ಬೆಂಗಳೂರು: ಕಂಪನಿಯಲ್ಲಿ ಹಿರಿಯ ಅಧಿಕಾರಿಗಳ ಕಿರುಕುಳ (torture) ಸಹಿಸಲಾಗದೇ ಉದ್ಯೋಗಿಯೊಬ್ಬ (private employee) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವೇಕ್ ಕುಮಾರ್ ಮೃತ ದುರ್ದೈವಿ.
ವಿವೇಕ್ ಕುಮಾರ್ ಲ್ಯಾಂಡ್ ಮಾರ್ಕ್ ಗ್ರೂಪ್‌ಗೆ ಸೇರಿದ ಲೈಫ್ ಸ್ಟೈಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ವೇಳೆ ಮೂವರು ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರು. ಈ ಮೂವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.
ಆತ್ಮಹತ್ಯೆಗೂ ಮುನ್ನ ವಿವೇಕ್ ಕುಮಾರ್ ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದಾರೆ. ಯಾರ್ಯಾರು ತನಗೆ ಕಿರುಕುಳ ನೀಡುತ್ತಿದ್ದರು ಎಂದು ಸುದೀರ್ಘವಾಗಿ ವಿಡಿಯೊ ಮಾಡಿದ್ದಾರೆ. ಫ್ಯಾನಿಗೆ ಹಾಕಿದ್ದ ಕುಣಿಕೆಯ ಮುಂದೆಯೇ ಸೆಲ್ಫಿ ವಿಡಿಯೊ ಮಾಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಚ್‌ಎಎಲ್ ಪೊಲೀಸರು ವಿವೇಕ್ ಸಾವಿಗೆ ಸಂಬಂಧಿಸಿದಂತೆ ಅಟ್ರಾಸಿಟಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ನಿತೇಶ್ ಎಂಬಾತನನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ನೇಣು ಬಿಗಿದುಕೊಂಡ ಗೃಹಿಣಿ
ವಿಜಯಪುರ ನಗರದ ಅಡಕಿ ಗಲ್ಲಿ ಸಮೀಪ ಮನೆಯೊಂದರಲ್ಲಿ ಗೃಹಿಣಿ ನೇಣಿಗೆ ಶರಣಾಗಿದ್ದಾರೆ. ಅಡಕಿ ಗಲ್ಲಿ ನಿವಾಸಿ ಶೈಲಾ ಪತ್ತಾರ (36) ಮೃತ ದುರ್ದೈವಿ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಗಾಂಧಿಚೌಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಹಾಸಿಗೆ ಹಿಡಿದಿದ್ದ 7 ವರ್ಷದ ಬಾಲಕಿ ಮೇಲೆ ಮನೆಯಲ್ಲೇ ರೇಪ್
ಸಿಕಂದರಾಬಾದ್: ನಿತ್ಯ ಬೆಳಗಾದರೆ ಒಂದಲ್ಲ, ಒಂದು ಕಡೆಯಿಂದ ಅತ್ಯಾಚಾರದ ಸುದ್ದಿಗಳು ವರದಿಯಾಗುತ್ತಿರುತ್ತವೆ. ಪುಟ್ಟ ಮಗುವಿನಿಂದ ಹಿಡಿದು, ವೃದ್ಧೆಯರವರೆಗೆ, ಕೊನೆಗೆ ಪ್ರಾಣಿಗಳನ್ನೂ, ಶವಗಳನ್ನೂ ಬಿಡುತ್ತಿಲ್ಲ ಕಾಮುಕರು. ಈ ಕಾಮಪಿಶಾಚಿಗಳಿಂದ ಹೆಣ್ಣುಮಕ್ಕಳಿಗೆ ತಮ್ಮ ಮನೆಯೂ ಸುರಕ್ಷಿತವಲ್ಲದಂತೆ ಆಗಿದ್ದು ದುರಂತ. ಹೈದರಾಬಾದ್ನಲ್ಲಿ ಏಳು ವರ್ಷದ ಅಂಗವಿಕಲ ಬಾಲಕಿ ಮೇಲೆ, ಅಪರಿಚಿತನೊಬ್ಬ, ಆಕೆಯ ಮನೆಯಲ್ಲೇ ರೇಪ್ ಮಾಡಿದ್ದಾನೆ (Hyderabad News). ಪುಟ್ಟ ಹುಡುಗಿಯ ಅಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.
ಸಿಕಂದರಾಬಾದ್ನ ಮನೆಯೊಂದರಲ್ಲಿ ಅಮ್ಮ-ಮಗಳು ವಾಸವಾಗಿದ್ದು, ಬಾಲಕಿಗೆ ಇನ್ನೂ 7ವರ್ಷ. ಅಂಗವಿಕಲೆಯಾಗಿದ್ದು, ತನ್ನಷ್ಟಕ್ಕೇ ತಾನು ಎದ್ದು ಓಡಾಡಲಾರಳು. ಎಲ್ಲದಕ್ಕೂ ಅಮ್ಮ ಬೇಕು. ಹಾಸಿಗೆ ಹಿಡಿದಿದ್ದಳು. ಮಲಗಿದಲ್ಲಿಯೇ ಇರುತ್ತಿದ್ದಳು. ಸಾಮಾನ್ಯವಾಗಿ ಅಮ್ಮ, ಇವಳನ್ನು ಒಬ್ಬಳನ್ನೇ ಬಿಟ್ಟು ಎಲ್ಲಿಗೂ ಹೋಗುತ್ತಿರಲಿಲ್ಲ. ಆದರೆ ಭಾನುವಾರ ತುರ್ತಾಗಿ ಕಿರಾಣಿ ಸಾಮಗ್ರಿಗಳನ್ನು ತರಬೇಕಾದ ಅಗತ್ಯ ಇದ್ದುದರಿಂದ, ಅವರು ಕೆಲವೇ ಹೊತ್ತು ಹೊರಗೆ ಹೋಗಿದ್ದರು. ಅದೂ ಸಮೀಪದ ಅಂಗಡಿಗೇ ಹೋಗಿದ್ದರು. ಬರುವಷ್ಟರಲ್ಲಿ ಅದ್ಯಾರೋ ದುಷ್ಟ ಪುಟ್ಟ ಹುಡುಗಿ ಮೇಲೆ ರೇಪ್ ಮಾಡಿದ್ದ.
ಇದನ್ನೂ ಓದಿ: Murder Case: ನಿದ್ರೆ ಮಾತ್ರೆ ಕೊಟ್ಟು ಸಾಯಿಸಲು ತಾಯಿಯೇ ಹೇಳಿದ್ದಳು; ಕರಾಳ ಕಥೆ ಬಿಚ್ಚಿಟ್ಟ ಸೆನಾಲಿ
ಅಂಗಡಿಯಿಂದ ಬಂದ ತಾಯಿಗೆ ಮಗಳ ಸ್ಥಿತಿ ನೋಡಿ ಆಘಾತವಾಗಿತ್ತು. ಆ ಬಾಲಕಿ ಮೈಮೇಲೆ ಒಳ ಉಡುಪು ಮಾತ್ರವಿತ್ತು. ಮಲಗಿದ್ದ ಬೆಡ್ ರಕ್ತಸಿಕ್ತವಾಗಿತ್ತು. ರೇಪ್ ಆಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು. ಸದ್ಯ ಬಾಲಕಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿಯ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂತ್ರಸ್ತೆಯ ಮನೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಫಿಂಗರ್ಪ್ರಿಂಟ್ ಚೆಕ್ ಮಾಡಿದ್ದಾರೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ 15ವರ್ಷದ ಬಾಲಕಿಯೊಬ್ಬಳ ಮೇಲೆ ಗ್ಯಾಂಗ್ರೇಪ್ ಆಗಿತ್ತು. ಬರ್ತ್ ಡೇ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ಅವಳಿಗೆ, ಜ್ಯೂಸ್ನಲ್ಲಿ ಅಲ್ಕೋಹಾಲ್ ಮಿಶ್ರಣ ಮಾಡಿ ಕೊಟ್ಟು ಎಚ್ಚರ ತಪ್ಪಿಸಿ, ಐದು ಜನ ಸೇರಿ ರೇಪ್ ಮಾಡಿದ್ದರು. ಆರೋಪಿಗಳೆಲ್ಲ 18-21 ವರ್ಷದವರೇ ಆಗಿದ್ದರು. ಆ ಹುಡುಗಿಯ ಬಾಯ್ಫ್ರೆಂಡ್ ಕೂಡ ಅದೇ ಪಾರ್ಟಿಯಲ್ಲಿ ಇದ್ದ. ಅತ್ಯಾಚಾರವಾಗುತ್ತಿದ್ದರೂ ಆತ ಸುಮ್ಮನೇ ಇದ್ದ. ಬಾಲಕಿಯ ಬಾಯ್ಫ್ರೆಂಡ್ ಮತ್ತು ಆರೋಪಿಗಳೆಲ್ಲರನ್ನೂ ಪೊಲೀಸರು ಬಂಧಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