ಬೆಂಗಳೂರು: ಕಳೆದ ಎರಡು ದಿನಗಳಿಂದ ಪ್ರಧಾನಿ ಮೋದಿ ಬಾಯಲ್ಲಿ ಎಂತೆಂಥ ಮಾತುಗಳು ಬರುತ್ತಿವೆಯೋ ನೋಡುತ್ತಿದ್ದೇವೆ. ಕಾಂಗ್ರೆಸ್ ಮಂಗಳಸೂತ್ರವನ್ನೇ ಕಿತ್ತುಕೊಳ್ಳುತ್ತದೆ ಎಂಬ ಮಾತುಗಳನ್ನಾಡಿದ್ದಾರೆ. ನನ್ನ ತಾಯಿಯ ಮಂಗಳಸೂತ್ರ ದೇಶಕ್ಕಾಗಿ ಬಲಿಯಾಗಿದೆ. ಮಹಿಳೆಯರ ಮನಸ್ಸಲ್ಲಿ ಇರುವ ಸೇವೆಯ ಭಾವನೆ ಬಿಜೆಪಿಗೆ ಅರ್ಥವಾಗುವುದಿಲ್ಲ. ಮಂಗಳಸೂತ್ರದ ಬಗ್ಗೆ ಮಾತನಾಡುವ ಮೋದಿ ಅವರಿಗೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಮಂಗಳಸೂತ್ರ ಉಳಿಸುವುದು ಗೊತ್ತಿಲ್ಲವೇ? ಅವರಿಗೆ ನಾಚಿಕೆ ಆಗಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯಾದರ್ಶಿ ಪ್ರಿಯಾಂಕ ಗಾಂಧಿ (Priyanka Gandhi) ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು ದಕ್ಷಿಣದ ಕ್ಷೇತ್ರದ ಬೊಮ್ಮನಹಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸ್ವಂತ ಅಜ್ಜಿ ಅವರು ಒಡವೆ ಅಡವಿಟ್ಟು ಸೈನಿಕರಿಗೆ ನೆರವಾದರು. ನಮ್ಮದು ಸ್ವಾತಂತ್ರ್ಯ ತಂದು ಕೊಡುವಲ್ಲಿ ತ್ಯಾಗ ಬಲಿದಾನ ಮಾಡಿದ ಪಕ್ಷ. ಅದೇ ನಮ್ಮ ಕುಟುಂಬದ ಇತಿಹಾಸ ಎಂದು ತಿಳಸಿದರು.
ಬಿಜೆಪಿ ಪಕ್ಷಕ್ಕೆ ಹೆಣ್ಣು ಮಕ್ಕಳ ಕಷ್ಟ ಅರ್ಥವಾಗಲ್ಲ. ಪ್ರಧಾನಿ ಮೋದಿ ಅವರಿಗೆ ಮಾಂಗಲ್ಯ ಬೆಲೆ ಗೊತ್ತಿಲ್ಲ. ರೈತರ ಸಾಲ ಹೆಚ್ಚಾದಾಗ ಆ ಮಹಿಳೆ ಮಾಂಗಲ್ಯ ಅಡಮಾನ ಇಡುತ್ತಾರೆ. ಮನೆಯಲ್ಲಿ ಯಾರಿಗಾದರೂ ಕಷ್ಟ ಎದುರಾದರೆ ಮಾಂಗಲ್ಯ ಇಡುತ್ತಾಳೆ. ದೇಶದಲ್ಲಿ ಲಾಕ್‌ಡೌನ್ ಆದಾಗ ಬಡವರಿಗೆ ಊಟ ಇಲ್ಲ. ಎಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ರೈತರು ಪ್ರತಿಭಟನೆ ಮಾಡಿದರ 609 ರೈತರು ಸತ್ತರು. ಆಗ ಮೋದಿ ಅವರಿಗೆ ಮಾಂಗಲ್ಯ ನೆನಪಾಗಲಿಲ್ವಾ? ಮಣಿಪುರದಲ್ಲಿ ಒಂದು ಹೆಣ್ಣನ್ನು ಬೆತ್ತಲೆ ಮಾಡಿದಾಗ ಮೋದಿ ಎಲ್ಲಿದ್ದರು? ಆ ಮಹಿಳೆ ಮಂಗಳಸೂತ್ರದ ಬಗ್ಗೆ ಗೌರವ ಯಾಕೆ ಇರಲಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಮಂಗಳಸೂತ್ರ ಉಳಿಸೋದು ಗೊತ್ತಿಲ್ಲವೇ? ದೇಶದ ಬಗ್ಗೆ ಇವರಿಗೆ ಒಂದು ಚೂರು ಕಾಳಜಿ ಇಲ್ವಾ? ಮೋದಿ ಅವರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | Lok Sabha Election 2024: ಸಂವಿಧಾನ ತಿದ್ದುಪಡಿ ಮಾಡುವುದಾಗಿ ಘೋಷಿಸಿದ ಪ್ರಿಯಾಂಕಾ ಗಾಂಧಿ!
ಕಾಂಗ್ರೆಸ್ ಗ್ಯಾರಂಟಿಗಳಿಂದ ರಾಜ್ಯದ ಕೋಟ್ಯಂತರ ಜನರಿಗೆ ಅನುಕೂಲವಾಗುತ್ತಿದೆ. ದೇಶಾದ್ಯಂತ ನುಡಿದಂತೆ ನಡೆಯುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಕರ್ನಾಟದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಇನ್ನು ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುತ್ತೇವೆ ಎಂದು ನಿಮ್ಮ ಮುಂದೆ ಬಂದಿದ್ದೇವೆ. ಹೆಣ್ಣು ಮಕ್ಕಳಿಗೆ ಒಂದು ಲಕ್ಷ ಕೊಡುವ ನಿರ್ಧಾರ ಕಾಂಗ್ರೆಸ್ ಮಾಡಿದೆ. ಯುವಕರಿಗೆ ಉದ್ಯೋಗ ನೀಡೊದಕ್ಕೆ ಅಪ್ರೆಂಟಿಷಿಪ್ ಕಾರ್ಯಕ್ರಮ ಶುರು ಮಾಡ್ತಿದ್ದೇವೆ. ಶ್ರಮಿಕ್ ನ್ಯಾಯ್ ಕೂಲಿ ಕೆಲಸ ಮಾಡುವವರಿಗೆ ಇನ್ಶೂರೆನ್ಸ್ ಕೊಡುತ್ತೇವೆ ಎಂದು ಭರವಸೆ ನೀಡಿದರು.
ದೇಶದಲ್ಲಿ ಬೆಲೆ ಏರಿಕೆಯಿಂದ ಸಾಮಾನ್ಯರಿಗೆ ಕಷ್ಟ ಆಗುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ ಎರಡು ಕಷ್ಟಗಳು ನಿಮ್ಮ ಮುಂದಿವೆ. ಮಹಿಳೆಯರಿಗೆ ಮನೆ ನಡೆಸುವ ಕಷ್ಟ ಗೊತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಚಿನ್ನ, ಬೆಳ್ಳಿ ಎಲ್ಲ ಬೆಲೆ ಏರಿದೆ. ಸಮಾಜದಲ್ಲಿ ಎಲ್ಲಾ ವರ್ಗದವರೂ ಬೆಲೆ ಏರಿಕೆ ಹೊರೆ ಎದುರಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಪ್ರಧಾನಿ ಮೋದಿಯವರ 10 ವರ್ಷ ಆಡಳಿತ ನೋಡಿದ್ದೀರಾ? ನಿಮ್ಮ ಜೀವನದಲ್ಲಿ ಬದಲಾವಣೆ ಆಗಿದ್ಯಾ? ಅನ್ನೋ ಪ್ರಶ್ನೆ ಮಾಡಬೇಕಿದೆ. ನಿಮ್ಮೆಲ್ಲರ ಮುಂದೆ ಸೂಪರ್ ಮ್ಯಾನ್ ತರ ಬಂದು ನಿಂತಿದ್ರು. ಅಚ್ಚೇ ದಿನ್ ಬಂತಾ ಎಂದು ಪ್ರಶ್ನಿಸಿದರು.
