Site icon Vistara News

Private Schools | ರಾಜಧಾನಿಯಲ್ಲಿವೆ ಅನಧಿಕೃತ ಶಾಲೆಗಳು; ಶಿಕ್ಷಣ ಇಲಾಖೆಯಿಂದ ನೋಟಿಸ್‌

private school

ಬೆಂಗಳೂರು: ರಾಜ್ಯದಲ್ಲಿ ನಾಯಿ ಕೊಡೆಗಳಂತೆ ಅನಧಿಕೃತ ಖಾಸಗಿ ಶಾಲೆಗಳು (Private Schools) ತಲೆ ಎತ್ತಿವೆ. ಶಿಕ್ಷಣ ಇಲಾಖೆ ಕಾಯ್ದೆಯ ನಿಯಮ ಉಲ್ಲಂಘಿಸಿ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹೈ ಅಲರ್ಟ್‌ ಆಗಿದ್ದು, ಅನಧಿಕೃತ ಖಾಸಗಿ ಶಾಲೆಗಳನ್ನು ಪತ್ತೆ ಹಚ್ಚಿವೆ.

ರಾಜಧಾನಿ ಬೆಂಗಳೂರು ಒಂದರಲ್ಲಿಯೇ 51 ಶಾಲೆಗಳನ್ನು ಪತ್ತೆ ಮಾಡಿದ್ದು, ಎಲ್ಲ ಶಾಲೆಗಳಿಗೂ ಶಿಕ್ಷಣ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ನೋಟಿಸ್‌ಗೆ ಶಾಲೆಗಳು ನೀಡುವ ಉತ್ತರಗಳ ಆಧರಿಸಿ, ಶಾಲೆ ಮುಚ್ಚಿಸಬೇಕಾ ಅಥವಾ ಮುಂದುವರಿಸಬೇಕಾ ಎಂದು ಇಲಾಖೆ ನಿರ್ಧರಿಸಲಿದೆ.

51 ಶಾಲೆಗಳ ಪೈಕಿ ಬೆಂಗಳೂರು ದಕ್ಷಿಣ ವಲಯದಲ್ಲಿಯೇ ಅತಿ ಹೆಚ್ಚು ಅನಧಿಕೃತ ಶಾಲೆಗಳಿವೆ. ದಕ್ಷಿಣ ವಲಯದಲ್ಲಿ 38 ಶಾಲೆಗಳು, ಬೆಂಗಳೂರು ಉತ್ತರ ವಲಯದಲ್ಲಿ 11 ಶಾಲೆಗಳು ಮತ್ತು ಆನೇಕಲ್‌ ತಾಲೂಕಿನಲ್ಲಿ 2 ಶಾಲೆಗಳು ಅನಧಿಕೃತವೆಂದು ಗುರುತಿಸಲಾಗಿದೆ.

ಎಲ್ಲ ಜಿಲ್ಲೆಗಳ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಶಾಲೆಗಳ ದಾಖಲೆಗಳನ್ನು ಪರಿಶೀಲಿಸಿ ಪಟ್ಟಿ ಮಾಡಿ ಬಳಿಕ ಮಾಹಿತಿ ಕಲೆ ಹಾಕಿ ಕಾನೂನಾತ್ಮಕವಾಗಿ ನೋಟಿಸ್‌ ನೀಡುವಂತೆ ಇಲಾಖೆಯು ಸೂಚನೆ ನೀಡಿದೆ.

ಇದನ್ನೂ ಓದಿ | ರಾಜ ಮಾರ್ಗ | ಅವರು ಹೋರಾಡಿದ್ದು ಅಸಮಾನತೆ ವಿರುದ್ಧ, ಪ್ರತಿಪಾದಿಸಿದ್ದು ಆತ್ಮೋದ್ಧಾರ, ಆತ್ಮವಿಶ್ವಾಸದ ಮಂತ್ರ

ಕೆಲ ಶಾಲೆಗಳನ್ನು ಈಗಾಗಲೇ ಬಂದ್‌ ಮಾಡಿಸಿದ್ದು, ಉಳಿದ ಶಾಲೆಗಳು ನೀಡುವ ಉತ್ತರದ ಮೇಲೆ ಅವುಗಳ ಭವಿಷ್ಯ ನಿರ್ಧಾರವಾಗಲಿದೆ. ಪಟ್ಟಿ ಮಾಡಿರುವ ಶಾಲೆಗಳಲ್ಲಿ ಕೆಲ ಶಾಲೆಗಳು ಹೊಸದಾಗಿ ಆರಂಭವಾಗಿದ್ದು, ಅವುಗಳು ಇಲಾಖೆಯಿಂದ ಅನುಮತಿ ಪಡೆದಿಲ್ಲ. ಇನ್ನು ಕೆಲ ಶಾಲೆಗಳು ಪ್ರತಿ ವರ್ಷ ಮಾನ್ಯತೆ ನವೀಕರಿಸಿಕೊಳ್ಳಬೇಕಾದ ನಿಯಮ ಪಾಲಿಸಿಲ್ಲ.

ಜತೆಗೆ ಕೆಲ ಶಾಲೆಗಳು ಇಲಾಖೆ ಗಮನಕ್ಕೆ ತರದೆ ಶಾಲೆಗಳನ್ನು ಸ್ಥಳಾಂತರ ಮಾಡಿವೆ. ಇಲಾಖೆಯಿಂದ ರಾಜ್ಯ ಪಠ್ಯಕ್ರಮ ಬೋಧನೆಗೆ ಅನುಮತಿ ಪಡೆದು ಆ ಬಳಿಕ ಕೇಂದ್ರ ಪಠ್ಯಕ್ರಮ ಬೋಧಿಸುತ್ತಿರುವುದು ಹಾಗೂ ಕೇಂದ್ರ ಪಠ್ಯಕ್ರಮ ಬೋಧನೆಗೆ ಅನುಮತಿ ಪಡೆದು ಎರಡೂ ಪಠ್ಯಕ್ರಮ ಬೋಧಿಸುತ್ತಿರುವುದು ಕಂಡು ಬಂದಿದೆ.

ಅನುಮತಿ ಇಲ್ಲದೆ ಹೆಚ್ಚುವರಿ ತರಗತಿಗಳನ್ನು ನಡೆಸುತ್ತಿರುವುದು ಸೇರಿದಂತೆ ಕರ್ನಾಟಕ ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳು ಮತ್ತು ಶಿಕ್ಷಣ ಹಕ್ಕು ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ಶಾಲೆಗಳನ್ನು ನಡೆಸುತ್ತಿರುವುದು ಕಂಡು ಬಂದಿದೆ.

ಅನಧಿಕೃತ ಶಾಲೆಗಳಾವುವು?

ಬೆಂಗಳೂರು ದಕ್ಷಿಣ ವಲಯದಲ್ಲಿನ 38 ಶಾಲೆಗಳು ಅನಧಿಕೃತ ಶಾಲೆಗಳೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಗುರುತಿಸಿದ್ದಾರೆ. ಗೂಡ್ಸ್‌ಶೆಡ್‌ ರಸ್ತೆಯ ಟ್ರಿನಿಟಿ ಶಾಲೆ, ಶ್ರೀಗಂಧದ ಕಾವಲಿನ ಆರ್ಕಿಡ್ಸ್ ಇಂಟರ್‌ ನ್ಯಾಷನಲ್‌ ಶಾಲೆ, ಎಂಇಎಸ್‌ ಪಬ್ಲಿಕ್‌ ಸ್ಕೂಲ್‌ ಗವಿಪುರ ಬಡಾವಣೆ ಹಾಗೂ ಸೋಮನಹಳ್ಳಿ ಮತ್ತು ಚನ್ನಮ್ಮನಕೆರೆ ಅಚ್ಚುಕಟ್ಟು ಈ ಮೂರು ಪ್ರದೇಶದ ಸರಸ್ವತಿ ವಿದ್ಯಾಮಂದಿರ ಶಾಲೆಗಳು ಸೇರಿದಂತೆ ಮಲ್ಲತ್ತಹಳ್ಳಿಯ ಹೋಲಿ ಫೈತ್‌ ಪಬ್ಲಿಕ್‌ ಶಾಲೆ, ಕನಕಪುರ ರಸ್ತೆ ಬೋಳಾರೆಯ ಸನ್‌ ಶೈನ್‌ ಪಬ್ಲಿಕ್‌ ಶಾಲೆಗೆ ನೋಟಿಸ್‌ ನೀಡಲಾಗಿದೆ.

