ಬೆಂಗಳೂರು: ವರನಟ ಡಾ.ರಾಜ್‌ಕುಮಾರ್ ಅಭಿಮಾನಿ ದೇವರು ಎಂದರೆ, ಅವರ ಮಗ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿಮಾನಿಗಳೇ ನಮ್ಮ ಮನೆ ದೇವರು ಎಂದು ಅಭಿಮಾನಿಗಳ ಮನಸ್ಸು ಗೆದ್ದವರು. ಇಂತಹ ಅಭಿಮಾನಿಗಳ ಪಾಲಿಗೆ ಪೀತ್ರಿಪಾತ್ರರಾಗಿರುವ ಅಪ್ಪು ಈ ಬಾರಿ ಗಣೇಶ ಚತುರ್ಥಿಯಲ್ಲಿ ಗಣೇಶನ ರೂಪವನ್ನು ಪಡೆದಿದ್ದಾರೆ.
ಪುನೀತ್ ಇಂದು ನಮ್ಮೊಂದಿಗೆ ಇಲ್ಲವಾದರೂ ಅಭಿಮಾನಿಗಳ ಪಾಲಿಗೆ ಅವರು ಎಂದೆಂದಿಗೂ ಜೀವಂತ. ಹೀಗಾಗಿ ಅಭಿಮಾನಿ ಕಲಾವಿದರು ತಮ್ಮ ಕಲ್ಪನೆಯಲ್ಲಿ ಗಣೇಶ ಮೂರ್ತಿಯೊಂದಿಗೆ ಪುನೀತ್ ರಾಜ್‌ಕುಮಾರ್ (Puneeth Rajkumar) ಮೂರ್ತಿಯ ತಯಾರಿಯನ್ನು ಮಾಡಿದ್ದಾರೆ.
ಗಣೇಶನೊಂದಿಗೆ ಪುನೀತ್ ಕುಳಿತಿರುವಂತೆ, ಗಣೇಶನ ಆಶೀರ್ವಾದ ಪಡೆಯುತ್ತಿರುವಂತೆ ಹೀಗೆ ನಾನಾ ರೂಪದಲ್ಲಿ ಮೂಡಿಬರುತ್ತಿದ್ದು, ಈ ಮೂರ್ತಿಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಈಗಾಗಲೇ ಗಣೇಶ ಮೂರ್ತಿಗಳ ಸಿದ್ಧತೆ ಮಾಡುವ ಕಾರ್ಯ ಶುರುವಾಗಿದೆ. ಎಲ್ಲೆಡೆ ಪುನೀತ್ ಹಾಗೂ ಗಣೇಶನ ಒಟ್ಟಿಗಿರುವ ಮೂರ್ತಿಗಳಿಗಾಗಿ ಬುಕ್ಕಿಂಗ್ ಕೂಡ ಶುರುವಾಗಿದೆ.
ಈ ತನಕ ಅಪ್ಪು ಅಭಿಮಾನಿಗಳು 100-150 ಮೂರ್ತಿಗಳಿಗಾಗಿ ಪ್ರೀ ಬುಕ್ಕಿಂಗ್ ಮಾಡಿ ತಮ್ಮ ಇಷ್ಟದ ಕಾನ್ಸೆಪ್ಟ್‌ನಲ್ಲಿ ಮೂರ್ತಿ ತಯಾರಿಕೆಗೆ ಆರ್ಡರ್ ಕೊಟ್ಟಿದ್ದಾರೆ. ಕೋವಿಡ್ ಕಾರಣಕ್ಕೆ ಕಳೆದ 2 ವರ್ಷಗಳಿಂದ ವ್ಯಾಪಾರಿಗಳು ನೆಲಕಚ್ಚಿದ್ದರು. ಈಗ ಧಾರ್ಮಿಕ ಆಚರಣೆಗೆ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಈ ಕಲೆಗೆ ಬೆಲೆ ಬರುತ್ತಿದೆ.
ಇದನ್ನೂ ಓದಿ | Lalbagh Flower Show | ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಈ ಬಾರಿ ರಾಜ್, ಪುನೀತ್ ಫೋಕಸ್