ನೀವೆಲ್ಲರೂ ಮೋದಿ ಅವರ 10 ವರ್ಷ ನೋಡಿದ್ದೀರಿ, ಹೀಗಾಗಿ ಮೋದಿ ಅವರನ್ನ ಪ್ರಶ್ನೆ ಮಾಡಬೇಕು. ನಾವೇನು ಕಷ್ಟ ಪಡುತ್ತಿದ್ದೇವೆಯೋ ಅದೇ ನಿಜಾಂಶ. ಪ್ರಧಾನಿ ಅವರಿಗೆ ಮುಖ್ಯವಾದ ಸ್ನೇಹಿತರಿದ್ದಾರೆ. ಅವರಿಗೋಸ್ಕರ ನೀತಿ ನಿಯಮವನ್ನೇ ಬದಲಾಯಿಸುತ್ತಿದ್ದಾರೆ. ದೇಶದ ವಿಮಾನ ನಿಲ್ದಾಣ ಸೇರಿದಂತೆ ಪ್ರತಿಯೊಂದು ಯೋಜನೆ ಅವರಿಗೆ ಮೀಸಲಿಡುತ್ತಿದ್ದಾರೆ. ಸಣ್ಣಪುಟ್ಟ ಉದ್ಯಮಿಗಳಿಗೆ ಏನು ಸಹಾಯ ಆಗ್ತಾ ಇಲ್ಲ. ರೈತರಿಗೆ ಬಡವರಿಗೆ ಯಾರಿಗೂ ಏನು ಸಹಾಯ ಇಲ್ಲ. ಸಹಾಯ ಮಾಡಿದರೆ 5 ಕೆಜಿ ಅಕ್ಕಿ ಕೊಟ್ಟು ತೃಪ್ತಿ ಪಡಿಸುತ್ತಿದ್ದಾರೆ. ಇವತ್ತು ಪ್ರಜಾಪ್ರಭುತ್ವವನ್ನು ದುರ್ಬಲ ಮಾಡಲು ಅವರು ಹೊರಟಿದ್ದು, ಸಂವಿಧಾನ ಬದಲಾಯಿಸಲು ಹೊರಟ್ಡಿದ್ದಾರೆ ಎಂದು ತಿಳಿಸಿದರು.
ಚುನಾವಣಾ ಬಾಂಡ್ ಅಂತ ದೊಡ್ಡ ಸ್ಕ್ಯಾಂ ನಡೆದಿತ್ತು. ಅದಕ್ಕೆ ಯಾರು ಫಂಡ್ ಕೊಟ್ಟಿದ್ದಾರೋ ಗೊತ್ತಾಗುವುದಿಲ್ಲ. ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಆದಾಗ ಗೊತ್ತಾಯಿತು. ಇವರೇನು ಮಾಡಿದರೂ ನಮಗೆ ಗೊತ್ತಾಗುವುದಿಲ್ಲ ಅಂತ ಬಿಜೆಪಿಯವರು ವಾಷಿಂಗ್ ಮಷಿನ್ ತೆರೆದಿಟಿದ್ದಾರೆ. ಕಪ್ಪು ಹಣ ಹಾಕಿ ಬಿಳಿ ಹಣ ಬರುತ್ತೆ ಎಂದು ಹೇಳುತ್ತಿದ್ದಾರೆ. ಭ್ರಷ್ಟಾಚಾರ ಮಾಡಿದವರನ್ನು ವಾಷಿಂಗ್ ಮಷಿನ್‌ನೊಳಗೆ ಹಾಕಿದರೆ ಹೊರಗೆ ಕ್ಲೀನ್ ಆಗಿ ಬರುತ್ತಾರೆ ಎಂದು ವ್ಯಂಗ್ಯವಾಡಿದರು.
ಚುನಾವಣೆ ಸಮಯದಲ್ಲಿ ಯಾರೊಬ್ಬರೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಪ್ರಧಾನಿ ಅವರ ಫೋಟೊ ಇಟ್ಡುಕೊಂಟು ಮತ ಕೇಳುತ್ತಿದ್ದಾರೆ. ಬೆಂಗಳೂರಿನಂತಹ ನಗರಕ್ಕೆ ನಿಜವಾದ ನಾಯಕ ಬೇಕು. ಇವರು ಭಾವನಾತ್ಮಕ ರಾಜಕೀಯ ಮಾಡುತ್ತಿದ್ದಾರೆ.
ಇವತ್ತು ಪ್ರಗತಿಪರ ವಿಷಯಗಳ ಬಗ್ಗೆ ಚುನಾವಣೆ ಮಾಡುತ್ತಿಲ್ಲ. ಪ್ರಧಾನಿ ಮಂತ್ರಿ ಫೋಟೊ ಹಾಕಿ ಚುನಾವಣೆ ಎದುರಿಸುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೀವಿ ಎಂದು ಚುನಾವಣೆ ಮಾಡುತ್ತಿದ್ದಾರೆ. ಬೆಂಗಳೂರು ಅಂತ ಸಿಟಿಗೆ ಪ್ರಗತಿ, ಉನ್ನತಿ ಬಗೆಗಿನ ನಾಯಕರು ಬೇಕು. ಆದರೆ ಇವರು ಭಾವನಾತ್ಮಕ ವಿಚಾರಗಳಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಈ ರೀತಿಯ ನಾಯಕರು ಕರ್ನಾಟಕಕ್ಕೆ ಬೇಕಿಲ್ಲ ಎಂದರು.
ಬಿಜೆಪಿ ಪಕ್ಷಕ್ಕೆ ಹೆಣ್ಮಕ್ಕಳ ಕಷ್ಟ ಅರ್ಥವಾಗಲ್ಲ, ಹೆಣ್ಮಕ್ಕಳ ಸೇವಾ ಮನೋಭಾವ ಕುಟುಂಬ ನಿರ್ವಹಣೆಗೆ ಮಂಗಳಸೂತ್ರ ಅಡವಿಟ್ಟು ಜೀವನ ಮಾಡುತ್ತಾರೆ. ಮಂಗಳ ಸೂತ್ರದ ಬಗ್ಗೆ ಮಾತನಾಡುವ ಮೋದಿ ನೋಟ್ ಬ್ಯಾನ್ ಆದಾಗ ಹೆಣ್ಮಕ್ಕಳು ಪಟ್ಟ ಕಷ್ಟ ಎಲ್ಲಿ ಹೋಗಿದ್ದರು. ರಾತ್ರೋರಾತ್ರಿ ಲಾಕ್‌ಡೌನ್ ಮಾಡಿದಾಗ ಅದೆಷ್ಟೋ ಮಂದಿ ಸಾವನ್ನಪ್ಪಿದರು. ಆ ಹೆಣ್ಣು ಮಕ್ಕಳು ಕಷ್ಟಪಟ್ಟಾಗ ಎಲ್ಲಿಹೋಗಿದ್ದರು. ರೈತರು ಅನೇಕ ಪ್ರತಿಭಟನೆ ಮಾಡಿದರು, 600 ರೈತರು ಪ್ರಾಣ ಬಿಟ್ಟರು, ಆ ರೈತ ಕುಟುಂಬದ ಮಹಿಳೆಯರ ಮಂಗಳಸೂತ್ರ ನೆನಪಾಗಲಿಲ್ಲವೇ? ಮಣಿಪುರ ಮಹಿಳೆಯ ವಸ್ತ್ರಾಪಹರಣ ಮಾಡಿದಾಗ ಮಂಗಳಸೂತ್ರ ನೆನಪಾಗಲಿಲ್ಲವೇ? ಮತದಾರರನ್ನು ಹೆದರಿಸಿ ಮತಹಾಕಿಸಿಕೊಳ್ಳಲು ಮುಂದಾಗಿರುವ ಪ್ರಧಾನಿಗೆ ನಾಚಿಕೆಯಾಗಬೇಕು.
