ಬೆಂಗಳೂರು: ಹಬ್ಬಗಳು, ರಾಷ್ಟ್ರೀಯ ದಿನಗಳು ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಬೆಂಗಳೂರಿನಿಂದ ಸ್ವಂತ ಊರಿಗೆ ಹೋಗುವುದು ಮತ್ತು ಅಲ್ಲಿಂದ ವಾಪಸ್ ಬೆಂಗಳೂರಿಗೆ ಬಸ್‌ನಲ್ಲಿ (Bangalore Bus) ಬರುವುದು ಬಹಳವೇ ದುಬಾರಿಯಾಗುತ್ತಿದೆ. ಈ ಸಂದರ್ಭಕ್ಕಾಗಿಯೇ ಕಾದು ಕುಳತಂತೆ ಮಾಡುವ ಖಾಸಗಿ ಬಸ್‌ಗಳು ತಮ್ಮ ಟಿಕೆಟ್ ದರವನ್ನು (Bus Ticket) ಏರಿಕೆ ಮಾಡಿಕೊಳ್ಳುತ್ತವೆ. ಈಗಲೂ ಸಹ ಅದೇ ಕಥೆ-ವ್ಯಥೆ ಪ್ರಯಾಣಿಕರದ್ದಾಗಿದೆ. ಸಾಲು ಸಾಲು ರಜೆ ಬಂದಿದೆ ಎಂಬ ಕಾರಣಕ್ಕಾಗಿ ಊರಿಗೆ ಹೊರಟು ನಿಂತ ಜನರಿಗೆ ಬಸ್ ದರದ ಬರೆ ಬೀಳುತ್ತಿದೆ.
ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟು (Bus Fare Hike) ಆಗಿದ್ದು, ಬಸ್ ಮಾಲೀಕರು ವಿಶೇಷ ದಿನದ ಸಂಪೂರ್ಣ ಲಾಭ ಪಡೆಯಲು ಮುಂದಾಗಿದ್ದಾರೆ. ಈ ಬಾರಿ ಆಗಸ್ಟ್ 15 ಮಂಗಳವಾರ ಬಂದ ಕಾರಣ, ಶುಕ್ರವಾರವೇ (ಆಗಸ್ಟ್ 11) ಊರಿಗೆ ಹೊರಡಲು ಜನರು ಸಿದ್ಧರಾಗಿದ್ದಾರೆ.
ಇದಕ್ಕೆ ಕಾರಣವೂ ಇಲ್ಲವೆಂದಲ್ಲ, ಐಟಿ-ಬಿಟಿ ಕ್ಷೇತ್ರಗಳು ಸೇರಿದಂತೆ ಹಲವು ಕಡೆ ಶನಿವಾರ ಮತ್ತು ಭಾನುವಾರ ರಜೆ ದಿನ ಇರುತ್ತದೆ. ಹೀಗಾಗಿ ಸೋಮವಾರ ಒಂದು ದಿನ ರಜೆ ಹಾಕಿದರೆ ಮನೆಯಲ್ಲಿ 3-4 ದಿನ ಆರಾಮವಾಗಿ ಇರಬಹುದು ಎಂಬ ಲೆಕ್ಕಾಚಾರವನ್ನು ಹೊಂದಿದ್ದಾರೆ.
ಬಸ್ ಬುಕ್ಕಿಂಗ್ ಹೆಚ್ಚಳವಾಗುತ್ತಿದ್ದಂತೆ ಖಾಸಗಿ ಬಸ್‌ಗಳು ಏಕಾಏಕಿ ಟಿಕೆಟ್ ದರವನ್ನು ಏರಿಸಿವೆ. ಟಿಕೆಟ್ ಬುಕ್ಕಿಂಗ್ ಆ್ಯಪ್‌ನಲ್ಲಿ ಒನ್ ಟು ಡಬಲ್ ರೇಟ್ ತೋರಿಸುತ್ತಿದೆ. ಇದನ್ನು ನೋಡಿ ಬಸ್ ಹತ್ತಲೋ ಬೇಡವೋ? ಅಥವಾ ಬೆಂಗಳೂರಿನಲ್ಲೇ ಇದ್ದು ಬಿಡಬೇಕೋ ಎಂಬ ಗೊಂದಲ ಈಗ ಹಲವು ಜನರದ್ದಾಗಿದೆ. ಈ ವೀಕೆಂಡ್ ಹೋಗುವವರಿಗೆ ಬಸ್ ದರ ಯಾವ ರೀತಿ ಇದೆ ಎಂಬುದನ್ನು ಇಲ್ಲಿ ನೋಡೋಣ.
