Site icon Vistara News

ಸ್ವಾತಂತ್ರ್ಯ ಲೋಗೊದಲ್ಲಿ ಮಹಲ್‌, ಮಿನಾರುಗಳ ಮೇಲುಗೈ: ಹಳಿಯಾಳ ಪುರಸಭೆ ಎದುರು ರಾತ್ರಿಯೇ ಪ್ರತಿಭಟನೆ

Haliyala

ಹಳಿಯಾಳ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಿಚಾರವಾಗಿ ಉ.ಕ ಜಿಲ್ಲೆಯ ಹಳಿಯಾಳ ಪುರಸಭೆ ಸಿದ್ಧಪಡಿಸಿದ ಲೋಗೊ ವಿವಾದಕ್ಕೆ ಕಾರಣವಾಗಿದ್ದು, ಹಳಿಯಾಳ ಪಟ್ಟಣದಲ್ಲಿ ಬಿಜೆಪಿ, ಹಿಂದೂ ಸಂಘಟನೆಗಳ ಮುಖಂಡರು ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

ಪುರಸಭೆ ಸಿದ್ಧಪಡಿಸಿದ ಲೋಗೊದಲ್ಲಿ ತಾಜ್ ಮಹಲ್, ಕುತುಬ್ ಮಿನಾರ್ ಮುಂತಾದ ಒಂದೇ ಧರ್ಮದ ಸ್ಮಾರಕಗಳ ಚಿತ್ರವಿದ್ದು ಅದನ್ನು ಬದಲಿಸಬೇಕು ಎಂಬುದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಗ್ರಹವಾಗಿದೆ‌.

ಈ ಸಂಬಂಧ ಬೆಳಗ್ಗೆಯಿಂದಲೂ ಪುರಸಭೆ ಎದುರು ವಾಗ್ವಾದ ನಡೆದೇ ಇತ್ತು. ಸಾಯಂಕಾಲ ಬಿಜೆಪಿ ಪ್ರಮುಖರು ನಡೆಸಿದ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಪಿ.ಜಿ ಶಿಂಧೆ ರಾತ್ರಿಗೆ ಲೋಗೊ ಬದಲಿಸುವುದಾಗಿ ತಿಳಿಸಿದ್ದರು. ಆದರೆ ರಾತ್ರಿಯಾದರೂ ಲೋಗೊ ಬದಲಾಗದ ಕಾರಣ ಪುರಸಭೆ ಎದುರು ರಾತ್ರೊರಾತ್ರಿ ಹಠಾತ್ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದು ಹಳಿಯಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುನೀಲ್ ಹೆಗಡೆ ಆಗಮಿಸಿ ಹಿಂದೂಪರ ಕಾರ್ಯಕರ್ತರನ್ನು ಬಿಡಿಸಿದ್ದಾರೆ ಎನ್ನುವ ಮಾಹಿತಿಯಿದೆ.

ಇದನ್ನೂ ಓದಿ | ಜಾಹೀರಾತು ವಿವಾದ | ಚಿತ್ರದಲ್ಲಿ ನೆಹರು ಇದ್ದಾರೆ, ಗಾಬರಿಯಾಗಬೇಡಿ ಎಂದ ಸಿಎಂ ಬಸವರಾಜ ಬೊಮ್ಮಾಯಿ

Exit mobile version