ಮುಂಬೈ: ಭಾರಿ ಮಳೆಯ ನಡುವೆ ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಲ್ಯಾಂಡ್ ಆಗುವ ಹಂತದಲ್ಲಿ ರನ್‌ವೇಯಿಂದ ಜಾರಿ ಪತನಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ(Private Jet Skids). ಈ ವಿಮಾನದಲ್ಲಿದ್ದ ಮೂವರು ಸಿಬ್ಬಂದಿ ಸೇರಿ 8 ಜನರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಸಿಬ್ಬಂದಿ ಹೇಳಿದ್ದಾರೆ(Brihanmumbai Municipal Corporation). ಸ್ಕಿಡ್ ಆದ ಖಾಸಗಿ ವಿಮಾನವು ಬೆಂಗಳೂರು (Bengaluru) ಮೂಲದ ರಿಯಲ್ ಎಸ್ಟೇಟ್ ಕಂಪನಿಗೆ ಸೇರಿದೆ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ಪ್ರಯಾಣಿಕರು ಎಷ್ಟು ಗಂಭೀರವಾಗಿ ಗಾಯಗೊಂಡಿದ್ದಾರೆಂಬ ಸಂಗತಿ ತಿಳಿದಿಲ್ಲ. ಆದರೆ, ಯಾವುದೇ ಸಾವು ಸಂಭವಿಸಿಲ್ಲ ಎಂದು ಪಾಲಿಕೆ ಹೇಳಿದೆ. ಮುಂಬೈ ವಿಮಾನ ನಿಲ್ದಾಣದ ರನ್‌ವೇ 27ರ ಬಳಿ ಈ ಘಟನೆ ನಡೆದಿದ್ದು, ಮಳೆಯಿಂದಾಗಿ ಜಾರುತ್ತಿತ್ತು. ಆ ಸಮಯದಲ್ಲಿ ಗೋಚರತೆ ಪ್ರಮಾಣ ಸುಮಾರು 700 ಮೀಟರ್ ಇತ್ತು ಎಂದು ವರದಿಯಾಗಿದೆ.
Private aircraft crash lands at Mumbai airport amid heavy rainfall.
— Devashish Patel (@deva_shish0) September 14, 2023
Hope everyone is safe.🙏#MumbaiPlaneCrash #PlaneCrashLanding #Mumbaiairport #planecrashpic.twitter.com/n9YSyXg9dC
ವಿಮಾನ ಪತನದಿಂದಾಗಿ ಉಂಟಾಗಿದ್ದ ಅವಶೇಷಗಳನ್ನು ರನ್‌ವೇಯಿಂದ ಕ್ಲಿಯರ್ ಮಾಡಲಾಗಿದೆ. ಪರೀಕ್ಷೆ ಕೈಗೊಂಡ ನಂತರ ಎಂದಿನ ಸಾಮಾನ್ಯ ವಿಮಾನಗಳ ಹಾರಾಟದ ಕಾರ್ಯಾಚರಣೆಯನ್ನು ಶುರು ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯವು ಹೇಳಿದೆ. ಖಾಸಗಿ ವಿಮಾನ ರನ್‌ವೇಯಿಂದ ಜಾರುತ್ತಿದ್ದಂತೆ ಸ್ವಲ್ಪ ಹೊತ್ತಿನವರಿಗೆ ರನ್‌ವೇಯನ್ನು ಸ್ಥಗಿತಗೊಳಿಸಲಾಗಿತ್ತು ಮತ್ತು ವಿಸ್ತಾರ ಏರ್‌ಲೈನ್ಸ್ ವಿಮಾನಗಳ ಮಾರ್ಗ ಬದಲಿಸಲಾಗಿತ್ತು ಎಂದು ಹೇಳಿದೆ.
UK622 (ವಾರಣಾಸಿಯಿಂದ) ಮತ್ತು UK124 (ಬ್ಯಾಂಕಾಕ್‌ನಿಂದ) ಮತ್ತು UK933 (ದೆಹಲಿಯಿಂದ), UK518 (ಕೊಚ್ಚಿಯಿಂದ), ಮತ್ತು UK865 (ಡೆಹ್ರಾಡೂನ್‌ನಿಂದ) ಮಾರ್ಗ ಬದಲಿಸಿದ ವಿಮಾನಗಳಾಗಿವೆ. ಮೊದಲ ಎರಡು ವಿಮಾನಗಳನ್ನು ಹೈದರಾಬಾದ್‌ಗೆ ಮತ್ತು ನಂತರದ ಮೂರು ವಿಮಾನಗಳನ್ನು ಗೋವಾಕ್ಕೆ ಕಳುಹಿಸಲಾಯಿತು ಎಂದು ಹೇಳಿದೆ.
ಈ ಸುದ್ದಿಯನ್ನೂ ಓದಿ: Chitradurga Plane Crash: ಚಿತ್ರದುರ್ಗದಲ್ಲಿ ಡಿಆರ್‌ಡಿಒ ತಪಸ್ ವಿಮಾನ ಪತನ; ನೋಡಲು ಮುಗಿಬಿದ್ದ ಜನ
ರಾಷ್ಟ್ರೀಯ ವಿಮಾನಯಾನ ನಿಯಂತ್ರಕ ಸಂಸ್ಥೆಯಾಗಿರುವ ಡಿಜಿಸಿಎ ಪ್ರಕಾರ, ಸ್ಕಿಡ್ ಆದ ವಿಮಾನವು ಲಿಯರ್‌ಜೆಟ್ 45 ಆಗಿತ್ತು ಈ ವಿಮಾನವನ್ನು ಕೆನಡಾ ಮೂಲದ ಬೊಂಬಾರ್ಡಿಯರ್ ಏವಿಯೇಷನ್‌ನ ವಿಭಾಗವು ನಿರ್ಮಿಸಿದೆ. ಇದು ಒಂಬತ್ತು-ಆಸನಗಳ ಸೂಪರ್-ಲೈಟ್ ಬಿಸಿನೆಸ್ ಜೆಟ್ ಆಗಿದೆ. ಬೆಂಗಳೂರು ಮೂಲದ ವಿಎಸ್‌ಆರ್ ವೆಂಚರ್ಸ್‌ಗೆ ಸೇರಿದ ವಿಮಾನ ಎನ್ನಲಾಗಿದೆ. ಇದೊಂದು ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆಯಾಗಿದೆ.