ಯಾದಗಿರಿ: ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಪ್ರಚೋದನಕಾರಿ ಭಾಷಣ (Provocative speech) ಮಾಡಿದ ಹಿನ್ನೆಲೆಯಲ್ಲಿ ಆಂದೋಲದ ಸಿದ್ದಲಿಂಗ ಶ್ರೀಗಳ (Andola Siddalinga Swamiji) ವಿರುದ್ಧ ಸುಮೋಟೋ ಕೇಸ್ (suo moto case) ದಾಖಲು ಮಾಡಲಾಗಿದೆ.
ಯಾದಗಿರಿಯ (yadgir news) ಶಹಾಪುರದ ನಗರದಲ್ಲಿ ಇದೇ ಅಕ್ಟೋಬರ್ 3ರಂದು ನಡೆದಿದ್ದ ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ, ಪ್ರಚೋದನೆ ಹಾಗೂ ಅನ್ಯ ಧರ್ಮೀಯರ ಭಾವನೆಗೆ ಧಕ್ಕೆ ತರುವಂತೆ ಭಾಷಣ ಮಾಡಿದ ಆರೋಪದಲ್ಲಿ ಕೇಸ್ ದಾಖಲು ಮಾಡಲಾಗಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ 295a, 153 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ.
ʼʼಶಿವಮೊಗ್ಗದಲ್ಲಿ ಹಿಂದೂಗಳನ್ನು ಬೆದರಿಸಲಾಗಿದೆ. ತಲ್ವಾರ್ ಝಳಪಿಸಿ ಹಿಂದೂ ಮಹಿಳೆಯರನ್ನು ರೇಪ್ ಮಾಡುತ್ತೇವೆಂದು ಬೆದರಿಸಲಾಗಿದೆ. ನಿಮ್ಮ ಹತ್ರ ಮೊಂಡು ತಲ್ವಾರ್ ಇರಬಹುದು, ಆ ಮೊಂಡು ತಲ್ವಾರ್‌ನಿಂದ ನಮ್ಮನ್ನು ಎದುರಿಸೋಕೆ ಬಂದ್ರೆ ನಮ್ಮಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಖಡ್ಗ ಇದೆ, ಛತ್ರಪತಿ ಶಿವಾಜಿ ಮಹಾರಾಜರ ಖಡ್ಗ ಇದೆ. ಏಕ್ ಮಾರ್ ದೋ ತುಕಡಾ. ಹೊಡೆದರೆ ದೇಹದ ಒಂದು ತುಂಡು ಪಾಕಿಸ್ತಾನಕ್ಕೆ ಹೋಗಬೇಕು, ಇನ್ನೊಂದು ತುಂಡು ಬಾಂಗ್ಲಾದೇಶಕ್ಕೆ ಹೋಗಬೇಕು. ಹಿಂದುಗಳನ್ನು ಕೆಣಕಬೆಡಿ, ಹಿಂದೂಗಳನ್ನು ಕೆಣಕಿದರೆ ಕರ್ನಾಟಕ ಎರಡನೇ ಗೋಧ್ರಾ ಆಗುತ್ತದೆ. ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಕೆ ಮುಂದೆ ಬರುತ್ತಾ ಇಲ್ಲʼʼ ಎಂದು ಆಂದೋಲ ಶ್ರೀ ಭಾಷಣದಲ್ಲಿ ಹರಿಹಾಯ್ದಿದ್ದರು.
ಇದನ್ನೂ ಓದಿ: Chaitra Kundapura : ನಕಲಿ ಆರೆಸ್ಸೆಸ್ ಪ್ರಚಾರಕನ ಬಣ್ಣ ಬಯಲು ಮಾಡಿದ ಹಿಂದು ಕಾರ್ಯಕರ್ತ ತುಡುಕೂರು ಮಂಜುಗೆ ನೋಟಿಸ್