Site icon Vistara News

RV Deshpande : ಅಜಾತಶತ್ರು ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆಗೆ ಅತ್ಯುತ್ತಮ ಶಾಸಕ ಪ್ರಶಸ್ತಿ; ಸ್ಥಳೀಯರಿಂದ ಅಭಿನಂದನೆ

R V Deshpande best MLA Felicitation Program

ಹಳಿಯಾಳ: ಎಂಟು ಬಾರಿ ಶಾಸಕರಾಗಿ 40 ವರ್ಷ ಸುದೀರ್ಘ ರಾಜಕೀಯದಲ್ಲಿ ಸಕ್ರಿಯರಾಗಿ ಹೆಸರು ಗಳಿಸಿರುವ ಅಜಾತಶತ್ರು, ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ (RV Deshpande) ಅವರಿಗೆ 2022ರ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಲಭಿಸಿದ ಅಂಗವಾಗಿ ಹಳಿಯಾಳ ಪಟ್ಟಣದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಯಿತು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲೆಯ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಣ್ಣ ನಾಯಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಾಸಕರಿಗೆ ಅಭಿನಂದಿಸುವ ಕಾರ್ಯಕ್ರಮವನ್ನು ಕಣ್ಣು ತುಂಬಿಕೊಳ್ಳಲು ಬಂದಿದ್ದೇನೆ. ಈ ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ರಾಜಕೀಯ ಗುರುವಾಗಿದ್ದ ಇವರಿಗೆ ಅತ್ಯುನ್ನತ ಶಾಸಕ ಪ್ರಶಸ್ತಿ ಹಳಿಯಾಳ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಆಗಿದ್ದು ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರ್.ವಿ. ದೇಶಪಾಂಡೆ, ನನಗೆ ಸರ್ಕಾರ ಕೊಟ್ಟಿರುವ ಅತ್ಯುತ್ತಮ ಶಾಸಕ ಪ್ರಶಸ್ತಿ ತಮ್ಮೆಲ್ಲರದ್ದು. ಯಾವತ್ತು ನನ್ನ ಕ್ಷೇತ್ರದ ಮತದಾರರಿಗೆ ಅಭಿನಂದಿಸುತ್ತೇನೆ. ನನ್ನ ಮತ ಅಭಿವೃದ್ಧಿಯತ್ತ ಎನ್ನುವ ಮಂತ್ರವನ್ನು ಜಪಿಸಿದರು.

ಇದನ್ನೂ ಓದಿ | KR Market Flyover: ಕೆ.ಆರ್‌. ಮಾರುಕಟ್ಟೆಯಲ್ಲಿ ಸೂಟ್‌ ಧರಿಸಿ ಹಣ ಎಸೆದವನು ಖಾಕಿ ಕಂಡೊಡನೆ ಪರಾರಿ!

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ್ ಹಾಗೂ ಕೆಪಿಸಿಸಿ ಸದಸ್ಯ ಸುಭಾಷ್ ಕೊರವೇಕರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸಂತೋಷ್ ರೇಣಕೆ ಹಾಗೂ ಪುರಸಭೆಯ ಅಧ್ಯಕ್ಷರಾದ ಅಜರ ಬಸರಿಕಟ್ಟಿ ಎಲ್ಲ ಸದಸ್ಯರು ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಶಾಸಕರಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು. ಸಮಾರಂಭದಲ್ಲಿ ದೇಶಪಾಂಡೆ ಅವರ ಪತ್ನಿ ರಾಧಾಬಾಯಿ ದೇಶಪಾಂಡೆ ಹಾಗೂ ಮಕ್ಕಳಾದ ಪ್ರಸಾದ್ ದೇಶಪಾಂಡೆ ಉಪಸ್ಥಿತರಿದ್ದರು.

Exit mobile version