ ಹಂದ್ರಿ, ಬಿಜೆಪಿಯು ಕಾರ್ಯಕರ್ತರ ಪಕ್ಷವಾಗಿದೆ. ಇಲ್ಲಿ ತಳಮಟ್ಟದ ಕಾರ್ಯಕರ್ತರನ್ನು ಗಟ್ಟಿಗೊಳಿಸಿದ್ದೇವೆ. ಬೂತ್‌ ಮಟ್ಟದ ಕಾರ್ಯಕರ್ತರನ್ನು ಗಟ್ಟಿಗೊಳಿಸಿದ್ದೇವೆ. ನಮ್ಮದು ಪ್ರಪಂಚದಲ್ಲಿಯೇ ಅತಿ ದೊಡ್ಡ ಪಕ್ಷವಾಗಿದೆ. ನನ್ನ ಮೇಲೆ ಪಕ್ಷ ವಿಶ್ವಾಸ ಇಟ್ಟಿದೆ. ಹಾಗೆಯೇ ಜನರೂ ವಿಶ್ವಾಸವನ್ನು ಇಟಿದ್ದಾರೆ. ಹೀಗಾಗಿ ನಾನು ಖಂಡಿತವಾಗಿಯೂ ಆಯ್ಕೆಯಾಗಿ ಬರುತ್ತೇನೆ ಎಂದು ಬಸವರಾಜ ಹಂದ್ರಿ ತಿಳಿಸಿದರು.

Exit mobile version