ದಾವಣಗೆರೆ: ಹರಿಹರದ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ನಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Girl found dead) ಮಾಡಿಕೊಂಡಿದ್ದಾಳೆ. ಈ ಸಾವಿನ ಬಗ್ಗೆ ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೂಲತಃ ಮಾಯಕೊಂಡ ಹೋಬಳಿಯ ಬಸ್ಸಾಪುರ ಗ್ರಾಮದ ವಿದ್ಯಾರ್ಥಿನಿ ವರ್ಷಿತಾ (18) ಅತ್ಮಹತ್ಯೆ ಮಾಡಿಕೊಂಡವಳು. ಆಕೆ ಹಾಸ್ಟೆಲ್‌ನಲ್ಲಿದ್ದು ಹರಿಹರದ ಕಾಲೇಜಿನಲ್ಲಿ ಕಲಿಯುತ್ತಿದ್ದಳು.
ವರ್ಷಿತಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಪೋಷಕರು, ಹಾಸ್ಟೆಲ್ ವಾರ್ಡನ್, ಸಿಬ್ಬಂದಿ ವರ್ಗ ಆತ್ಮಹತ್ಯೆ ಗೆ ಕಾರಣ ಎಂದು ಆರೋಪಿಸುತ್ತಿದ್ದಾರೆ.
ನಮ್ಮ ಮಗಳು ಅತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಲ್ಲ. ಹೀಗಾಗಿ ಕೂಡಲೇ ತನಿಖೆ ನಡೆಸಿ ಸತ್ಯಗಳನ್ನು ಹೊರತರಬೇಕು, ತಪ್ಪಿತಸ್ಥರಿಗೆ ಶಿಕ್ಷಿ ವಿಧಿಸಿ ನ್ಯಾಯ ಕೊಡಿಸಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ. ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಳಿ ಹಬ್ಬದ ದಿನವೇ ಕೆರೆಯಲ್ಲಿ ಈಜಲು ಹೋಗಿ ಯುವಕ ನೀರುಪಾಲು
ಧಾರವಾಡ: ರಾಜ್ಯಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗಿದೆ. ಆದರೆ, ಇಲ್ಲೊಬ್ಬ ಯುವಕನಿಗೆ ಹೋಳಿ ಸಂಭ್ರಮ ದುರಂತವಾಗಿ (Holi tragedy) ಬದಲಾಗಿದೆ. ಹೋಳಿ ಹಬ್ಬದ ದಿನವೇ ಕೆರೆಯಲ್ಲಿ ಈಜಲು ಹೋದ ಯುವಕನೊಬ್ಬ ನೀರುಪಾಲಾಗಿದ್ದಾನೆ. ಧಾರವಾಡ ತಾಲೂಕಿನ ನಿಗದಿ ಗ್ರಾಮದ ಅಣ್ಣಪ್ಪ ದಾಸನಕೊಪ್ಪ (27) ಮೃತಪಟ್ಟ ಯುವಕ.
ಹೋಳಿ ಹಬ್ಬದ ನಿಮಿತ್ತ ಬಣ್ಣದೋಕುಳಿಯಲ್ಲಿ ಮಿಂದೆದ್ದಿದ್ದ. ಬಳಿಕ ಅದನ್ನು ತೊಳೆದುಕೊಳ್ಳಲೆಂದು ನಿಗದಿ ಹಿರಿಯ ಕೆರೆಗೆ ಹೋಗಿದ್ದ. ಅಲ್ಲಿ ಆತ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ.
ಹಬ್ಬ ಆಚರಣೆ ಮಾಡಿದ ಸಂಭ್ರಮದಲ್ಲಿದ್ದ ಸಂಜೆಯೇ ಯುವಕನ ಸಾವು ಸಂಭವಿಸಿದ್ದು, ಆತನ ಮನೆಯವರು ಮತ್ತು ಗೆಳೆಯರು ಕಂಗಾಲಾಗಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ; Women’s Day 2023: ಹೆಣ್ಣುಮಕ್ಕಳಲ್ಲಿ ಸೌಂದರ್ಯಕ್ಕೂ ಮೀರಿದ ಗುಣಗಳೇ ಆಕೆಯ ಅಳತೆಗೋಲಾಗಲಿ