Site icon Vistara News

ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿ ವಿರುದ್ಧ ಹಲವೆಡೆ ಪ್ರತಿಭಟನೆ!

rohith chakratirtha

ಬೆಂಗಳೂರು: ಪಠ್ಯಪುಸ್ತಕ ವಿವಾದ ಮುಗಿಲುಮುಟ್ಟಿದ್ದು ರಾಜ್ಯದ ಹಲವು ಜಾಗದಲ್ಲಿ ಕರವೇ ಕಾರ್ಯಕರ್ತರಿಂದ ರೋಹಿತ್‌ ಚಕ್ರತೀರ್ಥ ವಿರುದ್ಧ ಮಂಗಳವಾರ ಪ್ರತಿಭಟನೆಗಳು ನಡೆದಿವೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾದ ರೋಹಿತ್‌ ಚಿಕ್ರತೀರ್ಥ ಅವರನ್ನು ವಜಾ ಮಾಡುವಂತೆ ಘೋಷಣೆ ಕೂಗಲಾಯಿತು. ಅನೇಕ ಸಂಘ ಸಂಸ್ಥೆಯವರು ಪ್ರತಿಭಟಿಸಿದರು.

ಹಾವೇರಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಹಿನ್ನೆಲೆಯಲ್ಲಿ ಕರವೇಯಿಂದ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ‌ಯನ್ನು ವಜಾ ಮಾಡುವಂತೆ ಪ್ರತಿಭಟನೆಯ ಮೂಲಕ ಆಗ್ರಹಿಸಲಾಯಿತು. ಅಲ್ಲದೆ, ಅಧ್ಯಕ್ಷರಾದ ರೋಹಿತ್‌ ಚಕ್ರತೀರ್ಥ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು.

ಕೊಪ್ಪಳ: ಕುವೆಂಪು ಅವರಿಗೆ ಅವಮಾನಿಸಿದ ರೋಹಿತ್ ಚಕ್ರತೀರ್ಥ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೊಪ್ಪಳದಲ್ಲಿ ಪ್ರತಿಭಟನೆ ಮಾಡಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರ ನೇತೃತ್ವದಲ್ಲಿ ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದ ಬಳಿಯಿಂದ ಅಶೋಕ ಸರ್ಕಲ್ ವರೆಗೆ ಮೆರವಣಿಗೆ ಮೂಲಕ ಪ್ರತಿಭಟನೆ ಮಾಡಲಾಯಿತು.

ಬಾಗಲಕೋಟೆ: ರೋಹಿತ್ ‌ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ರದ್ದುಗೊಳಿಸಲು ಒತ್ತಾಯಿಸಿ ಬಾಗಲಕೋಟೆಯಲ್ಲಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು. ರೋಹಿತ್ ಚಕ್ರತೀರ್ಥ ಕನ್ನಡ ವಿರೋಧಿ ‌ಎಂದು ಆರೋಪಿಸಿ ಅವರ ವಿರುದ್ಧ ಘೋಷಣೆ ಕೂಗಲಾಯಿತು. ಇದೇ ಬಿಜೆಪಿ ಸರ್ಕಾರದ ವಿರುದ್ಧವೂ ಘೋಷಣೆ ಕೂಗಲಾಯಿತು.

ಬಳ್ಳಾರಿ: ಬಳ್ಳಾರಿ ರಾಯಲ್ ವೃತ್ತದಿಂದ ಡಿಸಿ ಕಛೇರಿವರಿಗೆ ಕರವೇ ಕಾರ್ಯಕರ್ತರ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ಮಾಡಲಾಯಿತು. ರೋಹಿತ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿ ರದ್ದು ಪಡಿಸಲು ಕರವೇ ಕಾರ್ಯಕರ್ತರು ಒತ್ತಾಯಿಸಿದರು. ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಪರಿಷ್ಕರಣೆ ಪಠ್ಯ ಮುಂದುವರೆಸಲು ಡಿಸಿಗೆ ಮನವಿ ಮಾಡಿಕೊಂಡರು.

ಇದನ್ನೂ ಓದಿ:ʼವಿವಾದದ ಚಕ್ರತೀರ್ಥʼದಲ್ಲಿ ಪಠ್ಯಪುಸ್ತಕ : ಹೊಸ ಪಠ್ಯವನ್ನು ತಡೆಹಿಡಿಯಲು ಹಂಪನಾ ಆಗ್ರಹ

Exit mobile version