Site icon Vistara News

BJP Workers : ಪುತ್ತೂರು ಶಾಸಕರ ಅಣಬೆ ಹೇಳಿಕೆ; ಕಾಲ್ನಡಿಗೆ ಜಾಥಾ ವೇಳೆ ಘೇರಾವ್​

BJp workers

#image_title

ಪುತ್ತೂರು (ದಕ್ಷಿಣ ಕನ್ನಡ): ಮಳೆ ಬಂದಾಗ ಅಣಬೆಗಳು ಹುಟ್ಟುಕೊಳ್ಳುವಂತೆ ಹೊಸ ಹೊಸ ನಾಯಕರು ಹುಟ್ಟಿಕೊಳ್ಳುತ್ತಾರೆ. ಮಳೆ ಬಂದಾಗ ಅಣಬೆಯೂ ಹೋಗುತ್ತದೆ ಎಂದು ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರು ನೀಡಿದ ಹೇಳಿಕೆ ಅಲ್ಲಿನ ಕ್ಷೇತ್ರದ ಕಾರ್ಯಕರ್ತರ (BJP Workers) ಅಸಮಾಧಾನಕ್ಕೆ ಕಾಣವಾಗಿದೆ. ಅದು ಅಮಿತ್​ಶಾ ಭೇಟಿ ಹಿನ್ನೆಲೆಯಲ್ಲಿ ಅಯೋಜಿಸಿದ್ದ ಕಾಲ್ನಡಿಗೆ ಜಾಥಾ ವೇಳೆ ಪ್ರತಿಫಲನಗೊಂಡಿದ್ದು, ಶಾಸಕರ ವಿರುದ್ಧ ಸ್ವಪಕ್ಷದ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಹಿಂದೂ ಮುಖಂಡ ಅರುಣ್​ ಪುತ್ತಿಲ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಚುನಾವಣೆ ಘೋಷಣೆಯಾಗುವ ಮೊದಲೇ ಟಿಕೆಟ್​ಗಾಗಿ ಪೈಪೋಟಿ ಶುರುವಾಗಿದೆ. ಪಕ್ಷದ ಕಾರ್ಯಕರ್ತರ ಬಣವೊಂದು ಪುತ್ತಿಲ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದೆ. ಅಂತೆಯೇ ಅಮಿತ್​ ಶಾ ಅವರ ಭೇಟಿ ಹಿನ್ನೆಲೆಯಲ್ಲಿ ಪುತ್ತೂರಿನ ದರ್ಬೆಯಿಂದ ಬೊಳುವಾರು ತನಕ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಏತನ್ಮಧ್ಯೆ, ಅಮಿತ್​ ಶಾ ಭೇಟಿ ಹಿನ್ನೆಲೆಯಲ್ಲಿ ಸ್ವಾಗತ ಕೋರಿ ಅರುಣ್​ ಪುತ್ತಿಲ ಬೆಂಬಲಿಗರು ಬ್ಯಾನರ್ ಹಾಕಿದ್ದಾರೆ. ಅದರಲ್ಲಿ ಬಿಜೆಪಿ ಮುಖಂಡರ ಚಿತ್ರಗಳೆಲ್ಲವನ್ನೂ ಹಾಕಿ ಸಂಜೀವ್​ ಮಠಂದೂರು ಅವರ ಭಾವಚಿತ್ರವನ್ನು ಹಾಕಿಲ್ಲ.

ಭಾವಚಿತ್ರವನ್ನು ಕೈ ಬಿಟ್ಟಿರುವ ಕುರಿತು ಸಂಜೀವ ಮಠಂದೂರು ಅವರ ಬಳಿ ಪ್ರಶ್ನೆ ಕೇಳಿದಾಗ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇದೆ. ಚುನಾವಣೆ ಸಂದರ್ಭದಲ್ಲಿ ಹೆಚ್ಚು ರಂಗು ಬರುತ್ತದೆ. ಮಳೆ ಬಂದಾಗ ಅಣಬೆ ಹುಟ್ಟುವಂತೆ ಚುನಾವಣೆ ಬಂದಾಗ ಹೊಸ ಹೊಸ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ಅದು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ, ಮಳೆ ಹೋದಾಗ ಅಣಬೆಯು ಹೋಗುತ್ತದೆ ಎಂದು ಉತ್ತರಿಸಿದ್ದರು. ಅದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿತ್ತು. ಇದರಿಂದ ಪುತ್ತಿಲ ಅಭಿಮಾನಿಗಳು ಆಕ್ರೋಶಗೊಂಡಿದ್ದರು. ನಮ್ಮ ನಾಯಕರನ್ನೇ ಶಾಸಕರು ಅಣಬೆಗೆ ಹೋಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Terror Politics : ಉಗ್ರರಿಗೆ ಬೆಂಬಲ ನೀಡುವ ಕಾಂಗ್ರೆಸ್ಸೇ ಒಂದು ಭಯೋತ್ಪಾದಕ ಸಂಘಟನೆ ಎಂದ ನಳಿನ್‌ ಕುಮಾರ್‌ ಕಟೀಲ್‌

ಕಾಲ್ನಡಿಗೆ ಜಾಥಾ ವೇಳೆ ಅರುಣ್​ ಪುತ್ತಿನ ಅಭಿಮಾನಿಗಳು ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಘೋಷಣೆ ಕೂಗಿದ್ದಾರೆ. ಶಾಸಕರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಾರ್ಯಕರ್ತರ ಕೋಪ ಕಂಡ ಶಾಸಕರು ಸ್ಥಳದಿಂದ ತೆರಳಿದ್ದರು ಎನ್ನಲಾಗಿದೆ.

Exit mobile version