ಇದನ್ನೂ ಓದಿ: Pay Ministers : ಪೇ ಸಚಿವರೇ! ಡಿಕೆಶಿ, ಚಲುವರಾಯಸ್ವಾಮಿ ವಿರುದ್ಧ ರಾಜ್ಯ ಬಿಜೆಪಿ ಅಭಿಯಾನ
ವಿಕೇಂಡ್ ಬಸ್ ಟಿಕೆಟ್ ದರ ಹೀಗಿದೆ
- ಬೆಂಗಳೂರು-ಶಿವಮೊಗ್ಗ
ಇಂದಿನ ಟಿಕೆಟ್ ದರ ₹450-₹55೦
ಶುಕ್ರವಾರದ ಟಿಕೆಟ್ ದರ ₹1100-₹1200 - ಬೆಂಗಳೂರು- ಹುಬ್ಬಳ್ಳಿ
ಇಂದಿನ ಟಿಕೆಟ್ ದರ ₹700-₹900
ಶುಕ್ರವಾರದ ಟಿಕೆಟ್ ದರ ₹1100-₹1600 - ಬೆಂಗಳೂರು-ಮಂಗಳೂರು
ಇಂದಿನ ಟಿಕೆಟ್ ದರ ₹850-₹900
ಶುಕ್ರವಾರದ ಟಿಕೆಟ್ ದರ ₹1400-₹2100 - ಬೆಂಗಳೂರು – ಉಡುಪಿ
ಇಂದಿನ ಟಿಕೆಟ್ ದರ (ನಾನ್ ಎಸಿ) ₹750-₹950
ಶುಕ್ರವಾರದ ಟಿಕೆಟ್ ದರ ₹1350-₹2400
ಇಂದಿನ ಟಿಕೆಟ್ ದರ( ಎಸಿ) ₹1000-₹1200
ಶುಕ್ರವಾರದ ಟಿಕೆಟ್ ದರ ₹2100-₹3500
- ಬೆಂಗಳೂರು-ಧಾರವಾಡ
ಇಂದಿನ ಟಿಕೆಟ್ ದರ ₹800-₹1000
ನಾಳೆಯ ಟಿಕೆಟ್ ದರ ₹1300-₹1600 - ಬೆಂಗಳೂರು-ಬೆಳಗಾವಿ
ಇಂದಿನ ಟಿಕೆಟ್ ದರ ₹750-₹1100
ನಾಳೆಯ ಟಿಕೆಟ್ ದರ ₹1200-₹1900 - ಬೆಂಗಳೂರು – ದಾವಣಗೆರೆ
ಇಂದಿನ ಟಿಕೆಟ್ ದರ ₹ 500-₹700
ನಾಳೆಯ ಟಿಕೆಟ್ ದರ ₹750-₹1200 - ಬೆಂಗಳೂರು – ಚಿಕ್ಕಮಗಳೂರು
ಇಂದಿನ ಟಿಕೆಟ್ ದರ ₹650-₹800
ನಾಳೆಯ ಟಿಕೆಟ್ ದರ ₹1200-₹1500 - ಬೆಂಗಳೂರು – ಹಾಸನ
ಇಂದಿನ ಟಿಕೆಟ್ ದರ ₹750- ₹950
ನಾಳೆಯ ಟಿಕೆಟ್ ದರ ₹1300-₹1800