ಬೆಂಗಳೂರು: ʼಪುಲ್ವಾಮಾ ದಾಳಿ ಹುತಾತ್ಮರ ಸಂಸ್ಮರಣಾ ದಿನʼ (Pulwama Martyr’s Day) ಹಿನ್ನೆಲೆಯಲ್ಲಿ ಪುಲ್ವಾಮಾ ದಾಳಿಯಲ್ಲಿ ಮಡಿದ ವೀರ ಯೋಧರಿಗೆ ರಾಜ್ಯದ ವಿವಿಧೆಡೆ ಗೌರವ ನಮನ ಸಲ್ಲಿಸಿ, ಯೋಧರ ತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸಲಾಯಿತು.
ಶಿವಮೊಗ್ಗದಲ್ಲಿ ಸೈನಿಕ ಪಾರ್ಕ್‌ನಲ್ಲಿ ಸೈನಿಕರ ಸ್ಮಾರಕಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸಿದರು. ಮೊಂಬತ್ತಿ ಹಚ್ಚಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಗೌರವಾರ್ಪಣೆ ಮಾಡಿದರು. ಬಳಿಕ ಪುಲ್ವಾಮಾ ದಾಳಿಯ ನಿಖರ ಸತ್ಯವನ್ನು ಕೇಂದ್ರ ಸರ್ಕಾರ ದೇಶದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಮಂಡ್ಯದಲ್ಲಿ ಮೃತ ಯೋಧ ಗುರು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ
ಮಂಡ್ಯ: ಪುಲ್ವಾಮಾ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಸಿಆರ್‌ಪಿಎಫ್ ಯೋಧ ಗುರು ಕೂಡ ಹುತಾತ್ಮೃಾಗಿದ್ದರು. ಹೀಗಾಗಿ ಕುಟುಂಬಸ್ಥರಿಂದ ಗುರುವಿನ ಸಮಾಧಿಗೆ ಪೂಜೆ ಸಲ್ಲಿಸಿ ಗೌರವ ಸಮರ್ಪಣೆ ಮಾಡಲಾಯಿತು. ಈ ವೇಳೆ ಗುರು ತಂದೆ, ತಾಯಿ, ಸಹೋದರ ಮತ್ತು ಸಂಬಂಧಿಕರು ಇದ್ದರು. ಈ ವೇಳೆ ಮಗನನ್ನು ಸ್ಮರಿಸಿಕೊಂಡು ಪೋಷಕರು ಕಣ್ಣೀರಿಟ್ಟರು.
ಇದನ್ನೂ ಓದಿ | Pulwama Attack: ಪುಲ್ವಾಮಾ ದಾಳಿಗೆ ಸಂಚು ರೂಪಿಸಿದ 19 ಉಗ್ರರಲ್ಲಿ ಎಷ್ಟು ಜನರ ಹತ್ಯೆ? ಕಾಶ್ಮೀರ ಎಡಿಜಿಪಿ ಹೇಳಿದ್ದೇನು?
2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆ ತೆರಳುತ್ತಿದ್ದ ವಾಹನಗಳ ಮೇಲೆ ಜೈಶೆ ಮೊಹಮ್ಮದ್ ಸಂಘಟನೆಯ ಉಗ್ರ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ. ಈ ಭೀಕರ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.