Site icon Vistara News

Puttur News : ಡಿಆರ್‌ಡಿಓನಲ್ಲಿ ಕೆಲಸ ಮಾಡುತ್ತಿದ್ದ ಯುವ ವಿಜ್ಞಾನಿ ಆತ್ಮಹತ್ಯೆಗೆ ಶರಣು

Young Scientist Bharth Self harming

ಪುತ್ತೂರು: ಯುವ ವಿಜ್ಞಾನಿ (Scientist Death) ಆತ್ಮಹತ್ಯೆಗೆ (Self Harming) ಶರಣಾಗಿರುವ ಘಟನೆ ದಕ್ಷಿಣ ಕನ್ನಡದ ಪುತ್ತೂರಿನ (Puttur News) ಕಲ್ಲರ್ಪೆ ಗ್ರಾಮದಲ್ಲಿ ನಡೆದಿದೆ. ಭರತ್ ಕಲ್ಲರ್ಪೆ (24) ಆತ್ಮಹತ್ಯೆ ಮಾಡಿಕೊಂಡ ಯುವಕ.

ಎರಡು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕೆ ಸೇರಿದ್ದ ಭರತ್‌ ಡಿಆರ್‌ಡಿಓ (DRDO) ಹೈದರಾಬಾದ್ ಸಂಸ್ಥೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಪುತ್ತೂರಿನ ಕಲ್ಲರ್ಪೆ ನಿವಾಸಿಯಾಗಿರುವ ಭರತ್, ಕಳೆದ ಒಂದು ವಾರದ ಹಿಂದಷ್ಟೇ ಊರಿಗೆ ಬಂದಿದ್ದ.

ಈ ನಡುವೆ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಎನ್ನಲಾಗಿದೆ. ರಾಜೀನಾಮೆ ಪತ್ರ ನೀಡಿದ್ದರೂ ರಾಜೀನಾಮೆ ಸ್ವೀಕಾರ ಮಾಡಿರಲಿಲ್ಲ. ನಿನ್ನೆ ಬುಧವಾರ ರಾತ್ರಿ ಡಿಆರ್‌ಡಿಓ (DRDO) ಕಛೇರಿಯಿಂದ ಫೋನ್ ಕಾಲ್‌ ಬಂದಿದೆ. ಆ ಬಳಿಕ ಇಂದು ಗುರುವಾರ ಬೆಳಗ್ಗೆ ನೇಣು‌ ಬಿಗಿದ ಸ್ಥಿತಿಯಲ್ಲಿ ಭರತ್‌ ಪತ್ತೆಯಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Young scientist Bharath from Puttur commits suicide

ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Murder Case : ಜೋಡಿ ಕೊಲೆಗೆ ಟ್ವಿಸ್ಟ್‌; ಗಂಡನ ಸಾಲ ತೀರಿಸಲು ಅತ್ತೆ-ಮಾವನನ್ನೇ ಕೊಂದಳು!

ನವಜಾತ ಶಿಶುವನ್ನು ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಚರಂಡಿಗೆ ಎಸೆದು ಓಡಿದ ಮಹಾತಾಯಿ!

ರಾಯಚೂರು: ಮಹಾತಾಯಿಯೊಬ್ಬಳು ತನ್ನ ನವಜಾತ ಶಿಶುವೊಂದನ್ನು (Newborn Baby) ಬಾಕ್ಸ್‌ನಲ್ಲಿ ಪ್ಯಾಕ್‌ ಮಾಡಿ ದೇವದುರ್ಗ ಪಟ್ಟಣದ ಬಸ್‌ಸ್ಟ್ಯಾಂಡ್ (Devadurga Bus Stand) ಬಳಿ ಇರುವ ಚರಂಡಿಗೆ ಎಸೆದು (Throw down to drain) ಜಾಗ ಖಾಲಿ ಮಾಡಿರುವ ಘಟನೆ ನಡೆದಿದೆ. ಈ ಅಮಾನವೀಯ ಕೃತ್ಯಕ್ಕೆ ಎಲ್ಲೆಡೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಮಾಂಸದ ಮುದ್ದೆ ಸಮೇತ ನವಜಾತ ಶಿಶುವನ್ನು ತಾಯಿಯೊಬ್ಬಳು ಎಸೆದು ಓಡಿದ್ದಾಳೆ. ಬಸ್ ಸ್ಟ್ಯಾಂಡ್‌ನ ಚರಂಡಿಯಲ್ಲಿ ಬಾಕ್ಸ್‌ ಪತ್ತೆಯಾಗಿದ್ದು, ಮೃತ ಸ್ಥಿತಿಯಲ್ಲಿ ಶಿಶು ಪತ್ತೆಯಾಗಿದೆ.

