ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (second PU Exam) ಫೇಲಾದವರಿಗೆ ಪೂರಕ ಪರೀಕ್ಷೆ (PU Supplementary Exam) ಇರುವುದು ಎಲ್ಲರಿಗೂ ಗೊತ್ತು. ಆದರೆ, ಪೂರಕ ಪರೀಕ್ಷೆಯಲ್ಲೂ ಫೇಲಾದರೆ ಏನು ಮಾಡೋದು? ಇಲ್ಲಿವರೆಗೆ ಮುಂದಿನ ವರ್ಷದವರೆಗೂ (education news) ಕಾಯಬೇಕಾಗಿತ್ತು. ಆದರೆ, ಈ ಬಾರಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಹೊಸ ಅವಕಾಶವೊಂದನ್ನು ನೀಡಿದೆ. ಅದೇನೆಂದರೆ, ಎರಡನೇ ಬಾರಿ ಪೂರಕ ಪರೀಕ್ಷೆ (Second Supplementary Exam) ನಡೆಸುವುದು.
ಹೌದು, 2022-23ರ ಶೈಕ್ಷಣಿಕ (Education news) ವರ್ಷದಲ್ಲಿ ದ್ವಿತೀಯ ಪಿಯುಸಿಗೆ ಎರಡನೇ ಬಾರಿಗೆ ಪೂರಕ ಪರೀಕ್ಷೆಯನ್ನು ನಡೆಸುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಕಟಿಸಿದೆ. ವಾರ್ಷಿಕ ಮುಖ್ಯ ಪರೀಕ್ಷೆ ಹಾಗೂ ಮೊದಲ ಪೂರಕ ಪರೀಕ್ಷೆ ಎರಡರಲ್ಲಿಯೂ ಪಾಸ್ ಆಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗಾಗಿ ಈ ಅವಕಾಶವನ್ನು ನೀಡಿದೆ.
ಯಾರು ಯಾರು ಪರೀಕ್ಷೆ ಬರೆಯಬಹುದು?
ಈ ವರ್ಷ ಇದೇ ಮೊದಲ ಬಾರಿಗೆ ಎರಡನೇ ಪೂರಕ ಪರೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ. ಹಾಗಂತ ಇದು ಈ ಕೇವಲ ಈ ವರ್ಷದ ಪರೀಕ್ಷೆಗಳನ್ನು ಫೇಲಾದವರಿಗೆ ಸೀಮಿತವಾದ ಅವಕಾಶವಲ್ಲ. ಬದಲಾಗಿ, ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದವರು ಕೂಡಾ ಈ ಪೂರಕ ಪರೀಕ್ಷೆ ಬರೆಯಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ತಿಳಿಸಿದೆ.
ಎರಡನೇ ಪೂರಕ ಪರೀಕ್ಷೆ ಯಾವಾಗ?
ಈ ಬಾರಿಯ ದ್ವಿತೀಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗಾಗಿ ಮೇ 23ರಿಂದ ಜೂನ್ 2ರವರೆಗೆ ಪೂರಕ ಪರೀಕ್ಷೆ ನಡೆದಿತ್ತು. ಇದರಲ್ಲಿ ಈ ಬಾರಿ 1,57,756 ವಿದ್ಯಾರ್ಥಿಗಳು ಪರೀಕ್ಷೆ ಬರೆದು 50,478 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೆ, ಮೊದಲ ಪೂರಕ ಪರೀಕ್ಷೆಯಲ್ಲೂ ಫೇಲ್ ಆದವರಿಗಾಗಿ ಆಗಸ್ಟ್ 21ರಿಂದ ಸೆಪ್ಟೆಂಬರ್ 2ರವರೆಗೆ ಎರಡನೇ ಪೂರಕ ಪರೀಕ್ಷೆ ನಡೆಯಲಿದೆ. ನಿಜವೆಂದರೆ ಈ ರೀತಿ ಎರಡನೇ ಬಾರಿ ಪೂರಕ ಪರೀಕ್ಷೆಗೆ ಅವಕಾಶ ನೀಡುವ ಪ್ರಸ್ತಾವನೆಯನ್ನು ಉಪನ್ಯಾಸಕರು ವಿರೋಧಿಸಿದ್ದರು.
ಪರೀಕ್ಷೆ ವೇಳಾಪಟ್ಟಿ ಹೀಗಿದೆ
21/08/2023: ಮಧ್ಯಾಹ್ನ 2.15 ರಿಂದ 5.30: ಕನ್ನಡ, ಅರೇಬಿಕ್
22/08/2023: ಮಧ್ಯಾಹ್ನ ಐಚ್ಛಿಕ ಕನ್ನಡ, ರಸಾಯನ ಶಾಸ್ತ್ರ, ಮೂಲ ಗಣಿತ
23/08/2023: ಮಧ್ಯಾಹ್ನ ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಿತ ವಿಜ್ಞಾನ
24/08/2023: ಮಧ್ಯಾಹ್ನ ತರ್ಕ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ವ್ಯವಹಾರ ಅಧ್ಯಯನ
25/08/2023: ಮಧ್ಯಾಹ್ನ ಇತಿಹಾಸ, ಸಂಖ್ಯಾಶಾಸ್ತ್ರ
26/08/2023: ಬೆಳಗ್ಗೆ 10.15 ರಿಂದ 12.30ರವರೆಗೆ ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್
27/08/2023: ಭಾನುವಾರ ರಜೆ
28/08/2023: ಮಧ್ಯಾಹ್ನ 2.15ರಿಂದ 5.30ರ ವರೆಗೆ ಭೂಗೋಳ ಶಾಸ್ತ್ರ, ಮನಶಾಸ್ತ್ರ, ಭೌತ ಶಾಸ್ತ್ರ
29/08/2023: ಮಧ್ಯಾಹ್ನ ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
30/08/2023: ಮಧ್ಯಾಹ್ನ ರಾಜ್ಯ ಶಾಸ್ತ್ರ, ಗಣಿತ ಶಾಸ್ತ್ರ
31/08/2023: ಮಧ್ಯಾಹ್ನ ಹಿಂದಿ
1/09/2023: ಮಧ್ಯಾಹ್ನ ಅರ್ಥ ಶಾಸ್ತ್ರ, ಜೀವ ಶಾಸ್ತ್ರ
2/09/2023: ಮಧ್ಯಾಹ್ನ ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್