Site icon Vistara News

Psycho Blackmail : ಖಾಸಗಿ ವಿಡಿಯೊ ಮಾಡಿ ಯುವಕನಿಂದ ಸೈಕೋ ವರ್ತನೆ; ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ

blackmail

ಬೆಂಗಳೂರು: ʻಗರ್ಲ್‌ ಫ್ರೆಂಡ್‌ ಬರ್ತ್ ಡೇ ಇದೆ ಪಾರ್ಟಿಗೆ ಬಾʼ ಎಂದು ಮನೆಗೆ ಕರೆಸಿಕೊಂಡವನು, ಕೇಕ್‌ನಲ್ಲಿ ನಶೆ ಬರಿಸುವ ಮದ್ದು ಬೆರೆಸಿ ಬಳಿಕ ಮಹಿಳೆಯ ಖಾಸಗಿ ವಿಡಿಯೊ ಮಾಡಿ ಬ್ಲ್ಯಾಕ್‌ ಮೇಲ್‌ (Psycho Blackmail) ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಸೈಕೋ ಯುವಕನ ವಿರುದ್ಧ ಸಂತ್ರಸ್ತ ಮಹಿಳೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಂಜು ಅಲಿಯಾಸ್‌ ವಿನೋದ್ ಎಂಬಾತನಿಂದ ಕುಕೃತ್ಯ ನಡೆದಿದೆ. ಒಂದೇ ಊರಿನವರು ಎಂಬ ಕಾರಣಕ್ಕೆ ಸಂತ್ರಸ್ತ ಮಹಿಳೆ ಮಂಜು ಜತೆಗೆ ಸಲುಗೆ ಹೊಂದಿದ್ದರು. ಹೀಗೆ ಕಳೆದ ಎರಡು ವರ್ಷಗಳ ಹಿಂದೆ ಆರೋಪಿ ಮಂಜು ತನ್ನ ಗರ್ಲ್ ಫ್ರೆಂಡ್ ಹುಟ್ಟು ಹಬ್ಬ ಇದೆ ಎಂದು ಮಹಿಳೆಯನ್ನು ಮನೆಗೆ ಕರೆಸಿದ್ದ.

ಪ್ರೇಯಸಿ ಕಡೆಯಿಂದ ಕೇಕ್ ಕಟ್ ಮಾಡಿಸಿ ಹುಟ್ಟು ಹಬ್ಬವನ್ನು ಆಚರಿಸಿದ್ದ. ಬಳಿಕ ಇಬ್ಬರೂ ಸೇರಿ ಸಂತ್ರಸ್ತೆಗೆ ಜ್ಯೂಸ್ ಹಾಗು ಕೇಕ್ ತಿನ್ನಿಸಿದ್ದರು. ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯ ಖಾಸಗಿ ವಿಡಿಯೊವನ್ನು ಮಂಜು ಮಾಡಿಕೊಂಡಿದ್ದ. ಆ ವಿಡಿಯೊ ತೋರಿಸುತ್ತಾ ಸೈಕೋ ರೀತಿ ವರ್ತಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನನ್ನೊಂದಿಗೆ ಸ್ಟೈಲ್ ಆಗಿ ಮಾತನಾಡಬೇಕು, ಲುಕ್ ಕೊಡಬೇಕು, ಫೋಸ್ ಕೊಡಬೇಕು ಇಲ್ಲದಿದ್ದರೆ ವಿಡಿಯೊ ಲಿಂಕ್‌ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನಂತೆ.

ಸೈಕೋ ಯುವಕನಿಂದ ಕೊಲೆ ಬೆದರಿಕೆ

ಈತನ ಕಾಟ ತಾಳಲಾರದೆ ಮಹಿಳೆ ಮನೆಯನ್ನು ಕಲ್ಕೆರೆಗೆ ಶಿಫ್ಟ್‌ ಮಾಡಿದ್ದರಂತೆ. ಅಲ್ಲಿಗೂ ಬಂದು ಮಾನಸಿಕ ಹಿಂಸೆ ನೀಡುತ್ತಿದ್ದ ಮಂಜು, ಪೊಲೀಸರಿಗೆ ಏನಾದರೂ ದೂರು ನೀಡಿದರೆ ಚಾಕುವಿನಿಂದ ಹತ್ಯೆ ಮಾಡಿ ಜೈಲಿಗೆ ಹೋಗುವುದಾಗಿ ಬೆದರಿಸುತ್ತಿದ್ದನಂತೆ. ಇದೇ ಭಯದಲ್ಲಿ ಕಳೆದ ಎರಡು ವರ್ಷಗಳ ಈತನ ಸೈಕೋ ವರ್ತನೆಯನ್ನು ಸಹಿಸಿಕೊಂಡಿದ್ದರಂತೆ.

ಇದನ್ನೂ ಓದಿ: No Liquor shop: ಮಸೀದಿ ಮುಂಭಾಗ ಬೇಡ ಮದ್ಯದಂಗಡಿ; ರಿಪ್ಪನ್ ಪೇಟೆಯಲ್ಲಿ ಸಾರ್ವಜನಿಕರಿಂದ ಪ್ರತಿಭಟನೆ

ಸೈಕೋ ವರ್ತನೆಗೆ ಬೇಸತ್ತ ಮಹಿಳೆ

ಎರಡು ವರ್ಷಗಳ ನಿರಂತರ ಸೈಕೋ ವರ್ತನೆಯಿಂದ ಬೇಸತ್ತು ಮಹಿಳೆಯು ತನ್ನ ಪತಿಗೆ ವಿಚಾರ ತಿಳಿಸಿದ್ದಾರೆ. ಬಳಿಕ ಪತಿ ಜಗದೀಶ್ ದೂರಿನ ಮೇರೆಗೆ ಈಗ ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಸೈಕೋ ಮಂಜುಗಾಗಿ ಹುಡುಕಾಟ ನಡೆಸಿದ್ದಾರೆ.

Exit mobile version