Site icon Vistara News

Puneeth Rajkumar | ಪುನೀತ್ ಅಗಲಿ ಇಂದಿಗೆ 11 ತಿಂಗಳು; ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು

ಬೆಂಗಳೂರು: ಡಾ. ಪುನೀತ್‌ ರಾಜಕುಮಾರ್‌ (Puneeth Rajkumar) ಅಗಲಿ ಇಂದಿಗೆ 11 ತಿಂಗಳು ಕಳೆದಿದೆ. ಪ್ರತಿ ತಿಂಗಳು ಅಪ್ಪು ಸಮಾಧಿಗೆ ಬಂದು ರಾಜ್‌ ಕುಟುಂಬಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. 2021ರ ಅಕ್ಟೋಬರ್ 29ರಂದು ಪುನೀತ್ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು. ಗುರುವಾರ ಅಶ್ವಿನಿ ಪುನೀತ್‌ ರಾಜಕುಮಾರ್‌ ಕಂಠೀರವ ಸ್ಟುಡಿಯೊಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

ಸಂಗ್ರಹ ಚಿತ್ರ

ಅಶ್ವಿನಿ ಪುನೀತ್ ರಾಜಕುಮಾರ್ ಜತೆಗೆ ರಾಘವೇಂದ್ರ ರಾಜಕುಮಾರ್, ವಿಜಯ್ ರಾಘವೇಂದ್ರ ಸೇರಿದಂತೆ ಇತರೆ ಸದಸ್ಯರು ಸಮಾಧಿಗೆ ಆಗಮಿಸಿದ್ದರು. ಮೈಸೂರಿನ ಯುವ ದಸರಾದಲ್ಲಿ ಬುಧವಾರವಷ್ಟೇ ನಡೆದಿದ್ದ ಅಪ್ಪು ನಮನ ಕಾರ್ಯಕ್ರಮದ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅಪ್ಪು ನೆನೆದು ಕಣ್ಣೀರು ಹಾಕಿದ್ದರು.

ಗಂಧದ ಗುಡಿ ಸಿನಿಮಾ ರಿಲೀಸ್‌ಗೆ ತಯಾರಿ

ಪುನೀತ್‌ ಅಗಲಿಕೆಯ ನೋವಿನಲ್ಲಿಯೇ ಗಂಧದ ಗುಡಿ ಸಿನಿಮಾ ಬಿಡುಗಡೆಗೂ ತಯಾರಿಯನ್ನು ನಡೆಸಲಾಗುತ್ತಿದೆ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (ಅಪ್ಪು) ಅವರ ಕನಸಿನ ಸಾಕ್ಷ್ಯ ಚಿತ್ರ ʼಗಂಧದಗುಡಿʼ (Gandhada Gudi 2022) ರಿಲೀಸ್ ಡೇಟ್‌ ಫಿಕ್ಸ್‌ ಆಗಿದೆ. ಬರುವ ಅಕ್ಟೋಬರ್ 28ಕ್ಕೆ ಅದ್ಧೂರಿಯಾಗಿ ರಾಜ್ಯಾದ್ಯಂತ ಈ ಚಿತ್ರ ತೆರೆ ಕಾಣಲಿದೆ.

ಅರಣ್ಯದ ಮಹತ್ವವನ್ನು ಸಾರುವ ಚಿತ್ರ ಗಂಧದ ಗುಡಿ. ಪುನೀತ್ ರಾಜಕುಮಾರ್ ನಾಡು ಸುತ್ತಿ, ಇಷ್ಟ ಪಟ್ಟು ಮಾಡಿರುವ ಚಿತ್ರ ಇದಾಗಿದೆ. ಈಗಾಗಲೇ ಈ ಚಿತ್ರದ ಟೀಸರ್‌, ಪೋಸ್ಟರ್‌ ಬಿಡುಗಡೆಯಾಗಿದೆ. ಅಪ್ಪು ಅಗಲಿದ ಒಂದು ವರ್ಷದ ಬಳಿಕ ಚಿತ್ರ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ | Kantara Movie | ವರ್ಲ್ಡ್‌ ಆಫ್‌ ಕಾಂತಾರ ಮೇಕಿಂಗ್‌ ಪ್ರೋಮೊ ಔಟ್‌: ಪುನೀತ್‌ ಹೀರೋ ಆಗಿರಬೇಕಿತ್ತಂತೆ!

Exit mobile version