ಮಗು ಎಸೆದ ಬಳಿಕ ಪಾಪಿ ತಾಯಿ ಅಲ್ಲಿಂದ ಓಡಿಹೋಗಿದ್ದಾಳೆ. ಹೀಗಾಗಿ ಚರಂಡಿಯಲ್ಲಿ ಸತ್ತು ಬಿದ್ದಿದ್ದ ಶಿಶುವಿನ ಕಳೇಬರವನ್ನು ಸಾರ್ವಜನಿಕರೇ ಹೊರಗೆ ತೆಗೆದಿದ್ದಾರೆ. ಇಂಥ ಒಂದು ಅಮಾನವೀಯ ಘಟನೆಗೆ ಹಿಡಿಶಾಪ ಹಾಕಿದ್ದಾರೆ. ಬಳಿಕ ಅವರೇ ಎಲ್ಲರೂ ಸೇರಿ ಆ ಶಿಶುವಿನ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರನ್ನು ಅಟ್ಟಾಡಿಸಿ ಹೊಡೆದ ಟೂರಿಸ್ಟ್ ಬೋಟ್ ಸಿಬ್ಬಂದಿ

ಉಡುಪಿ:‌ ಮಲ್ಪೆ ಬೀಚ್‌ನಲ್ಲಿ (Malpe Beach) ನೈತಿಕ ಪೊಲೀಸ್‌ಗಿರಿ (Moral policing) ನಡೆದ ಘಟನೆಯೊಂದು ವರದಿಯಾಗಿದೆ. ಟೂರಿಸ್ಟ್ ಬೋಟ್ ಸಿಬ್ಬಂದಿಯಿಂದಲೇ (Tourist boat crew) ಪ್ರವಾಸಿಗರ ಮೇಲೆ ಹಲ್ಲೆ (Attack on tourists) ನಡೆದಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಲ್ಲದೆ, ಹಲ್ಲೆ ವಿಡಿಯೊ ವೈರಲ್‌ (Video Viral) ಆಗಿದೆ.

ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ, ಯಾವ ವಿಷಯಕ್ಕೆ ಹಲ್ಲೆ ಮಾಡಲಾಗಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ಪ್ರವಾಸಿಗರನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆದಿರುವ ದೃಶ್ಯ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೀಚ್‌ನಲ್ಲಿ ಪ್ರವಾಸಿಗರು ಹೋಗುವಾಗ ಅವರ ಮೇಲೆ ದಾಳಿ ನಡೆಸಿದ ಟೂರಿಸ್ಟ್ ಬೋಟ್ ಸಿಬ್ಬಂದಿ ಏಕಾಏಕಿ ಹೊಡೆಯಲು ಶುರು ಮಾಡಿದ್ದಾರೆ. ಹಲ್ಲೆಕೋರರಿಂದ ತಪ್ಪಿಸಿಕೊಳ್ಳಲು ಈ ಪ್ರವಾಸಿಗರು ಹರಸಾಹಸಪಟ್ಟಿದ್ದಾರೆ. ಬುಧವಾರ (ನ.14) ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾವಿರಾರು‌ ಪ್ರವಾಸಿಗರಿದ್ದ ವೇಳೆಯೇ ನೈತಿಕ ಪೊಲೀಸ್‌ಗಿರಿ ನಡೆಸಿರುವುದರ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಅಲ್ಲದೆ, ಈ ಬಗ್ಗೆ ಪೊಲೀಸ್‌ ಕೇಸ್‌ ದಾಖಲಾದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹಲ್ಲೆ ಮಾಡಿದವರು ಟೂರಿಸ್ಟ್ ಬೋಟ್ ಸಿಬ್ಬಂದಿಯಾಗಿದ್ದರಿಂದ ಬೋಟ್‌ ವಿಚಾರವಾಗಿ ಇವರುಗಳ ಮಧ್ಯೆ ಯಾವುದಾದರೂ ತಕರಾರುಗಳು ನಡೆದಿದ್ದವೇ? ಇಲ್ಲವೇ ಗಲಾಟೆ ಮಾಡಿಕೊಂಡು ಬರಲಾಗಿದೆಯೇ? ಈ ಕಾರಣಕ್ಕಾಗಿ ಅವರು ಎಲ್ಲರೂ ಒಟ್ಟಾಗಿ ಬಂದು ಹೊಡೆದಿದ್ದಾರೆಯೇ? ಎಂಬುದು ಗೊತ್ತಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version