ಬಿಜೆಪಿಯವರು ಹಿಂದು-ಮುಸ್ಲಿಮರ ನಡುವೆ ಒಡಕು ಮೂಡಿಸಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ನಿಮಗೆ ನೈತಿಕತೆಯ ರಾಜಕಾರಣ ಬೇಕೋ, ನಾಟಕ ಮಾಡುವ ಪಕ್ಷ ಬೇಕೋ? ರಾಮ ಎನ್ನುವುದು ನೈತಿಕತೆ, ಸತ್ಯದ ಹಾದಿಯಲ್ಲಿ ನಡೆದವರು. ಮಹಾತ್ಮಗಾಂಧಿ ಕೂಡ ನಡೆದಿದ್ದು ಸತ್ಯದ ದಾರಿ. ಆದರೆ, ಅವರ ಮೇಲೆ ಗುಂಡು ಹಾರಿಸಿದಾಗಲೂ ಹೇ ರಾಮ್ ಅಂದ್ರು. ಸತ್ಯದ ಹಾದಿಯಲ್ಲಿ ನಡೆದು ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ ನಾವು. ಆದರೆ, ಬಿಜೆಪಿಯವರು ಪ್ರತಿದಿನ ನಾಟಕ ಮಾಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯಾದರ್ಶಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ | Lok Sabha Election 2024: ಬಿಜೆಪಿ, ಕಾಂಗ್ರೆಸ್ ಜತೆ ಇರುವ ಮಿತ್ರ ಪಕ್ಷಗಳ ಯಾವವು? ಇಲ್ಲಿದೆ ಅಂತಿಮ ಚಿತ್ರಣ
ದೇಶದ ಮಾಧ್ಯಮಗಳಲ್ಲಿ ಎಲ್ಲವೂ ಚೆನ್ನಾಗಿದೆ ಅಂತ ತೋರಿಸುತ್ತಾರೆ, ವಿಪಕ್ಷಗಳ ಮೇಲಷ್ಟೇ ಅಲ್ಲ ಮಾದ್ಯಮಗಳ ಮೇಲೂ ಹಿಡಿತ ಸಾಧಿಸಿ ದುರಾಡಳಿತ ನಡೆಸುತ್ತಿದ್ದಾರೆ. ನಿಮ್ಮ ಹೋರಾಟ ಈಗ ಶುರು ಮಾಡಬೇಕು. ನಮಗೆ ಕಾಡುತ್ತಿರುವ ಸಮಸ್ಯೆಗಳ ಮೇಲೆ ಚುನಾವಣೆ ನಡೆಯಬೇಕು. ಹೀಗಾಗಿ ಬಿಜೆಪಿಗೆ ತಕ್ಕಪಾಠ ಕಲಿಸಬೇಕು. ಇವತ್ತು ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆಯ ಮೂಲಕ ಚುನಾವಣೆ ಎದುರಿಸಿ. ನಾನು ಪ್ರಧಾನಿ ಮೋದಿಗೆ ಸವಾಲು ಹಾಕ್ತೇನೆ, ಇದು ನಿಮ್ಮ ಹೋರಾಟ, ದೇಶದ ಸಮಸ್ಯೆಗಳ ಮೇಲೆ ಚುನಾವಣೆ ನಡೆಯಬೇಕು ಎಂದು ಆಗ್ರಹಿಸಿದರು.