ಕೆ.ಗೊಲ್ಲಹಳ್ಳಿ ವಿವೇಕಾನಂದ ಪಬ್ಲಿಕ್‌ ಶಾಲೆ, ಗೋಣಿಪುರದ ಕಲ್ಪತರು ವಿದ್ಯಾನಿಕೇತನ ಶಾಲೆ, ಮಂಜುನಾಥ ನಗರದ ಅಪೋಲೋ ಕಾನ್ವೆಂಟ್‌ ಹಾಗೂ ಗುಡ್‌ ಲಕ್‌ ಸ್ಕೂಲ್‌, ಮೈಸೂರು ರಸ್ತೆ ಬಾಪೂಜಿನಗರ ವ್ಯಾಪ್ತಿಯ ಸೆಂಟ್‌ ಕೈಕಲ್ಸ್‌ ಶಾಲೆ, ಸೌಂತೆಂಡ್‌ ಪಬ್ಲಿಕ್‌ ಶಾಲೆ, ದಿ ಏಷಿಯನ್‌ ಸ್ಕೂಲ್‌, ಬ್ಲೂಲೈನ್‌ ಪಬ್ಲಿಕ್‌ ಶಾಲೆ‌, ಎಂ.ಕೆ.ಮಿರಾಕಲ್‌ ಸ್ಕೂಲ್‌, ಪಾದರಾಯನಪುರದ ಮೌಂಟ್‌ ಅಬು ಆಂಗ್ಲ ಶಾಲೆ, ಸನ್‌ ಶೈನ್‌ ಆಂಗ್ಲ ಶಾಲೆ, ಎವರ್‌ ಗ್ರೀನ್‌ ಪಬ್ಲಿಕ್‌ ಶಾಲೆ, ವಿಜಯನಗರದ ಸಿದ್ಧಗಂಗಾ ಪಬ್ಲಿಕ್‌ ಸ್ಕೂಲ್‌, ವಾಲ್ಮೀಕಿ ನಗರದ ರೋಷನ್‌ ಆಂಗ್ಲ ಶಾಲೆ, ಗಂಗೊಂಡನಹಲ್ಳಿಯ ಅಲ್‌ ಹರಮ್‌ ಶಾಲೆ, ವಿ.ಎಸ್‌. ಗಾರ್ಡನ್‌ನ ಸೇಂಟ್‌ ಅಂತೋನಿ ಶಾಲೆ ಉತ್ತರ ನೀಡುವಂತೆ ನೋಟಿಸ್‌ ಜಾರಿ ಮಾಡಲಾಗಿದೆ.

