Site icon Vistara News

Quality Testing | ಬೆಂಗಳೂರು ಫ್ಲೈಓವರ್‌ಗಳ ಗುಣಮಟ್ಟ ಪರೀಕ್ಷೆಗೆ ಮುಂದಾದ ಬಿಬಿಎಂಪಿ

Quality Testing flyover

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಸಾಲು ಸಾಲು ಫ್ಲೈಓವರ್‌ಗಳ ದುರಸ್ತಿಯಿಂದ ಸಾರ್ವಜನಿಕರು ಕಂಗಾಲಾಗಿದ್ದರು. ನಗರದ ಫ್ಲೈಓವರ್‌ಗಳು ಎಷ್ಟು ಸುರಕ್ಷಿತ (Quality Testing) ಎಂಬ ಪ್ರಶ್ನೆ ಉದ್ಭವಿಸಿದ್ದವು. ಇದಕ್ಕೆ ಕಾರಣ ಸುಮನಹಳ್ಳಿ ಫ್ಲೈಓವರ್‌ನಲ್ಲಿ ಕಳಪೆ ಕಾಮಗಾರಿಯಿಂದಾಗಿ ಬಿರುಕು ಕಾಣಿಸಿಕೊಂಡಿತ್ತು. ಜತೆಗೆ ಮೈಸೂರು ರಸ್ತೆಯ ಶಿರಸಿ ಸರ್ಕಲ್‌ನಲ್ಲಿರುವ ಫ್ಲೈಓವರ್‌ನ ಪಿಲ್ಲರ್‌ನಲ್ಲಿ ಬಿರುಕು ಕಂಡು ಬಂದಿತ್ತು.

ಈ ಹಿನ್ನೆಲೆಯಲ್ಲಿ ಮುಂದೆ ಸಂಭವಿಸುವ ಅನಾಹುತವನ್ನು ತಡೆಯಲು ಪಾಲಿಕೆಯ ಅಧಿಕಾರಿಗಳು ಮೊದಲೇ ಎಚ್ಚೆತ್ತುಕೊಂಡು ಪಾಲಿಕೆ ವ್ಯಾಪ್ತಿಯ ಫ್ಲೈಓವರ್‌ಗಳು ಬಳಕೆ ಮಾಡುವಂತೆ ಇದೆಯೇ? ಎಷ್ಟು ಸುರಕ್ಷಿತವಾಗಿವೆ? ಎಂಬುದರ ಕುರಿತಾದ ಗುಣಮಟ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ.

ಫ್ಲೈಓವರ್ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ತೀರ್ಮಾನಿಸಿದ್ದು, 42 ಫ್ಲೈಓವರ್‌ಗಳ ಬ್ರಿಡ್ಜ್ ಸೇಫ್ಟಿ ಆಡಿಟ್ ಹಾಗೂ ರೋಡ್ ಸೇಫ್ಟಿ ಆಡಿಟ್ ಮಾಡಲು ಮುಂದಾಗುತ್ತಿದೆ. ನಗರದ ಕೆ.ಆರ್.ಮಾರ್ಕೆಟ್, ಸುಮನಹಳ್ಳಿ, ಗೊರಗುಂಟೆಪಾಳ್ಯ, ರಾಜಾಜಿನಗರ ಬ್ರಿಡ್ಜ್ ಸೇರಿ 42 ಕಡೆಗಳಲ್ಲಿ IISC ಗೈಡ್‌ಲೈನ್ಸ್ ಪ್ರಕಾರ ಆಡಿಟ್‌ ಮಾಡಲು ಸಿದ್ಧತೆ ನಡೆದಿದೆ.

ಬಿಬಿಎಂಪಿಯ ಎಲ್ಲ ಚೀಫ್ ಇಂಜಿನಿಯರ್‌ಗಳು ಸೇರಿ ಆಡಿಟ್ ಮಾಡಲು ತಯಾರಿ ನಡೆದಿದೆ. ಪ್ರಮುಖವಾಗಿ ಬ್ರಿಡ್ಜ್ ಸೇಫ್ಟಿ ಆಡಿಟ್‌ನಲ್ಲಿ ಬೇರಿಂಗ್ಸ್, ಎಕ್ಸ್‌ಪೆನ್ಷನ್ ಜಾಯಿಂಟ್, ಕಾಂಕ್ರಿಟ್, ಡ್ರೈನೇಜ್ , ಲೈಟಿಂಗ್ ಕುರಿತು ಪರೀಕ್ಷೆ ಮಾಡಲಾಗುತ್ತದೆ. ಬಳಿಕ ರೋಡ್ ಸೇಫ್ಟಿ ಆಡಿಟ್‌ನಲ್ಲಿ ಬ್ಲಾಕ್ ಸ್ಪಾಟ್, ಆಕ್ಸಿಡೆಂಟ್ ಸ್ಪಾಟ್‌‌ಗಳ ಬಗ್ಗೆ ಆಡಿಟ್ ಮಾಡಲಾಗುತ್ತದೆ.

ಇದನ್ನೂ ಓದಿ | ಪೊಲೀಸರಿಗೆ ಹೆದರಬೇಡಿ, ಅಗತ್ಯ ಬಿದ್ದರೆ ಅವರ ಮೇಲೆ ಬಾಂಬ್​ ಹಾಕಿ; ಕಾರ್ಯಕರ್ತರಿಗೆ ಕರೆಕೊಟ್ಟ ಕಾಂಗ್ರೆಸ್​ ನಾಯಕಿ

Exit mobile version