ಬೆಂಗಳೂರು: ರಾಜ್ಯದ 541 ಅನುದಾನರಹಿತ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ (PU Board) ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ! ಕಳೆದ ಮೂರು ವರ್ಷಗಳಿಂದ ಶೂನ್ಯ ದಾಖಲಾತಿ ಪಡೆದ ಪಿಯು ಕಾಲೇಜುಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
ಕಳೆದ 3 ವರ್ಷಗಳಿಂದ ರಾಜ್ಯದ 541 ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೊರತೆ ಇರುವುದು ಕಂಡು ಬಂದಿದೆ. ಸರ್ಕಾರದ ಶಿಕ್ಷಣ ನಿಯಮದ ಪ್ರಕಾರ ಇಂಥ ಕಾಲೇಜುಗಳಲ್ಲಿ ದಾಖಲಾತಿಗೆ ನಿರ್ಬಂಧ ಬೀಳುತ್ತದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷದ ಮಟ್ಟಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿತ್ತು. ಈ ವರ್ಷ ಕನಿಷ್ಠ 40 ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ದಾಖಲಾತಿ ಪಡೆದಿರಬೇಕು ಎಂಬ ಷರತ್ತಿನೊಂದಿಗೆ ವಿನಾಯಿತಿ ನೀಡಲಾಗಿತ್ತು.
ಈ ವರ್ಷದ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಲೇಜಿನವರು ನೀಡುವ ಮಾಹಿತಿಯನ್ನು ಆಧರಿಸಿ ಇಲಾಖೆಯು ಪರಿಶೀಲನೆ ನಡೆಸಲಿದೆ ಎಂದು ತಿಳಿಸಲಾಗಿದೆ. ಈ ವೇಳೆ ಕಳೆದ ಮೂರು ವರ್ಷಗಳಿಂದ ಶೂನ್ಯ ದಾಖಲಾತಿ ಪಡೆದಿರುವ ಪಿಯು ಕಾಲೇಜುಗಳ ಪಟ್ಟಿಯನ್ನು ಸರ್ಕಾರವು ಬಿಡುಗಡೆ ಮಾಡಿದೆ.
ಶೂನ್ಯ ದಾಖಲಾತಿಯ ಕಾಲೇಜುಗಳು ಎಲ್ಲೆಲ್ಲಿ?
ಜಿಲ್ಲೆ | ಕಾಲೇಜುಗಳ ಸಂಖ್ಯೆ |
ಬೆಂಗಳೂರು ದಕ್ಷಿಣ | 93 |
ಬೆಂಗಳೂರು ಉತ್ತರ | 61 |
ಬಿಜಾಪುರ | 26 |
ತುಮಕೂರು ಹಾಗೂ ಮೈಸೂರು | ತಲಾ 24 |
ಕಲಬುರಗಿ | 23 |
ಚಿತ್ರದುರ್ಗ- 21 | 21 |
ದಾವಣಗೆರೆ- 19 | 19 |
ಧಾರವಾಡ, ಬೀದರ್ | 18 |
ಚಿಕ್ಕಬಳ್ಳಾಪುರ | 16 |
ಚಿಕ್ಕೋಡಿ | 17 |
ಬೆಳಗಾವಿ, ಹಾಸನ, ಮಂಡ್ಯ | ತಲಾ 15 |
ರಾಯಚೂರು | 14 |
ಬಳ್ಳಾರಿ | 13 |
ಬಾಗಲಕೋಟೆ | 11 |
ಕೋಲಾರ, ಮಂಗಳೂರು | ತಲಾ 10 |
ಹಾವೇರಿ, ಯಾದಗಿರಿ | ತಲಾ 8 |
ಉಡುಪಿ | 7 |
ಚಾಮರಾಜನಗರ, ಚಿಕ್ಕಮಗಳೂರು, ರಾಮನಗರ, ಗದಗ, ಕೊಡಗು | ತಲಾ 6 |
ಕೊಪ್ಪಳ, ಶಿವಮೊಗ್ಗ | ತಲಾ 5 |
ಉತ್ತರ ಕನ್ನಡ | 3 |
ಇದನ್ನೂ ಓದಿ: ಕೆಲಸಕ್ಕೆ ಕರೀಬೇಡಿ, ಸಂಬಳಕ್ಕೆ ಮಾತ್ರ ಮರಿಲೇಬೇಡಿ, ಇದು ಯಾದಗಿರಿ ಶಿಕ್ಷಕರ ಕಥೆ!