ಮೈಸೂರು ರೋಡ್‌ ಪೈಪ್‌ಲೈನ್‌ನ ಅಲ್‌ ಖಲಮ್‌ ಪಬ್ಲಿಕ್‌ ಶಾಲೆ, ಜೆ.ಪಿ.ನಗರದ ಟ್ವಿಂಕಲ​ರ್ಸ್‌ ಶಾಲೆ, ಬಿಸ್ಮಿಲ್ಲಾ ನಗರದ ಎಫ್‌ ಜವಾಹರ್‌ ಶಾಲೆ, ವೆಂಕಟಾಪುರದ ಆದಿತ್ಯ ಸ್ಕೂಲ್‌, ರಾಜೇಂದ್ರ ನಗರದ ಗ್ರೀನ್‌ ಲ್ಯಾಂಡ್‌ ಪಬ್ಲಿಕ್‌ ಶಾಲೆ, ಚೇಳಕೆರೆಯ ಸೆಂಟ್‌ ಪಾಲ್‌ ಪ್ರಾಥಮಿಕ ಶಾಲೆ, ಕಾವೇರಿ ನಗರದ ಕಾವೇರಿ ಪ್ರಾಥಮಿಕ ಶಾಲೆ, ಜಗದೀಶ್‌ ನಗರದ ಜೆ.ಎಂ.ಜೆ. ಇಂಗ್ಲಿಷ್‌ ಪ್ರೈಮರಿ ಶಾಲೆ, ನಾಗವಾರಪಾಳ್ಯದ ಮಹಾತ್ಮ ಮೆಮೋರಿಯಲ್‌ ಸ್ಕೂಲ್‌, ಸುದ್ದಗುಂಟೆಪಾಳ್ಯದ ಮದರ್‌ ಥೆರೆಸಾ ಶಾಲೆ, ವಿದ್ಯಾ ನಗರದ ಸ್ವಾಮಿ ವಿವೇಕಾನಂದ ಶಾಲೆ, ಮಾರ್ನಿಂಗ್‌ ಸ್ಟಾರ್‌ ಎಜುಕೇಷನ್‌ ಟ್ರಸ್ಟ್‌, ಕೊಡಿಗೇಹಳ್ಳಿಯ ಸೆಂಟ್‌ ಥಾಮಸ್‌ ಶಾಲೆ, ಟಿ.ಸಿ.ಪಾಳ್ಯದ ಸ್ಟಾನ್‌ ಫೋರ್ಡ್‌ ಪಬ್ಲಿಕ್‌ ಸ್ಕೂಲ್‌, ಆನೇಕಲ್‌ ತಾಲೂಕಿನ ಕಾಚರಕನಹಳ್ಳಿಯ ಸರಸ್ವತಿ ವಿದ್ಯಾನಿಕೇತನ, ಶಿಕಾರಿಪಾಳ್ಯದ ಮದರ್‌ ಥೆರೇಸಾ ಸ್ಕೂಲ್‌ ಈ ಶಾಲೆಗಳಿಗೆ ನೋಟಿಸ್‌ ನೀಡಲಾಗಿದೆ. 

ಬೆಂಗಳೂರು ಉತ್ತರ ವಲಯ ಶಾಲೆಗಳ ವಿವರ ಹೀಗಿದೆ

ಟಾಸ್ಕರ್‌ ಟೌನ್‌ನ ಅಲ್‌ ಅಮೀನ್‌ ಕಂಬಲ್‌ ಪೋಷ್‌ ಶಾಲೆ, ಶಿವಾಜಿ ನಗರದ ಗ್ಲೋಬಲ್‌ ಪಬ್ಲಿಕ್‌ ಶಾಲೆ, ಬೆಸ್ಟ್‌ ಪಬ್ಲಿಕ್‌ ಶಾಲೆ, ಭಾರತಿ ನಗರದ ನವ ಭಾರತ್‌ ಷಾ ಶಾಲೆ, ಚಾಂದಿನ್‌ ಚೌಕ್‌ನ ಭಾರ್ಗವಿ ಪಬ್ಲಿಕ್‌ ಶಾಲೆ, ಕೃಷ್ಣಯ್ಯನಪಾಳ್ಯದ ಹೋಲಿ ಫೈಯಿತ್‌ ಆಂಗ್ಲ ಮಾಧ್ಯಮ ಶಾಲೆ, ಕುಶಾಲನಗರ ವಾರ್ಡ್‌ ಅನ್ವರ್‌ ಲೇಔಟ್‌ನ ಲೋರೆಟ್ಟಾ ಆಂಗ್ಲಶಾಲೆ ಹಾಗೂ ಚಾಮುಂಡಿನಗರದ ಗಾರ್ಡಿಯನ್‌ ಪಬ್ಲಿಕ್‌ ಶಾಲೆ, ಕತಾಳಿಪಾಳ್ಯದ ಚರ್ಚ್‌ ಜುಬಿಲಿ ಪ್ರಾಥಮಿಕ ಶಾಲೆಗಳಿಗೆ ನೋಟಿಸ್‌ ನೀಡಲಾಗಿದೆ.

ಇದನ್ನೂ ಓದಿ | ಅಫ್ಘಾನಿಸ್ತಾನದಲ್ಲಿ ಮತ್ತೆ ಹೆಣ್ಣುಮಕ್ಕಳ ಭೂಗತ ಶಾಲೆಗಳು ಚಾಲೂ: ಹೇಗೆ ನಡೀತಿದೆ?

Exit mobile version